• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರೆಲ್ಲರೂ ಕೌರವರು ಆಗಲಿಕ್ಕೂ ಲಾಯಕ್ಕಿಲ್ಲದವರು!

|

ಬೆಂಗಳೂರು, ಜು. 24: ಭೂ ಸುಧಾರಣಾ ಕಾಯಿದೆ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ನಿರ್ಣಾಯಕ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿ ಗಣಿ ಧಣಿಗಳ ವಿರುದ್ಧ ಮಾಡಿದ್ದ ಹೋರಾಟದ ಮಾದರಿಯಲ್ಲಿಯೇ ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಹೋರಾಟ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಿನ್ನೆ ರೈತ ನಾಯಕರೊಂದಿಗೆ ಸಭೆ ನಡೆಸಿದ್ದ ಅವರು ಇಂದು ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಿದರು.

   Operation White Wash ರಹಸ್ಯ ಆಪರೇಷನ್ ವೈಟ್ ವಾಶ್ ಕಂಪ್ಲೀಟ್ ಮಾಹಿತಿ | Oneindia Kannada

   ಇದೇ ಸಂದರ್ಭದಲ್ಲಿ ಕೋವಿಡ್ ಕಾಲದ ಖರೀದಿ ಹಗರಣದ ಕುರಿತು ಸಿದ್ದರಾಮಯ್ಯ ಅವರು ತಾವು ಮಾಡಿದ್ದ ಆರೋಪವನ್ನು ಪುನರ್ ಉಚ್ಚರಿಸಿದ್ದಾರೆ. ಜೊತೆಗೆ ಸರ್ಕಾರ ಹಗರಣ ಮಾಡಿಲ್ಲ ಎನ್ನುವುದಾದರೆ ತನಿಖೆ ಮಾಡಲು ತೊಂದರೆ ಏನು ಎಂಬ ಮೂಲಭೂತ ಪ್ರಶ್ನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಜಂಟಿ ಸುದ್ದಿಗೋಷ್ಠಿ ಮಾಡಿದ್ದ ಸಚಿವರುಗಳು ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

   ಸಿದ್ದರಾಮಯ್ಯ ಆರೋಪಕ್ಕೆ ʼಪಂಚ್‌ʼ ಕೊಟ್ಟ ಐದು ಸಚಿವರು!

   ಭಂಡ ಸಚಿವರು

   ಭಂಡ ಸಚಿವರು

   ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದು ಯಾಕೆ? ಇದು ಭಂಡತನದ ಪರಮಾವಧಿ ಎಂದು ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

   ಸರ್ಕಾರ ಅಂದರೆ ಸಾಮೂಹಿಕ ಜವಾಬ್ದಾರಿ. ಹೀಗಾಗಿ ನಿನ್ನೆ ಐದು ಸಚಿವರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ನಾವು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಅವ್ಯವಹಾರದ ಬಗ್ಗೆ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಆದರೂ ಆ ದಾಖಲೆಗಳನ್ನು ಸಚಿವರು ನಿರಾಕರಿಸುತ್ತಾರೆ ಎಂದರೆ ಅವರು ಭಂಡರು. ಮೊದಲು ನಾನು ಕೊಟ್ಟಿರುವ 14 ದಾಖಲೆಗಳಿಗೆ ಉತ್ತರವನ್ನು ಕೊಡಲಿ ಎಂದಿದ್ದಾರೆ.

   ಮಿನಿಸ್ಟರ್ ಆಗಿದ್ದೇನಾ?

   ಮಿನಿಸ್ಟರ್ ಆಗಿದ್ದೇನಾ?

   ನಾನೇನು ಮೈತ್ರಿ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದೇನಾ? ಎಂದು ಸಿದ್ದರಾಮಯ್ಯ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಹಿಂದೆ ಜನವರಿ 2019ರಲ್ಲಿ ಹೆಚ್ಚಿನ ಮೊತ್ತದ ಹಣಕೊಟ್ಟು ವೆಂಟಿಲೇಟರ್ಸ್‌ ಖರೀದಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಅದನ್ನು ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ ಅವರು, ದಾಖಲೆಗಳು ಯಾರ ಬಳಿ ಇವೆ? ಈಗ ಇರುವ ಸರ್ಕಾರ ಯಾರದ್ದು? ತನಿಖೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

   ಮೈತ್ರಿ ಸರ್ಕಾರದದಲ್ಲಿ ಖರೀದಿ ಮಾಡಿದ್ದರ ಬಗ್ಗೆಯೂ ತನಿಖೆ ನಡೆಸಲಿ. ಆಗ ನಾನು ಮಂತ್ರಿ ಆಗಿದ್ದೆನಾ ಎಂದು ಸಿದ್ದರಾಮಯ್ಯ ಹೇಳಿದರು.

