ಗುಡಿಬಂಡೆ : ಹಣ ಕಳೆದುಕೊಂಡ ನೋವಿನಲ್ಲಿ ಮಹಿಳೆ ನೇಣಿಗೆ ಶರಣು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಿಕ್ಕಬಳ್ಳಾಪುರ, ನವೆಂಬರ್. 14: ಐನೂರು ಸಾವಿರ ರುಗಳ ಬ್ಯಾನ್ ನಿಂದಾಗಿ ಖಾತೆಗೆ ಹಣ ಜಮ ಮಾಡಲು ಕ್ಯೂನಲ್ಲಿ ನಿಂತಿದ್ದ ಮಹಿಳೆ 25000 ರು. ಹಣವನ್ನು ಕಳೆದುಕೊಂಡಿದ್ದಾಳೆ. ಇದರಿಂದ ಮನನೊಂದಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪೂರ ಜಿಲ್ಲೆಯ ಚಂಡೂರು ಗ್ರಾಮದಲ್ಲಿ ನಡೆದಿದೆ.

ಈಶ್ವರಮ್ಮ (43)ನೇಣು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನವೆಂಬರ್ 11 ರಂದು ಈಕೆ ತನ್ನ ಬಳಿ ಇದ್ದ 25 ಸಾವಿರ ರುಗಳನ್ನು ತನ್ನ ಖಾತೆಗೆ ಜಮ ಮಾಡಲೆಂದು ಗುಡಿಬಂಡೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಗೆ ತೆರಳಿದ್ದಾರೆ. ಜನ ದಟ್ಟಣೆಯಲ್ಲಿ ಕ್ಯೂನಿಂತಿರುವ ವೇಳೆ ಹಣ ಕಳೆದುಕೊಂಡಿದ್ದಾಳೆ. ಇದರಿಂದ ಮನನೊಂದ ಈಶ್ವರಮ್ಮ ಮನೆಗೆ ಬಂದು ಭಾನುವಾರ ನೇಣಿಗೆ ಶರಣಾಗಿದ್ದಾಳೆ.

woman committed suicide in chikkaballapur

ಈಶ್ವರಮ್ಮ ಅವರಿಗೆ ಗ್ರಾಮ ಪಂಚಾಯತ್ ನಿಂದ ಆಶ್ರಯ ಮನೆ ಮಂಜೂರಾಗಿತ್ತು. ಇದರಿಂದ ಗ್ರಾ.ಪಂಯಿಂದ 25000 ರು ಚೆಕ್ ನೀಡಿದ್ದಾರೆ. ಈ ಚೆಕ್ ತೆಗೆದುಕೊಂಡು ಇತ್ತೀಚೆಗೆ ಬ್ಯಾಕ್ ನಲ್ಲಿ ಹಣವನ್ನು ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಕೊಂಡಿದ್ದರು.

ಆದರೆ, ಐನೂರು ಮತ್ತು ಸಾವಿರ ನೋಡುಗಳನ್ನು ರದ್ದು ಮಾಡಿದ್ದರಿಂದ ಆ ಹಣವನ್ನು ತಮ್ಮ ಖಾತೆಗೆ ಜಮ ಮಾಡಲು ಹೋಗಿದ್ದಾಳೆ. ಆ ಸಂದರ್ಭದಲ್ಲಿ ಹಣ ಕಳೆದುಕೊಂಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
43 year-old A woman in Chikkaballapur district Gudibanda taluk Chanduru committed suicide by hanging on Sunday November 13. Eshwaramma loses 25 thousad rs money.
Please Wait while comments are loading...