ನಾವು ಬೆಂಕಿ ಹಚ್ಚುವುದಕ್ಕೆ ಬಂದಿಲ್ಲ ಎಂದು ಗುಡುಗಿದ್ಯಾಕೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಪ್ರತಿಭಟನೆ ಕಾವು ಎರಡನೇ ದಿನ ಜೋರಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಅವರು ನಾವು ಬೆಂಕಿ ಹಚ್ಚುವುದಕ್ಕೆ ಇಲ್ಲಿ ಬಂದಿಲ್ಲ ಎಂದು ಗುಡುಗಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಎರಡನೇ ದಿನವೂ ಪಂಚಮಸಾಲಿ ಪ್ರತಿಭಟನೆ ಕಾವು ಜೋರಾಗಿದೆ. ಸೋಮವಾರ ಸ್ವಾಮೀಜಿ ಹಾಗೂ ಸರ್ಕಾರದ ಪ್ರತಿನಿಧಿಯೊಂದಿಗೆ ನಡೆದ ಸಂಧಾನ ಯಶಸ್ವಿಯಾಗಿಲ್ಲ. ಹೀಗಾಗಿ, ಮಂಗಳವಾರ ಪ್ರತಿಭಟನೆಯ ಕಾವು ಜೋರಾಗಿದೆ. ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗಾಗಿ ಆಗ್ರಹಿಸಿ ಕಳೆದ ಮೂರು ವರ್ಷಕ್ಕೂ ಹೆಚ್ಚು ಅವಧಿಯಿಂದ ಬೃಹತ್‌ ಹೋರಾಟಗಳನ್ನು ಮಾಡುತ್ತಿದೆ. ಹಲವು ವರ್ಷಗಳಿಂದ ಈ ಬೇಡಿಕೆ ಇರಿಸಿದೆ.

ಕೊಂಡಸಕೊಪ್ಪದಲ್ಲಿ ಹೋರಾಟ ನಡೆದಿದೆ. ಇನ್ನು ಈ ಹೋರಾಟದಲ್ಲಿ ಪಂಚಮಸಾಲಿ ಸಮುದಾಯದ ಸಾವಿರಾರು ವಕೀಲರು ಭಾಗಿಯಾಗಿದ್ದಾರೆ. ಇನ್ನು ಹೋರಾಟದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಪ್ರತಿಭಟನಾ ಸ್ಥಳದಲ್ಲಿ ಸೇರುತ್ತಿರುವುದು ವರದಿಯಾಗಿದೆ. ಹೋರಾಟಕ್ಕೆ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಪ್ರಮುಖ ಹಾಗೂ ಪ್ರಭಾವಿ ನಾಯಕರು ಬೆಂಬಲ ಸೂಚಿಸಿದ್ದಾರೆ. ಸಮಯದಾಯಕ್ಕೆ 2A ಮೀಸಲಾತಿ ಪಡೆಯೋವರೆಗೂ ಬಿಡಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಈ ನಡುವೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

Why Basava Jaya Mrityunjaya Swamiji thunder saying We have not come to set fire to it

ಪ್ರತಿಭಟನಾ ಸ್ಥಳದಲ್ಲಿ ಅಗ್ನಿಶಾಮಕ ವಾಹನ ನಿಲ್ಲಿಸಿರುವುದಕ್ಕೆ ಅವರು ಆಕ್ರೋಶ ಹೊರಹಾಕಿದ್ದು, ನಾವು ಇಲ್ಲಿಗೆ ಬೆಂಕಿ ಹಚ್ಚಲು ಬಂದಿಲ್ಲ ಎಂದಿದ್ದಾರೆ. ಇನ್ನು ಇಲ್ಲಿನ ಬೆಳಗಾವಿಯ ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಪಂಚಮಸಾಲಿ ಹೋರಾಟ ನಡೆದಿದೆ. ಹೋರಾಟದಲ್ಲಿ ಮಾತನಾಡಿರುವ ಸ್ವಾಮೀಜಿ ನಾವು ಇಲ್ಲಿ ಹೋರಾಟಕ್ಕೆ ಬಂದಿದ್ದೇವೆ. ಯಾವುದೋ ಬೆಂಕಿ ಹಚ್ಚಲು ಬಂದಿಲ್ಲ. ಕೂಡಲೇ ಹೋರಾಟದ ಸ್ಥಳದಿಂದ ಅಗ್ನಿಶಾಮಕ ವಾಹನ ತೆರವು ಮಾಡಿ ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಾದ ಮೇಲೆ ತಕ್ಷಣವೇ ಅಗ್ನಿಶಾಮಕ ವಾಹನ ಹೊರಕ್ಕೆ ತೆಗೆದುಕೊಂಡು ಹೋಗಲಾಗಿದೆ.

ಡಿಜೆ ಹಾಕಿ ಸ್ವಾಮೀಜಿಗೆ ಸ್ವಾಗತ

ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ಸ್ವಾಮೀಜಿ ಅವರನ್ನು ಡಿ.ಜೆ ಹಾಕಿ ಸ್ವಾಗತ ಮಾಡಲಾಗಿದೆ. ವಾಹನದಲ್ಲೇ ಡಿಜೆ ತಾಳಕ್ಕೆ ಹಸಿರು ಟವೆಲ್ ತೂರಾಡಿದ್ದಾರೆ ಸ್ವಾಮೀಜಿ. ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಸಿ ಸಿ ಪಾಟೀಲ್, ಶಾಸಕ ಅರವಿಂದ ಬೆಲ್ಲದ ಹಾಗೂ ಮಾಜಿ ಶಾಸಕ ಮಹೇಶ ಕುಮಟಳ್ಳಿ ಸೇರಿದಂತೆ ಹಲವರು ಆಗಮಿಸಿದ್ದಾರೆ.

ಯಶಸ್ವಿಯಾಗದ ಸಂಧಾನ: ಪ್ರತಿಭಟನೆಯ ಮೊದಲ ದಿನವಾದ ಸೋಮವಾರ ಸರ್ಕಾರದ ಪರವಾಗಿ ಸಮುದಾಯದ ನಾಯಕರೊಂದಿಗೆ ಸಂಧಾನಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬಂದಿದ್ದರು. ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವೊಲಿಕೆ ಯತ್ನ ನಡೆದಿತ್ತು. ಆದರೆ, ಈ ಸಂಧಾನ ಯಶಸ್ವಿಯಾಗಲಿಲ್ಲ. ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಮುತ್ತಿಗೆ ಕರೆ ನೀಡಲಾಗಿತ್ತು. ಇದರ ಬೆನ್ನಲ್ಲೇ

ಮುತ್ತಿಗೆ ಹೋರಾಟ ತಡೆಯಲು ಜಿಲ್ಲಾಡಳಿತದಿಂದ ಟ್ರ್ಯಾಕ್ಟರ್, ಕ್ರೂಜರ್ ಹಾಗೂ ವಾಹನಗಳನ್ನು ಬೆಳಗಾವಿ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಇದೀಗ ಮಂಗಳವಾರ ಪ್ರತಿಭಟನೆಯ ಕಾವು ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+