ಒತ್ತಡದ ಮಧ್ಯೆ ಸಿದ್ಧರಾಮಯ್ಯ 12ನೇ ಬಜೆಟ್ ಮಂಡನೆ

Subscribe to Oneindia Kannada

ಬೆಂಗಳೂರು, ಮಾರ್ಚ್ 15: ಭಾರೀ ಒತ್ತಡದ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 12ನೇ ಬಜೆಟ್ ಮಂಡಿಸಲಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ಕೈಯಲ್ಲಿರುವ ಕೊನೆಯ ಅಸ್ತ್ರ ಇದಾಗಿದೆ. ಪಂಜಾಬ್ ಬಿಟ್ಟರೆ ಕಾಂಗ್ರೆಸ್ ಕೈಯಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ ಮಾತ್ರ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಜೆಟ್ ಮ್ಯಾಜಿಕ್ ಅಗತ್ಯವಾಗಿದೆ.[ಕರ್ನಾಟಕ ಬಜೆಟ್ 2017 ಮಂಡನೆಗೆ ಕ್ಷಣಗಣನೆ]

With a huge pressure CM Siddaramaiah present his 2017-18 budget

ಅಧಿಕಾರ ಉಳಿಸಿಕೊಳ್ಳುವ ಒತ್ತಡ, ಜನಪ್ರಿಯ ಘೋಷಣೆಗಳನ್ನು ನೀಡಬೇಕಾದ ಅನಿವಾರ್ಯತೆಯ ಮಧ್ಯೆ ಮುಖ್ಯಮಂತ್ರಿ ಬಜೆಟ್ ಮಂಡಿಸುತ್ತಿದ್ದಾರೆ.[ಬಜೆಟ್ LIVE: ರೈತರ ಸಾಲ ಮನ್ನಾ ಇಲ್ಲ, ಎಣ್ಣೆ ಬೆಲೆ ಇಳಿದಿಲ್ಲ]

ರೈತರ ಸಾಲ ಮನ್ನಾ, 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ, ಕಾಂಗ್ರೆಸ್ ಓಟ್ ಬ್ಯಾಂಕ್ ಅಹಿಂದ ವರ್ಗಗಳಿಗೆ ಭರಪೂರ ಕೊಡುಗೆಗಳನ್ನು ಬಜೆಟಿನಲ್ಲಿ ನೀಡುವ ಸಾಧ್ಯತೆ ಇದೆ. ಜತೆಗೆ ನಿರುದ್ಯೋಗಿ ಯುವಕರು ಮತ್ತು ವಿದ್ಯಾರ್ಥಿಗಳಿಗೂ ಒಂದಷ್ಟು ಕೊಡುಗೆಗಳು ಬಜೆಟಿನಲ್ಲಿ ಸಿಗಬಹುದು.[ಬಜೆಟ್ ಕುರಿತು ಮುಖ್ಯಮಂತ್ರಿ ಟ್ವೀಟ್ ನಲ್ಲೇನಿದೆ?]

ಸಾಮಾನ್ಯವಾಗಿ ಜನಪ್ರಿಯ ಘೋಷಣೆಗಳ ಅದರಲ್ಲೂ ರೈತರ 11,000 ಕೋಟಿ ಸಾಲ ಮನ್ನಾ ಮಾಡಿದ್ದೇ ಆದಲ್ಲಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕವಾಗಿ ಭಾರಿ ಹೊರೆಯಾಗಲಿದೆ. ಇದನ್ನು ಸಿದ್ದರಾಮಯ್ಯ ಹೇಗೆ ಸರಿದೂಗಿಸುತ್ತಾರೆ ಎಂಬುದೇ ಕುತೂಹಲ ಹುಟ್ಟಿಸಿದೆ.[ಬಜೆಟ್ 2017: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2000 ಪಿಂಚಣಿ]

ಈಗಾಗಲೇ ಸಿದ್ದರಾಮಯ್ಯ ಸರಕಾರ ಕಳೆದ 4 ವರ್ಷಗಳಲ್ಲಿ 93,500 ಕೋಟಿ ಸಾಲ ತೆಗೆದಿದ್ದು ಇದೀಗ ಮತ್ತೆ ಜನಪ್ರಿಯ ಘೋಷಣೆಗಳ ಮೊರೆ ಹೋದರೆ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೆಚ್ಚಾಗುವ ಅಪಾಯವಿದೆ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ಲೇಷಿಸಿದ್ದಾರೆ.[ಬಜೆಟ್ 2017: ಬಳ್ಳಾರಿ ಜಿಲ್ಲೆಯಲ್ಲಿ ಕುರಿ ಸಂವರ್ಧನಾ ಕೇಂದ್ರ]

ಒಟ್ಟಾರೆ ಸಿದ್ದರಾಮಯ್ಯನವರ 2017-18ನೇ ಸಾಲಿನ ಬಜೆಟ್ ಕುತೂಹಲ ಹುಟ್ಟಿಸಿದೆ.[ಹಾಸನ, ಚಾಮರಾಜ ನಗರ, ಯಾದಗಿರಿಯಲ್ಲಿ ಡಿಪ್ಲೊಮಾ ಕಾಲೇಜು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief minister Siddaramaiah will present his 12th budget in assembly session. Faced with the challenge of winning the 2018 Assembly election, Siddaramaiah is all set to dole out goodies, especially for farmers, and Congress strong vote bank ‘Ahinda’ section.
Please Wait while comments are loading...