ಫೋನ್ ಕದ್ದಾಲಿಕೆ ಆರೋಪ ಮಾಡಿದ ಬಿಎಸ್‌ವೈ, ಸಿದ್ದರಾಮಯ್ಯ ಹೆಸರು ಹೇಳಿದ್ಯಾಕೆ?
ಬೆಂಗಳೂರು, ಆಗಸ್ಟ್ 29: ಯಡಿಯೂರಪ್ಪ ಅವರು ಇಂದು 'ಸರ್ಕಾರ ತಮ್ಮ ಫೋನ್ ಕದ್ದಾಲಿಕೆ' ಮಾಡಲಾಗಿದೆ ಎಂಬ ಆರೋಪ ಮಾಡಿದ್ದಾರೆ. ಆ ಆರೋಪಕ್ಕೆ ವಿಶೇಷ ಪ್ರಾಮುಖ್ಯತೆ ಬಂದಿರುವುದು ಅವರು ಸಿದ್ದರಾಮಯ್ಯ ಅವರ ಕರೆಯೂ ಕ್ರಾಫ್ ಆಗಿದೆ ಎಂದಿದ್ದಕ್ಕೆ.
ಯಡಿಯೂರಪ್ಪ ಅವರು ಇಂದು ಕುಮಾರಸ್ವಾಮಿ ಸರ್ಕಾರ ತಮ್ಮ ಮತ್ತು ಸಿದ್ದರಾಮಯ್ಯ ಅವರ ಫೊನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದರು. ಇದನ್ನು ಸಿಎಂ ಕುಮಾರಸ್ವಾಮಿ ನಿರಾಕಸಿದರು. ವಿಷಯ ಇರುವುದು ಸಿದ್ದರಾಮಯ್ಯ ಅವರ ಕರೆ ಟ್ರಾಫ್ ಆಗುತ್ತಿರುವ ಬಗ್ಗೆ ಯಡಿಯೂರಪ್ಪ ಹೇಳಿದ್ದೇಕೆ ಎಂದು?
ಯಡಿಯೂರಪ್ಪ ಅವರ ಆರೋಪದಿಂದ ರಾಜ್ಯ ರಾಜಕೀಯ ವಲಯದಲ್ಲಿ ಸಣ್ಣ ಗುಸು-ಗುಸು ಒಂದು ಪ್ರಾರಂಭ ಆಗಿದೆ. ಅದೇನೆಂದರೆ ಯಡಿಯೂರಪ್ಪ-ಸಿದ್ದರಾಮಯ್ಯ ಮಧ್ಯೆ ರಾಜಕೀಯ ಚರ್ಚೆ ಪ್ರಾರಂಭವಾಗಿದೆ ಎಂದು.

ಸಿದ್ದರಾಮಯ್ಯ-ಬಿಎಸ್‌ವೈ ನಡುವೆ ರಾಜಕೀಯ ಚರ್ಚೆ
ಈ ಇಬ್ಬರೂ ನಾಯಕರು ರಾಜಕೀಯ ಚರ್ಚೆ ಮಾಡುತ್ತಿದ್ದಾರೆ ಹಾಗಾಗಿ ಕುಮಾರಸ್ವಾಮಿ ಅವರು ಇವರ ಚಲನ -ವಲನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಚರ್ಚಿತವಾಗುತ್ತಿವೆ. ಅದಕ್ಕೆ ಪೂರಕವೆಂಬಂತೆ ಇಬ್ಬರೂ ಪರಸ್ಪರ ಆರೋಪ ಮಾಡುವುದನ್ನು ಕಡಿಮೆ ಮಾಡಿದ್ದಾರೆ.

ಯಡಿಯೂರಪ್ಪ ಚರ್ಚಿಸಲು ಬಯಸುತ್ತಿದ್ದಾರಾ?
ಸಿದ್ದರಾಮಯ್ಯ ಅವರೊಂದಿಗೆ ಯಡಿಯೂರಪ್ಪ ಅವರು ರಾಜಕೀಯ ಚರ್ಚಿಸಲು ಬಯಸುತ್ತಿದ್ದಾರೆ ಆದರೆ ಕರೆ ಕದ್ದಾಲಿಕೆ ಭಯದಿಂದಾಗಿ ಹಿಂದೇಟು ಹಾಕುತಿದ್ದಾರೆ ಎಂಬ ಅರ್ಥವೂ ಯಡಿಯೂರಪ್ಪ ಅವರ ಆರೋಪದ ಹಿಂದಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಸಿದ್ದರಾಮಯ್ಯರ ಹೊಗಳಿದ್ದ ಬಿಎಸ್‌ವೈ
ಕುಮಾರಸ್ವಾಮಿ ಅವರು ಸರ್ಕಾರ ರಚಿಸಿದಾಗ ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರನ್ನು ಹೊಗಳಿ, ಎಚ್‌ಡಿಕೆಯನ್ನು ತೆಗಳಿದ್ದು ಇನ್ನೂ ಸ್ಮೃತಿಪಟಲದಿಂದ ಮರೆಯಾಗಿಲ್ಲ ಈ ನಡುವೆಯೇ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಪರವಾಗಿ ಆರೋಪ ಮಾಡಿರವುದು ಕುತೂಹಲ ಮೂಡಿಸಿದೆ.

ಸಿಎಂ ಪ್ರತಿಕ್ರಿಯೆ ಏನು
ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು, 'ನನಗೆ ಬೇರೆಯವರ ಮಾತು ಕದ್ದಾಲಿಸುವ ಪ್ರಮೇಯವಿಲ್ಲ, ಅವರ ಸರ್ಕಾರದಲ್ಲಿ ಹಾಗಾಗಿರಬಹುದೇನೋ ಎಂದರು. ಈ ಆರೋಪಕ್ಕೆ ಸಾಕ್ಷಿಯನ್ನು ಬಿಎಸ್‌ವೈ ನೀಡಲಿ ಅಥವಾ ಕೇಂದ್ರ ಸರ್ಕಾರದ ಮೂಲಕ ತನಿಖೆ ನಡೆಸಲಿ ಎಂದಿದ್ದಾರೆ.

ನನ್ನ ಫೋನ್ ಕದ್ದಾಲಿಕೆ ಆಗಿಲ್ಲ
ಫೋನ್ ಕದ್ದಾಲಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ಫೋನ್ ಕರೆ ಕದ್ದಾಲಿಕೆ ಆಗಿಲ್ಲ, ಯಾರು ಆರೋಪ ಮಾಡಿದ್ದಾರೆಯೇ ಅವರನ್ನೇ ಆ ಬಗ್ಗೆ ಕೇಳಿ ಎಂದು ಹೇಳಿದ್ದಾರೆ.












Click it and Unblock the Notifications