Get Updates
Get notified of breaking news, exclusive insights, and must-see stories!

Rahul Gandhi: ಬಸವ ಜಯಂತಿಯಂದೇ ಬಸವಣ್ಣನ ಸಮಾಧಿ ಸ್ಥಳ ಕೂಡಲಸಂಗಮಕ್ಕೆ ರಾಹುಲ್‌ ಭೇಟಿ- ಬಿಜೆಪಿಗೆ ಕಠಿಣ ಸಂದೇಶ ರವಾನೆ?

ಬಾಗಲಕೋಟೆ, ಏಪ್ರಿಲ್‌ 22: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಲವಾರು ಕಸರತ್ತುಗಳನ್ನು ಮಾಡುತ್ತಿವೆ. ಜಾತಿ ಆಧರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಪ್ರಬಲ ಸಮುದಾಯಗಳನ್ನು ಸೆಳೆಯಲು ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ತಂತ್ರಗಳನ್ನು ರೂಪಿಸಿವೆ.

ಕರ್ನಾಟಕದ ಪ್ರಮುಖ ಸಮುದಾಯವಾದ ಲಿಂಗಾಯತರನ್ನು ಸೆಳೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಮುನಿಸಿಕೊಂಡಿರುವ ಪ್ರಮುಖ ಲಿಂಗಾಯತ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್‌ ಅಡಿಯಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

Why Rahul Gandhi Is attending Basava Jayanthi at Kudala Sangama? What is the political agenda?

ಲಿಂಗಾಯತ ವಿರೋಧಿ ಬಿಜೆಪಿ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಹಲವು ತಂತ್ರಗಳನ್ನು ರೂಪಿಸಿದೆ. ಇದರ ಭಾಗವಾಗಿ ಏಪ್ರಿಲ್‌ 23 ರಂದು ಕ್ರಾಂತಿಯೋಗಿ ಬಸವಣ್ಣನ ಸಮಾಧಿ ಸ್ಥಳವಾದ ಕೂಡಲ ಸಂಗಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದಾರೆ. ಅಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮಿ, ಇಳಕಲ್‌ನ ಗುರುಮಹಾಂತ ಸ್ವಾಮಿ, ಬಸವದಳ ಪೀಠದ ಮಹದೇಶ್ವರ ಸ್ವಾಮಿ ಸೇರಿದಂತೆ ಹಲವು ಲಿಂಗಾಯತ ಶ್ರೀಗಳನ್ನು ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Why Rahul Gandhi Is attending Basava Jayanthi at Kudala Sangama? What is the political agenda?

ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿಯ ಹಿರಿಯ ಮುಖಂಡರಾದ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಶುಕ್ರವಾರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡ ಎಂ.ಬಿ.ಪಾಟೀಲ್, ಪಕ್ಷದ ಹುನಗುಂದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್, ಬಾಗಲಕೋಟ ಡಿಸಿಸಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಬಿಜೆಪಿಗೆ ಕಠಿಣ ಸಂದೇಶ ರವಾನೆ

ಲಿಂಗಾಯತರ ಸರ್ವಶ್ರೇಷ್ಠ ಗುರುವಾದ ಬಸವಣ್ಣನವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಕಾಂಗ್ರೆಸ್‌ ಬಿಜೆಪಿಗೆ ಕಠಿಣ ಸಂದೇಶ ರವಾನೆ ಮಾಡಲು ಯೋಜನೆ ರೂಪಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಲಿಂಗಾಯತ ನಾಯಕರನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಬಿಜೆಪಿ ಆರ್‌ಎಸ್‌ಎಸ್‌ ನಾಯಕರ ಮಾತುಗಳನ್ನು ಕೇಳಿ, ಲಿಂಗಾಯತರನ್ನು ಮುಗಿಸುವ ಪ್ರಯತ್ನ ಮಾಡುತ್ತಿದೆ ಎಂಬ ನಿರೂಪಣೆಯನ್ನು ಬಿಂಬಿಸಲು ಕಾಂಗ್ರೆಸ್‌ ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.

Why Rahul Gandhi Is attending Basava Jayanthi at Kudala Sangama? What is the political agenda?

ಕಾಂಗ್ರೆಸ್‌ನ ಪ್ರಮುಖ ಲಿಂಗಾಯತ ನಾಯಕ ಎಂಬಿ ಪಾಟೀಲ್‌ ಹೇಳಿದ್ದೇನು?

'ಬಿಜೆಪಿಯಿಂದ ಲಿಂಗಾಯತರಿಗೆ ಸ್ಪಷ್ಟ ಸಂದೇಶ. ಲಿಂಗಾಯತರು ಎಂದೂ ಗರ್ಭಗುಡಿಯ ಅರ್ಚಕರಲ್ಲ, ಗರ್ಭಗುಡಿಯ ಆಚೆ ಕೂತು ಭಜನೆ ಮಾಡುವುದಕ್ಕಷ್ಟೇ ಸೀಮಿತ. ಬಿಜೆಪಿಯಲ್ಲಿ ಲಿಂಗಾಯತರು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತ, ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ಲಿಂಗಾಯತರು ತವರಿಗೆ ಮರಳುವ ಸ್ಪಷ್ಟ ಸನ್ನಿವೇಶ ಬಂದಿದೆ' ಎಂದು ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಹೇಳಿದ್ದಾರೆ.

'ಯಡಿಯೂರಪ್ಪನವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿಯು ಈಗ ಲಿಂಗಾಯತರ ವಿಷಯದಲ್ಲಿ ಅವರನ್ನು ಕೈಗೊಂಬೆಯಾಗಿ ಬಳಸಿಕೊಂಡು ಡ್ಯಾಮೇಜ್ ಕಂಟ್ರೋಲ್ ಮಾಡಲು ಹೊರಟಿದೆ. ಈ ಚುನಾವಣೆಯ ಸೋಲಿನ ನಂತರ, ಬೊಮ್ಮಾಯಿಯವರನ್ನು ಹೊಣೆ ಮಾಡಿ, ಬೊಮ್ಮಾಯಿಯವರನ್ನು ಹರಕೆಯ ಕುರಿ ಮಾಡುತ್ತಾರೆ' ಎಂದು ಎಂ ಬಿ ಪಾಟೀಲ್‌ ಆರೋಪಿಸಿದ್ದಾರೆ.

'2024ರ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರಗೆ MP ಟಿಕೆಟ್ ನೀಡುವುದಿಲ್ಲ. 2028ರ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರಗೆ MLA ಟಿಕೆಟ್ ಇಲ್ಲ. ಒಟ್ಟಿನಲ್ಲಿ 'ಯಾರನ್ನು ಇಲ್ಲಿ ಹೆಸರಿಸಲಾಗುವುದಿಲ್ಲವೋ' ಅವರು ಲಿಂಗಾಯತರನ್ನು ಮತ್ತು ಬಿಜೆಪಿಯ ಮೂಲ ನಾಯಕರ ಪ್ರಾಬಲ್ಯವನ್ನು ಕುಗ್ಗಿಸಿ, ತಮ್ಮ ಅಹಂಕಾರವನ್ನು ತಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆರ್. ಅಶೋಕ, ಸೋಮಣ್ಣ, ಶ್ರೀರಾಮುಲು...ಈ ಲಿಸ್ಟ್ ಮುಂದುವರೆಯುತ್ತದೆ' ಎಂದೂ ಎಂಬಿ ಪಾಟೀಲ್‌ ದೂರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+