ತಿ. ನರಸೀಪುರ ವಿಧಾನಸಭಾ ಕ್ಷೇತ್ರದತ್ತ ಕುತೂಹಲ ಏಕೆ?

Posted By: ಬಿಎಂ ಲವಕುಮಾರ್
Subscribe to Oneindia Kannada

ಮೈಸೂರು, ಏಪ್ರಿಲ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ, ಲೋಕೋಪಯೋಗಿ ಸಚಿವ ಹೆಚ್.ಎಸ್.ಮಹದೇವಪ್ಪರವರ ಬಹುದಿನದ ಕನಸು ನನಸಾಗುತ್ತಾ ಎಂಬ ಕುತೂಹಲ ಎಲ್ಲರನ್ನು ಕಾಡತೊಡಗಿದೆ.

ಇಷ್ಟಕ್ಕೂ ಅವರ ಕನಸೇನೆಂದರೆ ತಮ್ಮ ಸುಪುತ್ರ ಸುನೀಲ್ ಬೋಸ್ ಅವರನ್ನು ತಾನು ಸ್ಪರ್ಧಿಸಿ ಸಚಿವರಾದ ತಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಮುಂದಿನ ಶಾಸಕರನ್ನಾಗಿ ಮಾಡುವುದು.

ತಿ.ನರಸೀಪುರದಲ್ಲಿ ಶಂಕರ್, ಸುನೀಲ್ ನಡುವೆ ಜಿದ್ದಾಜಿದ್ದಿ

ಸುನೀಲ್ ಬೋಸ್ ಅವರು ಕೂಡ ತಾನೇ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆಯಾದರೂ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವೇ ಈ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಲಿದೆ. ರಾಜಕೀಯ ಮೂಲಗಳ ಪ್ರಕಾರ ಮಹದೇವಪ್ಪ ಅವರಿಗೆ ಕ್ಷೇತ್ರ ಬದಲಾಯಿಸದೆ, ಹಿಂದೆ ಸ್ಪರ್ಧಿಸಿದ ಕ್ಷೇತ್ರದಿಂದಲೇ ಸ್ಪರ್ಧಿಸಲು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Why is curiosity over T. Narasipura assembly constituency?

ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹೊರತುಪಡಿಸಿ ಉಳಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಇನ್ನೂ ಕೂಡ ಘೋಷಣೆ ಮಾಡಿಲ್ಲ. ಜೆಡಿಎಸ್‍ ಅಭ್ಯರ್ಥಿ ಸೋಮನಾಥಪುರ ಜಿಪಂ ಸದಸ್ಯ ಎಂ.ಅಶ್ವಿನ್ ಕುಮಾರ್ ಎಂದು ಫೆಬ್ರವರಿ 17ರಂದು ವಿಕಾಸಪರ್ವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿರವರು ಘೋಷಣೆ ಮಾಡಿದ್ದರು.

ಇನ್ನು ತಿ.ನರಸೀಪುರ ಪಟ್ಟಣದ ವಿದ್ಯೋದಯ ಅವರಣದಲ್ಲಿ ಮಾರ್ಚ್ 5 ರಂದು ನಡೆದ ಶಂಕರ್ ಅಭಿಮಾನಿಗಳ ಬಳಗ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಎಸ್.ಶಂಕರ್ ಗೆಲ್ಲಿಸಿ ಎಂಬುವುದರ ಮುಖಾಂತರ ಅವರೇ ಬಿಜೆಪಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಘೋಷಣೆ ಮಾಡಿದ್ದರು.

ಟಿ.ನರಸೀಪುರದಲ್ಲಿ ತೆನೆ ಹೊರಲು ಅವಕಾಶ ಸಿಗಲಿದೆಯೇ?

ಆದರೆ ಪಕ್ಷಗಳು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವಷ್ಟೆ ಅಭ್ಯರ್ಥಿಗಳು ಯಾರು ಎಂಬುದು ಗೊತ್ತಾಗಲಿದ್ದು, ಆ ನಂತರ ಕ್ಷೇತ್ರದಲ್ಲಿ ಚುನಾವಣಾ ರಂಗು ಹೆಚ್ಚಲಿದೆ. ಅಭ್ಯರ್ಥಿಗಳ ನಡುವೆ, ಪಕ್ಷಗಳ ನಡುವೆ ಜಿದ್ದಾಜಿದ್ದಿ ಆರಂಭವಾಗಲಿದೆ.

ಹಾಗೆನೋಡಿದರೆ ತಿ.ನರಸೀಪುರ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯಕ್ಕೆ ಎನ್. ರಾಚಯ್ಯ, ಎಂ.ಎಸ್.ಗುರುಪಾದಸ್ವಾಮಿ, ಎಂ.ರಾಜಶೇಖರಮೂರ್ತಿ, ಪಿ.ವೆಂಕಟರಮಣ, ಡಾ.ಹೆಚ್.ಸಿ.ಮಹದೇವಪ್ಪ ಅವರಂತಹ ಪ್ರಮುಖ ನಾಯಕರನ್ನು ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇದು ಮೀಸಲು ವಿಧಾನ ಸಭಾ ಕ್ಷೇತ್ರವಾಗಿದ್ದು, ಇಲ್ಲಿ 1,96,399 ಮತದಾರರಿದ್ದು ಪುರುಷರು 97,923 ಮತ್ತು ಮಹಿಳೆಯರು 98,476 ಮತದಾರರಿದ್ದಾರೆ. ಈ ಮತದಾರರು ಯಾರನ್ನು ಕೈಹಿಡಿಯುತ್ತಾರೆ ಎಂಬುದು ಮಾತ್ರ ನಿಗೂಢವಾಗಿದೆ.

ಆದರೆ ಮತದಾರರು ತಮ್ಮ ಕೈಹಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಆಕಾಂಕ್ಷಿಗಳಾದ ಎಂ.ಸುನೀಲ್‍ಬೋಸ್, ಜೆಡಿಎಸ್‍ನ ಎಂ.ಅಶ್ವಿನ್‍ಕುಮಾರ್, ಬಿಜೆಪಿಯಿಂದ ಎಸ್.ಶಂಕರ್, ಸಮಾಜವಾದಿ ಪಕ್ಷದಿಂದ ಚಿದರವಳ್ಳಿ ಮಹದೇವಸ್ವಾಮಿ ಇದ್ದಾರೆ. ಪಕ್ಷದ ನಾಯಕರು ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಮತ್ತು ಮತದಾರರು ಅವರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದೆಲ್ಲವೂ ದಿನಕಳೆದಂತೆಯೇ ಒಂದೊಂದಾಗಿ ಗೊತ್ತಾಗಲಿದೆ.

ಟಿ. ನರಸೀಪುರ ಕ್ಷೇತ್ರ : ಕಾಂಗ್ರೆಸ್ಸಿಗೆ ಗೆಲುವು ಕಷ್ಟ ಕಷ್ಟ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister Siddaramaiah's close aide, PWD minister HS Mahadevappa, is going to field his son in T Narasipura. But he has not yet confirmed the ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