ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡತನದಿಂದ ಬೇಸತ್ತು ಮಗುವನ್ನು ಮಾರಿದ ತಾಯಿ!

|
Google Oneindia Kannada News

ಚಿಕ್ಕಬಳ್ಳಾಪುರ, ನ.4 : ಬಡತನದಿಂದ ಕಂಗೆಟ್ಟ ತಾಯಿಯೊಬ್ಬಳು ಗಂಡು ಮಗುವನ್ನು 50 ಸಾವಿರ ರೂ.ಗಳಿಗೆ ಮಾರಾಟ ಮಾಡಿರುವ ಪ್ರಕರಣದ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪೊಲೀಸರು ಪ್ರಕರಣದ ದಾಖಲಿಸಿಕೊಂಡು, ಮಗುವನ್ನು ಹುಡುಕಿ ತಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮುನೇಗೌಡ ಅವರ ಪತ್ನಿ ಗಾಯತ್ರಿ (35) ಅ.28ರಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿನಗೆ ಜನ್ಮ ನೀಡಿದ್ದರು. ಮೊದಲು ಗಾಯತ್ರಿಗೆ ಒಂದು ಹೆಣ್ಣು ಮತ್ತು ಒಂದು ಗುಂಡು ಮಗುವಿತ್ತು. ಆದ್ದರಿಂದ ಮತ್ತೊಂದು ಮಗುವನ್ನು ಸಾಕುವುದು ಕಷ್ಟ ಎಂದು ಅದನ್ನು 50 ಸಾವಿರ ರೂ.ಗಳಿಗೆ ಮಂಚಿನಬೆಲೆಯ ದಂಪತಿಗಳಿಗೆ ಮಾರಾಟ ಮಾಡಿದ್ದಾರೆ. [2 ಲಕ್ಷಕ್ಕೆ ಬೆಳಗಾವಿ ಮಗು ರಾಜಸ್ಥಾನದಲ್ಲಿ ಮಾರಾಟ]

Chikballapur

ಅ.29ರಂದು ಆಸ್ಪತ್ರೆ ಸಿಬ್ಬಂದಿ ಮಗುವಿನ ಬಗ್ಗೆ ವಿಚಾರಿಸಿದಾಗ ಇಬ್ಬರು ಮಹಿಳೆಯರು ನನ್ನ ಮಗುವನ್ನು ಅಪಹರಣ ಮಾಡಿದ್ದಾರೆ. ನನಗೆ ಪೊಲೀಸರಿಗೆ ದೂರು ನೀಡುವುದು ಹೇಗೆ ಎಂದು ತಿಳಿದಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ಆಸ್ಪತ್ರೆಯವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. [ಕಡು ಬಡತನ, ಕಂದಮ್ಮನನ್ನೇ ಮಾರಿದ ತಾಯಿ!]

ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಗಾಯತ್ರಿ ಅವರನ್ನು ವಿಚಾರಣೆ ನಡೆಸಿದಾಗ ಮಗುವನ್ನು ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಮಂಚಿನಬೆಲೆಯ ದಂಪತಿಗೆ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ.

ತಕ್ಷಣ ಮಂಚಿನಬೆಲೆಗೆ ತೆರಳಿದ ಪೊಲೀಸರು ಮಗುವನ್ನು ಹುಡುಕಿ ತಂದಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮಗುವನ್ನು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಮಗು ಮಾರಾಟ ಮಾಡಿದ ಗಾಯಿತ್ರಿ ಮತ್ತು ಕೊಂಡವರ ವಿರುದ್ಧ ತನಿಖೆ ನಡೆಯುತ್ತಿದೆ.

English summary
A woman allegedly sold her two-day-old male baby to a couple for Rs 50,000, unable to take care of the baby due to poverty. Chikballapur resident Gayathri (35) wife of Munegowda, sold the baby on Saturday after taking money from a couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X