Darshan Thoogudeepa: ದರ್ಶನ್​ಗೆ ಯಾಕೆ ಸಿಕ್ಕಿಲ್ಲ ಬೇಲ್: ಜಾಮೀನು ನಿರಾಕರಿಸಲು ಅಸಲಿ ಕಾರಣ ಇದೇ?

ಬಳ್ಳಾರಿ, ಅಕ್ಟೋಬರ್‌ 15: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಸ್ಯಾಂಟಲ್‌ವುಡ್‌ ನಟ ದರ್ಶನ್‌ ಹೆಚ್ಚು ಕಡಿಮೆ ನಾಲ್ಕು ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಹೀಗಾಗಿ ದರ್ಶನ್‌ ಅವರಿಗೆ ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಭರವಸೆ ದರ್ಶನ್ ಅಭಿಮಾನಿಗಳಲ್ಲಿ ಇತ್ತು. ಆದರೆ, ದರ್ಶನ್‌ ಅವರಿಗೆ ಜಾಮೀನು ನಿರಾಕರಿಸಿದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ನಾಡ ಹಬ್ಬ ದಸರಾದೊಳಗೆ ನಟ ದರ್ಶನ್‌ಗೆ ಬೇಲ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಹಾಗಾಗಲಿಲ್ಲ. ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರು ಪ್ರಬಲವಾಗಿ ವಾದ ಮಂಡಿಸಿದರೂ ದರ್ಶನ್‌ಗೆ ಬೇಲ್ ಸಿಗಲಿಲ್ಲ. ದರ್ಶನ್ ವಿರುದ್ಧ ಪೊಲೀಸರಿಗೆ ಪ್ರಬಲ ಸಾಕ್ಷಿಗಳು ಸಿಕ್ಕಿವೆ. ಟೆಕ್ನಿಕಲ್ ಸಾಕ್ಷಿಗಳನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಎಂದು ಕೆಲ ಅನುಭವಿ ವಕೀಲರು ತಿಳಿಸಿದ್ದಾರೆ. ಅಷ್ಟಕ್ಕೂ ನಟ ದರ್ಶನ್‌ ಗೆ ಬೇಲ್‌ ಸಿಗದಿರಲು ಅಸಲಿ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.

Why Didn t Actor Darshan Get Bail This Is The Reason

ಬಳ್ಳಾರಿಯಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್​​ ಸೋಮವಾರ ಜಾಮೀನು ಸಿಕ್ಕೆ ಸಿಗುತ್ತದೆ ಎಂಬ ಖುಷಿಯಾಗಿದ್ದರು, ಆದರೆ, ಖುಷಿ ಕ್ಷಣ ಹಾಗೆಯೇ ಕಮರಿ ಹೋಗಿದೆ. ಜೈಲಿನಲ್ಲಿ ಬಳಲಿ ಬೆಂಡಾಗಿರೋ ದರ್ಶನ್‌ಗೆ ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ. ನಿನ್ನೆ ದರ್ಶನ್‌ ಪರವಾದ ವಕೀಲರು ವಾದ - ಪ್ರತಿವಾದವನ್ನ ಮಂಡಿಡಿಸಿದ್ದಾರೆ. ವಾದ- ಪ್ರತಿವಾದವನ್ನ ಗಮನಿಸಿರುವ ನ್ಯಾಯಾಲಯ ದರ್ಶನ್‌ಗೆ ಜಾಮೀನು ಕೋಡೋದನ್ನ ನಿರಾಕರಿಸಿದೆ.

ದರ್ಶನ್‌ ಜಾಮೀನು ನಿರಾಕರಿಸಲು ಕೋರ್ಟ್‌ ಪರಿಗಣಿಸಿರೋ ಅಂಶಗಳೇನು?

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ತಡವಾಗಿ ಸಾಕ್ಷಿ ದಾಖಲು ಮಾಡಲಾಗಿದೆ.

