ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಜಾತಿ ಹೆಸರೇಕೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 27 : ಕರ್ನಾಟಕ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿಯ ಸಂಗತಿ ಎಂದರೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಾಯಕರ ಹೆಸರಿನ ಮುಂದೆ ಜಾತಿಯನ್ನು ತಿಳಿಸಲಾಗಿದ್ದು, ಇದು ಭಾರೀ ಚರ್ಚೆ ಹುಟ್ಟು ಹಾಕಿದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ವಿವಿಧ ಮೋರ್ಚಾದ ಅಧ್ಯಕ್ಷರ ನೇಮಕದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. [ಬಿಜೆಪಿ ಪದಾಧಿಕಾರಿಗಳ ಪಟ್ಟಿ ನೋಡಿ]

bjp

ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಾಗಿ ನೇಮಕವಾದ ನಾಯಕರ ಹೆಸರಿನ ಮುಂದೆ ಜಾತಿಯನ್ನು ನಮೂದಿಸಲಾಗಿದೆ. ಈ ಬಗ್ಗೆ ಪತ್ರಕರ್ತರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. [ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!]

'ಪಟ್ಟಿ ಬಿಡುಗಡೆ ಬಳಿಕ ನೀವು ನಾಯಕರ ಜಾತಿಯನ್ನು ಹುಡುಕುತ್ತೀರಿ. ಅದಕ್ಕೆ ನಾವೇ ಜಾತಿಯನ್ನು ಹಾಕಿ ಕಳಿಸಿ ನಿಮ್ಮ ಕೆಲಸ ಕಡಿಮೆ ಮಾಡಿದ್ದೇವೆ' ಎಂದು ಬಿಜೆಪಿ ನಾಯಕರೊಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿ ಲಿಂಗಾಯತ ಸಮುದಾಯದ ಪಕ್ಷವಲ್ಲ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂಬ ವಾದವೂ ಇದೆ. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]

ಪಟ್ಟಿಯ ಜಾತಿ ಸಮೀಕರಣ : ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಒಟ್ಟು 25 ನಾಯಕರ ಹೆಸರಿದೆ. ಇವರಲ್ಲಿ ನಾಲ್ಕು ಜನ ಲಿಂಗಾಯತ ನಾಯಕರಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ.

ಐವರು ಒಕ್ಕಲಿಗ ಮತ್ತು ಒಬ್ಬರು ಬ್ರಾಹ್ಮಣ ಸಮುದಾಯದ ನಾಯಕರಿದ್ದಾರೆ. ಎಸ್‌ಸಿ/ಎಸ್‌ಸಿ ಮತ್ತು ಒಬಿಸಿ ವರ್ಗಕ್ಕೆ ಸೇರಿದ 11 ನಾಯಕರಿದ್ದಾರೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದ್ದು, ಅವರನ್ನು ಸೆಳೆಯಲು ನಾಯಕರಿಗೆ ಆದ್ಯತೆ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was probably for the first time that the BJP in Karnataka had put out the caste of its new office bearers while releasing the list to the media. The BJP released the list of its Vice presidents, State general secretaries, state secretaries apart from the media spokespersons and morcha presidents list.
Please Wait while comments are loading...