ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲಿಗೆ ಕಾರಣವೇನು? ಹಳೇ ಆಡಿಯೋದಲ್ಲಿ ಸತ್ಯ ಬಯಲಾಯಿತು!
ಮೈಸೂರು, ಮಾರ್ಚ್ 2: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ಕೂಡಾ ಒಂದು. ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಬೇಕು ಎನ್ನುವ ಕೆಲವರ ಒಗ್ಗಟ್ಟು ಇಲ್ಲಿ ವರ್ಕೌಟ್ ಆಗಿತ್ತು.
ಆದರೆ, ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು ಎನ್ನುವ ಸುಳಿವನ್ನು ಅರಿತ ಸಿದ್ದರಾಮಯ್ಯನವರು ಬಾದಾಮಿಯಲ್ಲೂ ಕಣಕ್ಕಿಳಿದಿದ್ದರು. ಅಲ್ಲಿ ಕೂಡಾ ಪ್ರಯಾಸದಿಂದ ಬಿಜೆಪಿಯ ಶ್ರೀರಾಮುಲು ವಿರುದ್ದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.
ಅದೆಲ್ಲಾ ಈಗ ಇತಿಹಾಸ, ಆದರೆ ಆ ಸೋಲನ್ನು ಸಿದ್ದರಾಮಯ್ಯನವರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ, ಅವರೇ ಈ ವಿಚಾರವನ್ನು ಬಹಿರಂಗವಾಗಿ ಚರ್ಚಿಸಿ ತಮ್ಮ ನೋವನ್ನು ತೋಡಿಕೊಂಡಿದ್ದುಂಟು.
ಚಾಮುಂಡೇಶ್ವರಿಯಲ್ಲಿ ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಸಿದ್ದರಾಮಯ್ಯ ಹೇಳಿರುವುದು ಗೌಪ್ಯವಾಗಿಯೇನೂ ಉಳಿದಿಲ್ಲ. ಆದರೆ, ಇವರ ಲೆಕ್ಕಾಚಾರ ತಪ್ಪೇ ಎನ್ನುವ ಪ್ರಶ್ನೆ ಕಾಡುವುದು, ಅವರ ಸೋಲಿಗೆ ಬೇರೆಯೇ ಕಾರಣ ಎನ್ನುವ ಹಳೆಯ ಆಡಿಯೋ ಒಂದು ಈಗ ವೈರಲ್ ಆಗಿರುವುದು.

ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಬಿ.ಪ್ರಸನ್ನ ಕುಮಾರ್
ಬೆಂಗಳೂರು ನಗರ ವ್ಯಾಪ್ತಿಯ ಪುಲಿಕೇಶಿ ನಗರದ ಕಾಂಗ್ರೆಸ್ ಮುಖಂಡ ಬಿ.ಪ್ರಸನ್ನ ಕುಮಾರ್ ಅವರು ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಆಡಿಯೋ ಒಂದು ಈಗ ಬಹಿರಂಗಗೊಂಡಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಪ್ರಸನ್ನ ಅವರಿಗೆ, 2013ರ ಚುನಾವಣೆಯಲ್ಲಿ ಸೋಲಾಗಿತ್ತು. ಇದಾದ ನಂತರ 2018ರ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದರಿಂದ, ಪ್ರಸನ್ನ ಕುಮಾರ್ ಅವರು ಜೆಡಿಎಸ್ ನಿಂದ ಸ್ಪರ್ಧಿಸಿ ಹೀನಾಯವಾಗಿ ಸೋಲು ಅನುಭವಿಸಿದ್ದರು.

ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಹೇಗೆ ಸೋಲಾಯಿತು
ಪ್ರಸನ್ನ ಕುಮಾರ್ ಅವರು ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಹೇಗೆ ಸೋಲಾಯಿತು ಎನ್ನುವುದರ ಬಗ್ಗೆ ಕಾರ್ಯಕರ್ತರೊಬ್ಬರಲ್ಲಿ ಚರ್ಚಿಸಿದ್ದು ವೈರಲ್ ಆಗುತ್ತಿದೆ. ಜೆಡಿಎಸ್ ನಲ್ಲಿದ್ದಾಗ ಸಿದ್ದರಾಮಯ್ಯನವರ ಬಗ್ಗೆ ನಾನು ಮಾತನಾಡಿದ್ದು ಹೌದು ಎನ್ನುವುದನ್ನು ಪ್ರಸನ್ನ ಕುಮಾರ್ ಒಪ್ಪಿಕೊಂಡಿದ್ದಾರೆ. "ಈಗ ಹರಿದಾಡುತ್ತಿರುವ ಆಡಿಯೋ ಈಗಿನದ್ದಲ್ಲ, ಹಳೆಯದ್ದು ಧ್ವನಿ ನನ್ನದೇ"ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.

ಬೋವಿ ಜನಾಂಗದ ಸಮಾವೇಶ
"ಮೈಸೂರಿನಲ್ಲಿ ಬೋವಿ ಜನಾಂಗದ ಸಮಾವೇಶ ನಡೆಯುತ್ತಿತ್ತು. ಬಸವಲಿಂಗಪ್ಪನ ಮಗನಿಗೆ ಟಿಕೆಟ್ ಕೊಡದೇ ನಿಮ್ಮವರಿಗೆ ಟಿಕೆಟ್ ಕೊಟ್ಟಿದ್ದೇನೆ ಎನ್ನುವ ಮಾತನ್ನು ಸಿದ್ದರಾಮಯ್ಯ ಅಲ್ಲಿ ಆಡುತ್ತಾರೆ. ಈ ಮಾತು, ಕ್ಷೇತ್ರದಲ್ಲಿ ವೈರಲ್ ಆಗುತ್ತೆ. ಆ ಭಾಗದಲ್ಲಿ ಶೆಡ್ಯೂಲ್ ಕಾಸ್ಟ್ ನವರು ಜಾಸ್ತಿಯಿದ್ದಾರೆ. ಸಿದ್ದರಾಮಯ್ಯನವರ ಈ ಮಾತೇ ಅವರಿಗೆ ಮುಳುವಾಯಿತು"ಎಂದು ಪ್ರಸನ್ನ ಕುಮಾರ್ ಕಾರ್ಯಕರ್ತರಲ್ಲಿ ಆಡಿದ್ದ ಮಾತು ಈಗ ವೇಗ ಪಡೆದುಕೊಳ್ಳುತ್ತಿದೆ.
Recommended Video

ಡಾ. ಜಿ.ಪರಮೇಶ್ವರ್
ಇನ್ನೂ ಮುಂದಕ್ಕೆ ಮಾತನಾಡುತ್ತಾ ಪ್ರಸನ್ನ ಕುಮಾರ್, "ಸಿದ್ದರಾಮಯ್ಯನವರ ಈ ಮಾತೇ ಅವರಿಗೆ ಮುಳುವಾಯಿತು. ಡಾ. ಜಿ.ಪರಮೇಶ್ವರ್ ಈ ಕ್ಷೇತ್ರಕ್ಕೆ ಬಂದರೆ ಬರಲಿ, ಲಾಸ್ ಇಲ್ಲ. ಅವನ ಮುಖ ನೋಡಿ, ಒಂದು ಸಾವಿರ ಓಟ್ ಬೀಳುತ್ತೆ'ಎಂದು ಪ್ರಸನ್ನ ಕುಮಾರ್ ಹೇಳಿರುವ ಆಡಿಯೋ ಈಗ ಸುದ್ದಿಯಲ್ಲಿದೆ.
-
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications