ಹಾಸನ: 3 ಮಕ್ಕಳೊಂದಿಗೆ ಕೆರೆಗೆ ಹಾರಿದ ಮಹಿಳೆ
ಹಾಸನ. ಆಗಸ್ಟ್, 31 : ದೇಶದಾದ್ಯಂತ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ಬದುಕಿನ ನೋವು, ದುಃಖ-ದುಮ್ಮಾನಗಳಿಗೆ ಬೇಸತ್ತ ಜನರು ಸಾವು ಮಾತ್ರ ಪರಿಹಾರ ಎಂದು ಭಾವಿಸಿದಂತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಅರಸಿಕೆರೆ ತಾಲೂಕಿನ ಮೂವತ್ತೈದು ವರ್ಷದ ಮಹಿಳೆ ಇಂದ್ರಮ್ಮ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಾರುಣ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. [ಹಾಸನ ಜಿಲ್ಲೆ ರೈತರಿಗಾಗಿ ಸಹಾಯವಾಣಿ ಆರಂಭ]

ಬೈರಮುಡಿ ತಾಲೂಕಿನ ಕೆರೆ ಹತ್ತಿರ ತೆರಳಿದ ಇಂದ್ರಮ್ಮ ತಮ್ಮ ಮೂವರು ಗಂಡು ಮಕ್ಕಳೊಂದಿಗೆ ಭಾನುವಾರ ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಬೆಂಗಳೂರು: ಅಪಾರ್ಟ್ ಮೆಂಟ್‌ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆ]
ಇಂದ್ರಮ್ಮ ತಮ್ಮ ಮಕ್ಕಳಾದ ರಕ್ಷಿತ್, ಕೇಶವ್ ಮತ್ತು ಇನ್ನೊಂದು ಸಣ್ಣ ಮಗು ಸೇರಿದಂತೆ ಮೂವರು ಗಂಡು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ.
ಇಂದ್ರಮ್ಮ ಅವರ ಸಾವಿನ ಕುರಿತಾಗಿ ಹಲವಾರು ಸಂಶಯಗಳು ಭುಗಿಲೆದ್ದಿದ್ದು, ಅರಸಿಕೆರೆ ತಾಲೂಕಿನ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಇದುವರೆಗೂ ಸಾವಿನ ಕುರಿತಾಗಿ ಯಾವುದೇ ಮಾಹಿತಿ ತಿಳಿದು ಬರದ ಕಾರಣ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.












Click it and Unblock the Notifications