ಚಿಕ್ಕಬಳ್ಳಾಪುರ: ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ!

Posted By:
Subscribe to Oneindia Kannada

ಚಿಕ್ಕಬಳ್ಳಾಪುರ. ಜೂನ್ 14 : ಗಂಡ-ಹೆಂಡತಿ ಜಗಳ ಉಂಡು ಮಲಗುವತನಕ ಅನ್ನೋ ಮಾತು ಈಗ ಹಳೆಯದಾಗಿದೆ. ಆದ್ರೆ ಈಗೀಗ ಗಂಡ-ಹೆಂಡತಿ ಜಗಳ ಹೊಸ ರೂಪ ತಾಳಿದೆ. ಕ್ಷುಲ್ಲಕ ವಿಷಯಗಳಿಗೆ ಜಗಳ ಪ್ರಾರಂಭವಾಗಿ ಸಾವಿನಲ್ಲಿ ಅಂತ್ಯಗೊಳ್ಳುತ್ತಿವೆ. ಇದಕ್ಕೆ ನಿದರ್ಶನ ಇಲ್ಲಿದೆ.

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಯಲ್ಲೇ ಮುಖ್ಯಪೇದೆ ಆತ್ಮಹತ್ಯೆ

ತಡರಾತ್ರಿ ಗಂಡ ಹೆಂಡತಿ ನಡುವಿನ ಜಗಳ ಕೊನೆಗೆ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಮಂಗಳವಾರ ತಡರಾತ್ರಿ ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡಿ 27 ವರ್ಷದ ಕೀರ್ತಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Wife commits suicide after clash with husband in Chikkaballapur

ಮಗುವನ್ನು ಕೀರ್ತಿ ಹೊಡೆದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳ ಅರಂಭವಾಗಿದ್ದು, ಈ ವೇಳೆ ನಾನು ತವರು ಮನೆಗೆ ಹೋಗುತ್ತೇನೆ ಅಂತ ಕೀರ್ತಿ ಗಲಾಟೆ ಮಾಡಿಕೊಂಡಳು.

ಕೊನೆಗೆ ಗಲಾಟೆ ವಿಕೋಪಕ್ಕೆ ತಿರುಗಿ ಕೀರ್ತಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಗಂಡ ರಾಜೇಶ್ ಪೊಲೀಸರಿಗೆ ತಿಳಿಸಿದ್ದಾರೆ.

ಮೂಲತಃ ಕೋಲಾರ ನಗರದ ಕೀರ್ತಿ ಹಾಗೂ ಕೆನರಾ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಚಿಕ್ಕಬಳ್ಳಾಪುರ ಮೂಲದ ರಾಜೇಶ್ ಗೆ ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದು, ಒಂದು ವರ್ಷದ ಮುದ್ದಾದ ಗಂಡು ಮಗು ಕೂಡ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
27 year-old woman commits suicide by hanging after clash with husband in her house Prashanth Nagar, chikkaballapur on Tuesday late night.
Please Wait while comments are loading...