   ಸಿದ್ದರಾಮಯ್ಯನವರೇ, ಗಾಳಿಯಲ್ಲಿ ಗುದ್ದಾಡಬೇಡಿ!

   ಎಷ್ಟು ವರ್ಷ ಮಂತ್ರಿನಪ್ಪ?

   ಎಷ್ಟು ವರ್ಷ ಮಂತ್ರಿನಪ್ಪ?

   ಡಾ. ಸುಧಾಕರ್ ಎಷ್ಟು ವರ್ಷ ಮಂತ್ರಿನಪ್ಪ? ನಾನು ಎಷ್ಟು ವರ್ಷಗಳಿಂದ ಸಚಿವನಾಗಿದ್ದೇನಪ್ಪಾ? ಎಂದು ಸಿದ್ದರಾಮಯ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಪ್ರಸ್ತಾವನೆ, ಮಂಜೂರಾತಿ ಎಲ್ಲವೂ ನನಗೆ ಗೊತ್ತಿದೆಯಪ್ಪ. ಇವೆಲ್ಲ ಗೊತ್ತಿಲ್ಲದೆಯೆ ನಾನು 13 ಬಜೆಟ್‌ಗಳನ್ನು ಮಂಡಿಸಿದ್ದೇನಾ? ಎಂದು ಸಚಿವರ ಆರೋಪಕ್ಕೆ ಉತ್ತರಿಸಿದ್ದಾರೆ.

   ನಿನ್ನೆ ಮಾತನಾಡಿದ್ದ ಡಾ. ಸುಧಾಕರ್ ಇಲಾಖೆಗಳಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ ಈವರೆಗೆ ಸರ್ಕಾರ ಅಷ್ಟೂ ಹಣವನ್ನು ಖರ್ಚು ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟು ಸಿದ್ದರಾಮಯ್ಯ ಅವರ ತಿಳಿವಳಿಕೆಯನ್ನು ಪ್ರಶ್ನೆ ಮಾಡಿದ್ದರು.

   ಕೌರವರಾಗೋಕೂ ಲಾಯಕ್ಕಿಲ್ಲ

   ಕೌರವರಾಗೋಕೂ ಲಾಯಕ್ಕಿಲ್ಲ

   ಬಿಜೆಪಿ ಸರ್ಕಾರದ ಮಂತ್ರಿಮಂಡಲದ ಸಚಿವರು ಕೌರವರಾಗೋಕು ಲಾಯಕ್ಕಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ನಾನು ಸಿದ್ದರಾಮಯ್ಯ, ಸಿದ್ದರಾಮಯ್ಯ ಅಷ್ಟೇ. ಪಾಂಡವರು, ಕೌರವರಿಗೆ ಹೋಲಿಕೆ ಮಾಡಿಕೊಳ್ಳಬಾರದು. ಅವರೆಲ್ಲ ಸಾವಿರಾರು ವರ್ಷಗಳ ಹಿಂದೆ ಇದ್ದವರು. ನೀತಿ, ನಿಯಮಗಳು ಇದ್ದರೆ ಆಗಿನ ಕಾಲದವೇ ಇರೋದು.

   ನಾನು ಯಾರಿಗೂ ಊಹಿಸಿಕೊಳ್ಳಲ್ಲ. ನಾನು ಆಧುನಿಕ ಅಂಬೇಡ್ಕರ್‌ಗೆ ಸಮಾನಾ ಅಂತ ಹೇಳೋಕೆ ಆಗುತ್ತಾ? ಆಧುನಿಕ ಗಾಂಧಿ ಅಂತ ಹೇಳೋಕೆ ಆಗುತ್ತಾ? ಅದೆಲ್ಲ ಕೆಲವರು ಮಾಡಿಕೊಳ್ತಾರೆ. ಆದರೆ ನಾನು ಸಿದ್ದರಾಮಯ್ಯ ಅಷ್ಟೇ ಎಂದಿದ್ದಾರೆ.

