ಚುನಾವಣಾ ತಯಾರಿಯಲ್ಲಿದ್ದ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್ ಬಿಗ್ ಶಾಕ್: ಸ್ವಾಮೀಜಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 04: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ನಿಟ್ಟಿನಲ್ಲಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಇತ್ತ ಡಾ. ರಾಜ್ ಕುಮಾರ್ ಅವರ ಹಿರಿಯ ಸೊಸೆ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಸ್ಪರ್ಧೆಗೆ ತಯಾರಿಗೆ ನಡೆಸುತ್ತಿದ್ದು, ಇದೀಗ ಬಿಗ್ ಶಾಕ್ ಎದುರಾಗಿದೆ.
ಹೌದು, ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಿಂದ ಸ್ಪರ್ಧೆ ನಡೆಸಿದ್ದ ಗೀತಾ ಶಿವರಾಜ್ ಕುಮಾರ್, ಇದೀಗ ಕಾಂಗ್ರೆಸ್ ನಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ತಯಾರಿ ನಡೆಸುತ್ತಿರುವಾಗ ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಸ್ವಾಮೀಜಿ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ದರಿಂದ ಗೀತಾ ಅವರಿಗೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ರಾಜ್ಯ ರಾಜಕೀಯದಲ್ಲಿ ಚರ್ಚೆ ಶುರುವಾಗಿದೆ.

ಈ ಕುರಿತು ಭಾನುವಾರ ಕಾರವಾದರದಲ್ಲಿ ಮಾತನಾಡಿದ ಈಡಿಗ ಸಮುದಾಯದ ಸ್ವಾಮಿಜಿ ಪ್ರಣವಾನಂದ ಶ್ರೀ , ದಿವಂಗತ ಡಾ. ರಾಜಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಸಿಕ್ಕರೂ ಅದನ್ನು ಒಪ್ಪಲಿಲ್ಲ. ದೊಡ್ಡ ಅವಕಾಶ ಬಂದ್ರು ಡಾ . ರಾಜಕುಮಾರ್ ರಾಜಕಾರಣಕ್ಕೆ ಹೋಗಿಲ್ಲ. ಅವರ ಕುಟುಂಬವೂ ರಾಜಕಾಣಕ್ಕೆ ಬರಬಾರದು. ಅವರಂತೆ ಇರಬೇಕು ಎಂಬಯದೇ ನನ್ನ ಭಾವನೆ ಎಂದು ಹೇಳಿದರು.
ನಾನು ಸಿಕ್ಸ್ ಹೊಡೆದಿಲ್ಲ ನನ್ನ ಕೈ ಹೊಡೆದಿದೆ ಎಂದು ಸಚಿನ್ ಹೇಳುತ್ತಾರೆ. ಕ್ರಿಕೆಟಿಗ ಸಚಿನ ತೆಂಡೂಲ್ಕರ್ ಹೇಳಿಕೆ ನೀಡಿದಂತೆ ಶಿವರಾಜ್ ಕುಮಾರ್ ಹೇಳಿಕೆ ಕೊಡ್ತಾರೆ. ರಾಜಕೀಯ ವಿಚಾರದಲ್ಲೂ ನಟರಾದ ಶಿವರಾಜ್ ಕುಮಾರ್ ಅದೇ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತ ಬೆಂಬಲ ಕೊಡಲ್ಲ ಎಂದು ಹೇಳುವ ಮೂಲಕ ಈಡಿಗ ಸಮುದಾಯದ ಬೆಂಬಲ ಸಿಗುತ್ತಾ ಎನ್ನುವ ಪ್ರಶ್ನೆಗೆ ಉದ್ಭವಿಸಿದೆ.
ಇನ್ನೂ ಪತ್ನಿ ಗೀತಾ ಶಿವಕುಮಾರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ನನ್ನ ಪತ್ನಿ ಸಂಸದೆ ಆಗುವುದನ್ನು ನೋಡುವ ಆಸೆಯಿದೆ ಎಂದು ಹೇಳಿದ್ದರು. ಅದಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೂಡ ಶಿವರಾಜ್ ಕುಮಾರ್ ಹೊಗಳಿದ್ದರು. ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಮೂಲಕ ಚುನಾವಣೆ ಕಣವನ್ನು ಸಿದ್ಧಗೊಳಿಸುವ ಪ್ರಯತ್ನವನ್ನು ಶಿವರಾಜ್ ಕುಮಾರ್ ಮಾಡಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications