ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು: ವೀರಪ್ಪ ಮೊಯ್ಲಿ ಪ್ರಶ್ನೆ
ಬೆಂಗಳೂರು, ನವೆಂಬರ್ 14: ಟಿಪ್ಪು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿರುವುದು,ಅದು ಅವರ ಅಭಿಪ್ರಾಯ.ಟಿಪ್ಪು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು ಎಂದು ಪ್ರಶ್ನಿಸಿದರು.
ಯುದ್ಧ ಮಾಡುವಾಗ ಕೆಲವರು ಸಾಯುತ್ತಾರೆ .ಅದಕ್ಕೆ ಚಕ್ರವರ್ತಿ ಕಾರಣ ಎಂದು ಆರೋಪ ಮಾಡುವುದು ಸರಿಯಲ್ಲ. ಟಿಪ್ಪು ಉತ್ತಮ ಆಡಳಿತಗಾರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ದೇಶಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟವರು ಟಿಪ್ಪು. ಸರ್ಕಾರ ಬಂದರೆ ಪ್ರತಿಮೆ ನಿರ್ಮಾಣ ಮಾಡುವುದು, ಅದು ಸರ್ಕಾರದ ನಿರ್ಧಾರ, ನಾನು ಮಾತನಾಡಲ್ಲ ಎಂದರು.

ಎಸ್ ಎಲ್ ಬೈರಪ್ಪ ಇತಿಹಾಸಕಾರ ಅಲ್ಲ. ಎಲ್ಲ ಸಾಹಿತಿಗಳು ಇತಿಹಾಸಕಾರಲ್ಲ. ನಮ್ಮ ಇತಿಹಾಸವನ್ನು ಬೈರಪ್ಪ ನೋಡಲಿ. ನಮ್ಮ ಇತಿಹಾಸ ನೋಡಲಿ ಬೈರಪ್ಪನವರು. ಕಾದಂಬರಿ ಬರೆದರೆ ಇತಿಹಾಸಕಾರ ಆಗಲ್ಲ. ಇತಿಹಾಸವನ್ನು ಬೈರಪ್ಪ ಓದಬೇಕು. ಇತಿಹಾಸದಲ್ಲಿ ಟಿಪ್ಪು ಬಗ್ಗೆ ಏನು ಹೇಳಿದ್ದಾರೆ ಎಂದು ನೋಡಬೇಕು ಎಂದರು.
ಏರ್ ಪೋರ್ಟ್ ಗೆ ಕೆಂಪೇಗೌಡ ಹೆಸರು ಇಟ್ಟಿದ್ದು ಕಾಂಗ್ರೆಸ್ ಸರ್ಕಾರ
ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವವ ವಿಚಾರವಾಗಿ ಮಾತನಾಡಿದ ಅವರು, ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಇತ್ತು.ಸಿಎಂ ಕರೆ ಮಾಡಿದ್ದರು, ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ.ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧಾರ ಮಾಡಿದ್ವಿ. ಬೆಂಗಳೂರು ಏರ್ ಪೋರ್ಟ್ ನಿರ್ಮಾಣ ಆಗಿದ್ದ ಎಸ್ ಎಂ ಕೃಷ್ಣ ಅವಧಿಯಲ್ಲಿ,ಏರ್ ಪೋರ್ಟ್ ಗೆ ಕೆಂಪೇಗೌಡ ಹೆಸರು ಇಟ್ಟಿದ್ದು ಕಾಂಗ್ರೆಸ್ ಸರ್ಕಾರ,ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಎಂ ಕೃಷ್ಣ ಕೂಡಾ ಇದ್ದರು ಆದರೆ ಎಸ್ ಎಂ ಕೃಷ್ಣ ಇದ್ದರೂ ಅವರನ್ನು ವೇದಿಕೆಗೆ ಕರಿಸಿಲ್ಲ ಎಂದರು.

ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಮಾತನಾಡಿದ ಅವರು, ಅವರು ನೆಹರೂ ಅವರ ಡಿಸ್ಕವರಿ ಆಫ್ ಇಂಡಿಯಾ ಓದಬೇಕು. ದೇಶಕ್ಕೆ ಶಿಕ್ಷಣ ವ್ಯವಸ್ಥೆ ಬುನಾದಿ ಹಾಕಿದವರು ನೆಹರೂ, 14% ಸಾಕ್ಷರತೆ ಇದ್ದದ್ದನ್ನು 72% ತರಲು ಕಾರಣ ನೆಹರೂ, ಆದರೆ ನೆಹರೂ ಹಾಕಿದ ವೈಜ್ಞಾನಿಕ ತಳಹದಿಯನ್ನು ಬುಡಮೇಲು ಮಾಡಲಾಗುತ್ತಿದೆ. ಕೇಸರಿ ಬಣ್ಣದ ಮೇಲೆ ವಿರೋಧ ಇಲ್ಲ, ಅದು ಅವರ ಗುತ್ತಿಗೆ ಅಲ್ಲ ಎಂದ ವೀರಪ್ಪ ಮೊಯ್ಲಿ ಕಿಡಿಕಾರಿದರು.












Click it and Unblock the Notifications