   ಹಗರಣ ಆಗಿದೆ

   ಹಗರಣ ಆಗಿದೆ

   ನಾನು ಮಾಡಿರುವ ಆರೋಪಗಳನ್ನ ತನಿಖೆ ಮಾಡುವುದಿಲ್ಲ ಅಂದರೆ ಏನರ್ಥ? ಅವರು ತಪ್ಪು ಮಾಡಿದ್ದಾರೆ ಅಂತಾನೇ ತಾನೇ ಅರ್ಥ? ತಪ್ಪಿಲ್ಲ ಅಂದ್ರೆ ತನಿಖೆಗೆ ಯಾಕೆ ಹೆದರಬೇಕು? ನಾವು ಬಿಡುಗಡೆ ಮಾಡಿದ್ದು ಸರ್ಕಾರಿ ದಾಖಲೆಗಳಲ್ಲವೇ? ನಾವೇನು ಸ್ವಂತ ಸಿದ್ಧ ಮಾಡಿರುವ ದಾಖಲೆಯಾ?

   ಪ್ರಧಾನಮಂತ್ರಿಗಳ ಕಚೇರಿಯಿಂದಲೇ ತಲಾ 4 ಲಕ್ಷ ರೂಪಾಯಿಗಳಿಗೆ ಒಂದು ಯುನಿಟ್‌ನಂತೆ 50 ಸಾವಿರ ವೆಂಟಿಲೇಟರ್ ಖರೀದಿಸಿದ್ದಾಗಿ ದಾಖಲೆ ಕೊಟ್ಟಿದ್ದಾರೆ. ರಾಜ್ಯಕ್ಕೆ 1600 ವೆಂಟಿಲೇಟರ್ಸ್‌ ಕೊಟ್ಟಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಖರೀದಿ ಮಾಡಿರುವುದು ಕಳಪೆ ವೆಂಟಿಲೇಟರ್‌ಗಳಾ? ಕೇಂದ್ರ ಸರ್ಕಾರ 4 ಲಕ್ಷ ರೂಪಾಯಿಗಳಿಗೆ ಲಕ್ಷಕ್ಕೆ ಕೇಂದ್ರ ಸರ್ಕಾರ ಖರೀದಿಸಿ, ಎಲ್ಲಾ ರಾಜ್ಯಗಳಿಗೆ ಕೊಟ್ಟಿದ್ದಾರೆ. ಇವರು ಕೇಂದ್ರ ಕೊಟ್ಟಿರೋದು ಕಳಪೆ ಅಂತ ಹೇಳುತ್ತಾರಾ? ಕೇಂದ್ರ ಸರ್ಕಾರದ ಮೇಲೆ ಈ ಸಚಿವರು ಆರೋಪ ಮಾಡಲಿ.

   ಕಾರ್ಮಿಕ ಇಲಾಖೆ

   ಕಾರ್ಮಿಕ ಇಲಾಖೆ

   ಈವರೆಗೆ 320 ಕೋಟಿ ರೂ. ಅಷ್ಟೇ ಖರ್ಚು ಮಾಡಿದ್ದು ಅಂದಿದ್ದಾರಲ್ಲಾ? ಕಾರ್ಮಿಕ ಇಲಾಖೆಯಿಂದ ಏನೇನು? ಎಷ್ಟು ಖರೀದಿಸಿದ್ದಾರೆ? ಆದರೂ 320 ಕೋಟಿ ರೂ. ಅಷ್ಟೇ ಅಂತ ಸುಳ್ಳು ಹೇಳಿದ್ದು ಯಾಕೆ? ನಂತರ ನಿನ್ನೆ 2018 ಕೋಟಿ ರೂ. ಎಂದು ಹೇಳಿದ್ದಾರೆ. ಹೀಗಾಗಿ ಸಚಿವರುಗಳು ಸುಳ್ಳು ಹೇಳಿದ್ದಾರೆ ಎಂದು ಅರ್ಥ. ನಾವು 4,123 ಕೋಟಿ ರೂಪಾಯಿಗಳ ಆರೋಪ ಮಾಡಿದ ಮೇಲೆ 2018 ರೂಪಾಯಿಗಳನ್ನು ಖರ್ಚು ಮಾಡಿದ್ದಾಗಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

   English summary
   Why is the government afraid to conduct a judicial inquiry into medical equipment? Why is there no need to investigate if ministers are truthful? LOP Siddaramaiah said this at a press conference. Know more about Coronavirus scam,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more