ಕಾಂಗ್ರೆಸ್ ಸಂಪುಟ ಪುನಾರಚನೆ ಫಿಕ್ಸ್; ನಮಗೂ ಶೀಘ್ರದಲ್ಲೇ ಅವಕಾಶ ಸಿಗುತ್ತೆ ಎಂದ ಶಾಸಕ
ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಸಾಕಷ್ಟು ಜನ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸಂಪುರ ಪುನಾರಚನೆ ಎಂಬ ಚರ್ಚೆ ಜೋರಾಗಿದೆ.
ಹೌದು, ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, ನಮಗೂ ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಅವಕಾಶ ಸಿಗುತ್ತದೆ. ಮತ್ತೆ ಯಾವುದೇ ವಿಚಾರ ನಾನು ಮಾತನಾಡಲ್ಲ. ಶಾಸಕರು ಈ ಬಗ್ಗೆ ಹೇಳಿ ಹೇಳಿಯೇ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹ ಮಾತನಾಡಬೇಡಿ ಅಂತ ಹೇಳಿದ್ದಾರೆ ಎಂದು ಹೇಳಿದರು.

ಅಶೋಕ್ ಪಟ್ಟಣ್ ಪಕ್ಷದ ಶಿಸ್ತಿನ ಸಿಪಾಯಿ. ಟೈಮ್ ಬಂದಾಗ ಮಂತ್ರಿ ಆಗುತ್ತೇನೆ, ನಮ್ಮ ಹಣೆಬರಹ ನೋಡಿಕೊಂಡು ಕಾಯುತ್ತಿದ್ದೇವೆ. ಜಾತಕ ಪಕ್ಷಿ ತರ ಸಚಿವ ಸ್ಥಾನ ಸಿಗಬಹುದು ಎಂದು ಕಾಯುತ್ತಿದ್ದೇನೆ. ಸಚಿವ ಸ್ಥಾನ ಸಿಗುವ ಬಗ್ಗೆ ನೂರಕ್ಕೆ ನೂರು ಭರವಸೆ ಇದೆ. ಮಂತ್ರಿ ಮಂಡಲ ವಿಸ್ತರಣೆ ಆಗಲಿ ಆಗದಿರಲಿ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, 135 ಮಂದಿಗೂ ಸಚಿವನಾಗಲು ಆದೆ ಇದೆ. ನಾನು ಹಿರಿಯನಾಗಿರುವುದರಿಂದ ದೊಡ್ಡ ಆಸೆ ಇದೆ












Click it and Unblock the Notifications