ನ್ಯಾಯಾಧೀಶರು : ಕೇಸ್‌ ಡೈರಿ ಪ್ರಕಾರ ಕಾನೂನಿನ ಪ್ರಕಾರ ರೆಕಾರ್ಡ್‌ ಆಗಿದೆ

ಸಿ.ವಿ.ನಾಗೇಶ್, ದರ್ಶನ್​​ ಪರ ವಕೀಲರು : ತಡವಾಗಿ ಮರಣೋತ್ತರ ಪರೀಕ್ಷೆ ಆಗಿದೆ

ನ್ಯಾಯಾಧೀಶರು : ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಕಾರಣ ವಿಳಂಬವಾಗಿದೆ

ಸಿ.ವಿ.ನಾಗೇಶ್​, ದರ್ಶನ್​​ ಪರ ವಕೀಲರು : ತನಿಖೆಯಲ್ಲಿ ಸಾಕಷ್ಟು ಲ್ಯಾಪ್ಸ್​ ಆಗಿವೆ.

ನ್ಯಾಯಾಧೀಶ : ತನಿಖಾಧಿಕಾರಿ ಕ್ರಾಸ್ ಎಕ್ಸಾಮಿನೇಷನ್ ವೇಳೆ ಪತ್ತೆ ಮಾಡಬಹುದು.. ಈಗ ಅಲ್ಲ

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಸಾಕ್ಷಿಗಳ ರಿಕವರಿ ತಡವಾಗಿದೆ

ನ್ಯಾಯಾಧೀಶರು : ಅದು ಕೇಸ್​​​ನ ವಿಚಾರಣೆ ವೇಳೆ ಪ್ರಶ್ನಿಸಬಹುದು

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಐವಿಟ್ನೇಸ್ ಹೇಳಿಕೆಯಲ್ಲಿ ಸಾಕಷ್ಟು ಗೊಂದಲ ಇದೆ

ನ್ಯಾಯಾಧೀಶರು : ಕೇವಲ ಐವಿಟ್ನೇಸ್ ಹೇಳಿಕೆಯಲ್ಲಿ ಲೋಪ ಮಾತ್ರ ಗ್ರೌಂಡ್ ಅಲ್ಲ, ದರ್ಶಶ್ ವಿರುದ್ದ ಸಿಡಿಆರ್ ಸ್ಥಳದಲ್ಲೇ ಇದ್ದ ಅಂತಾ ಹೇಳ್ತಿದೆ

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ದರ್ಶನ್ ಬಟ್ಟೆ ತೊಳೆದಿದ್ದಾರೆ,‌ ಡಿಎನ್ಎ ಪತ್ತೆ ಹೇಗೆ ಸಾಧ್ಯ?

ನ್ಯಾಯಾಧೀಶರು : ದರ್ಶನ್ ಕೃತ್ಯದಲ್ಲಿ ಭಾಗಿಯ ಬಗ್ಗೆ ಡಿಎನ್ಎ ಪ್ರೂವ್​ ಮಾಡ್ತಿದೆ

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಹೇಳಿಕೆಯಲ್ಲಿ ಲೋಪಗಳಿದ್ದು, ವಿಳಂಬ ದಾಖಲಾಗಿದೆ

ನ್ಯಾಯಾಧೀಶರು : ಹೇಳಿಕೆಯಲ್ಲಿ ಲೋಪ ಇದೆ ಅಂತ ಅದನ್ನೇ ಪರಿಗಣಿಸಲು ಸಾಧ್ಯವಿಲ್ಲ, ಹೇಳಿಕೆ ತಡವಾಗಿದ್ರೂ ಅದರ ಅಂಶಗಳ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಕಾರಣಗಳಿಂದಲೇ ಜಾಮೀನು ನಿರೀಕ್ಷೆಯಲ್ಲಿ ಆರೋಪಿ ದರ್ಶನ್‌ಗಂತೂ ಜೈಲು ಖಾಯಂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+