RCB Final Match: ಅಭಿಮಾನಿಗಳ ಮನವಿಯಂತೆ ಸಾರ್ವತ್ರಿಕ ರಜೆ ಘೋಷಿಸ್ತಾರಾ...
ಬೆಂಗಳೂರು, ಜೂನ್ 02: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅಭಿಮಾನಿಗಳು 18 ವರ್ಷಗಳ ಕಾಯುವಿಕೆ ದಿನ ಹತ್ತಿರವಾಗಿದೆ. ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳು 18 ವರ್ಷಗಳಿಂದ ಕಾದುಕುಳಿತಿದ್ದು,. ಪ್ರತಿ ಬಾರಿಯ ಐಪಿಎಲ್ ಶುರುವಾದಾಗ್ಲೂ, ಈ ಸಲ ಕಪ್ ನಮ್ದೇ ನಮ್ದೇ ಅಂತಿದ್ದರು. ಈ ಸಲ ಕಪ್ ನಮ್ದೆ ಎಂದು ಸ್ಲೋಗನ್ ಕೂಗುತ್ತಾ. ಹಾಡು ಹಾಡಿ, ಡ್ಯಾನ್ಸ್ ಮಾಡಿ ತಂಡಕ್ಕೆ ಜೋಶ್ ತುಂಬುತ್ತಿದ್ದರು. ಇದೀಗ, ಈ ಕಪ್ ಗೆಲುವಿನ ಕನಸು ನಿಜಕ್ಕೂ ನನಸಾಗುತ್ತೆ ಎಂದು ಕೋಟ್ಯಾಂತರ ಅಭಿಮಾನಿಗಳು ವಿಶ್ವಾಸವನ್ನ ಇಟ್ಟುಕೊಂಡಿದ್ದಾರೆ.
ಸೀಸನ್-18ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಪಂಚ್ ನೀಡಿ ಫೈನಲ್ಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಡುವ ನಿರೀಕ್ಷೆ ಹೆಚ್ಚಿಸಿದೆ. ಬರೋಬ್ಬರಿ 18 ಸೀಸನ್ಗಳಿಂದ ಮೂರು ಬಾರಿ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿರುವ ಆರ್ಸಿಬಿ, ಒಮ್ಮೆಯೂ ಟ್ರೋಫಿ ಗೆಲ್ಲುವ ಕನಸು ಈಡೇರಿಸಿಕೊಳ್ಳಲಿಲ್ಲ. 2009ರ ಐಪಿಎಲ್ ಸೀಸನ್ನಲ್ಲೇ ಕಪ್ ಗೆಲ್ಲುವ ಅವಕಾಶ ಹೊಂದಿದ್ದ ಅನಿಲ್ ಕುಂಬ್ಳೆ ನಾಯಕತ್ವದ ಆರ್ಸಿಬಿ, ಅಂದುಮುಗ್ಗರಿಸಿ ಟ್ರೋಫಿ ಕೈಚೆಲ್ಲಿತ್ತು.

ಪ್ರಸಕ್ತ ಸೀಸನ್ನಲ್ಲಿ ಫೈನಲ್ಗೆ ಎಂಟ್ರಿ ನೀಡಿರುವ ಆರ್ಸಿಬಿ, ಅದೃಷ್ಟದ ಲೆಕ್ಕಾಚಾರದಲ್ಲಿ ಪ್ರತಿ ಮ್ಯಾಚ್, ಪ್ರತಿ ಕಂಡೀಷನ್ಸ್ನಲ್ಲಿ ಅದ್ಭುತ ಆಟವಾಡಿದೆ. ಈಗಾಗಲೇ ಆರ್‌ಸಿಬಿ ಗೆಲುವು ಸಹಿಹದಲ್ಲಿದೆ ಎಂದು ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪ್ಲೇ ಆಫ್ನಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶಿಸಿದೆ. ಈ ನಡುವೆಯೇ ಆರ್ಸಿಬಿ ಅಭಿಮಾನಿಯೊಬ್ಬ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿಯೊಂದನ್ನ ಮಾಡಿದ್ದರು. ಆ ಮನವಿಯಂತೆ ಸಿದ್ದರಾಮಯ್ಯ ಅವರು ಸಾರ್ವತ್ರಿಕ ರಜೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಪತ್ರದ ಮೂಲಕ ಬೇಡಿಕೆಯೊಂದನ್ನ ಇಟ್ಟಿದ್ದಾರೆ. ಈ ಪತ್ರದಲ್ಲಿ ರಾಜ್ಯೋತ್ಸವದ ರೀತಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ವಿಶೇಷ ಮನವಿಯನ್ನ ಮಾಡಿದ್ದಾರೆ. ಆರ್‌ಸಿಬಿ ಕಪ್ ಗೆದ್ದರೆ ಆದ ದಿನವನ್ನ ʻಆರ್‌ಸಿಬಿ ಫ್ಯಾನ್ಸ್ ಹಬ್ಬʼದ ದಿನನ್ನಾಗಿ ಘೋಷಿಸಿ. ಜೊತೆಗೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವತ್ರಿಕ ರಜೆ ಘೋಷಣೆ ಮಾಡುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.
ನಾಳೆ(ಜೂನ್ 03) ಫೈನಲ್ ಮ್ಯಾಚ್ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬೆಂಗಳೂರಿನಿಂದ ಇಲ್ಲಿಗೆ ಫ್ಲೈಟ್ ಟಿಕೆಟ್ ದರ ದುಪ್ಪಾಟ್ಟಾಗಿದೆ. ಇತ್ತ ಆರ್‌ಸಿಬಿ ಈ ಸಲ ಕಪ್ ಗೆದ್ರೆ ರಾಜ್ಯದಲ್ಲಿ ಸಂಭ್ರಮಾಚರಣೆ ಜೋರಾಗಿರುತ್ತದೆ. ಈಗಾಗಲೇ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಆರ್‌ಸಿಬಿ ಹೆಸರಿನಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲೂ ಸಹ ಬಿಗಿ ಭದ್ರತೆಯನ್ನ ನೀಡಬೇಕಾದ ಅನಿನಿವಾರ್ಯತೆ ಹೆಚ್ಚಾಗಿದೆ.












Click it and Unblock the Notifications