ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಯಾರಿಗೆ?

|
Google Oneindia Kannada News

ಚಾಮರಾಜನಗರ, ಮಾರ್ಚ್ 06 : ವರ್ಷದ ಹಿಂದೆ ಉಪ ಚುನಾವಣೆ ಎದುರಿಸಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿದೆ. ಆದರೆ, ಈ ಬಾರಿ ಅಭ್ಯರ್ಥಿ ಆಯ್ಕೆ ಬಹಳ ಕಗ್ಗಂಟಾಗಿದೆ. ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿ ನಡೆದಿದೆ.

ಗುಂಡ್ಲುಪೇಟೆ ಕ್ಷೇತ್ರದ ಹಾಲಿ ಶಾಸಕರು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವೆ ಗೀತಾ ಮಹದೇವ ಪ್ರಸಾದ್. ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತ ಎಂಬ ಸುದ್ದಿ ಇದೆ. ಆದ್ದರಿಂದ, ಗೀತಾ ಅವರಿಗೆ ಟಿಕೆಟ್ ನಿರಾಕರಣೆ ಮಾಡುವಂತಿಲ್ಲ.

ಗುಂಡ್ಲುಪೇಟೆಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್!ಗುಂಡ್ಲುಪೇಟೆಗೆ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್!

ಹಾಲಿ ಕಾಡಾ ಅಧ್ಯಕ್ಷರಾಗಿರುವ ಎಚ್.ಎಸ್.ನಂಜಪ್ಪ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 2008, 2013, 2017ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದ ನಂಜಪ್ಪ ಅವರು ಈ ಬಾರಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ದಿ. ಮಹದೇವ ಪ್ರಸಾದ್ ಕುಟುಂಬದ್ದೇ ರಾಜ್ಯಭಾರಕ್ಷೇತ್ರ ಪರಿಚಯ: ಗುಂಡ್ಲುಪೇಟೆಯಲ್ಲಿ ದಿ. ಮಹದೇವ ಪ್ರಸಾದ್ ಕುಟುಂಬದ್ದೇ ರಾಜ್ಯಭಾರ

ದಿ.ಎಚ್.ಎಸ್.ಮಹದೇವಪ್ರಸಾದ್ ಜೆಡಿಎಸ್ ಪಕ್ಷದಲ್ಲಿದ್ದಾಗ ಕ್ಷೇತ್ರದಲ್ಲಿ ಪಕ್ಷ ಪ್ರಬಲವಾಗಿತ್ತು. 2008ರಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಜೆಡಿಎಸ್ ಬಲ ಕಳೆದುಕೊಂಡಿದೆ. ಈ ಬಾರಿ ಬಿಎಸ್ಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಅಭ್ಯರ್ಥಿಗಳಾಗಲು ಇಬ್ಬರು ಸಿದ್ಧವಿದ್ದಾರೆ...

ಹಾಲಿ ಶಾಸಕರಿಗೆ ಟಿಕೆಟ್

ಹಾಲಿ ಶಾಸಕರಿಗೆ ಟಿಕೆಟ್

2017ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಗೀತಾ ಮಹದೇವ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವರಾಗಿದ್ದಾರೆ. ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೀತಾ ಅವರಿಗೆ ಟಿಕೆಟ್ ಸಿಗಲಿದೆ.

ಎಚ್.ಎಸ್.ನಂಜಪ್ಪ

ಎಚ್.ಎಸ್.ನಂಜಪ್ಪ

ಹಾಲಿ ಕಾಡಾ ಅಧ್ಯಕ್ಷರಾಗಿರುವ ಎಚ್.ಎಸ್.ನಂಜಪ್ಪ ಟಿಕೆಟ್‌ಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ. ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದೇನೆ, 2008, 2013, 2017ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದೇನೆ. ಈ ಬಾರಿ ಟಿಕೆಟ್ ನೀಡಿ ಎಂಬುದು ನಂಜಪ್ಪ ಅವರ ಬೇಡಿಕೆ.

ಬಿಜೆಪಿ-ಕಾಂಗ್ರೆಸ್ ಪೈಪೋಟಿ

ಬಿಜೆಪಿ-ಕಾಂಗ್ರೆಸ್ ಪೈಪೋಟಿ

ದಿ.ಎಚ್.ಎಸ್.ಮಹದೇವಪ್ರಸಾದ್ ಅವರು ಜೆಡಿಎಸ್ ತೊರೆದ ಬಳಿಕ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪಕ್ಷ ಪ್ರಭಾವವನ್ನು ಕಳೆದುಕೊಂಡಿದೆ. 2013ರ ಚುನಾವಣೆಯಲ್ಲಿ ಬಿ.ಪಿ.ಮುದ್ದುಮಲ್ಲು 4,017 ಮತಗಳನ್ನು ಮಾತ್ರ ಪಡೆದಿದ್ದರು. ಆದ್ದರಿಂದ ಕ್ಷೇತ್ರ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯ ಕಣವಾಗಲಿದೆ.

ಬಿಜೆಪಿಗೆ ಅನುಕಂಪದ ಅಲೆ

ಬಿಜೆಪಿಗೆ ಅನುಕಂಪದ ಅಲೆ

ಬಿಜೆಪಿ ಸತತ ಸೋಲುಗಳ ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ಮೂರು ಬಾರಿ ಸ್ಪರ್ಧೆ ಮಾಡಿರುವ ಸಿ.ಎಸ್.ನಿರಂಜನ್ ಮೂರು ಸಲವು ಸೋತಿದ್ದಾರೆ. ನಿರಂಜನ್ ಅವರ ತಂದೆ ಸಿ.ಎಂ.ಶಿವಮಲ್ಲಪ್ಪ ಎರಡು ಬಾರಿ ಸೋಲು ಕಂಡಿದ್ದಾರೆ. ಈ ಬಾರಿಯೂ ಸಿ.ಎಸ್.ನಿರಂಜನ್ ಟಿಕೆಟ್ ಆಕಾಂಕ್ಷಿ.

ಜೆಡಿಎಸ್-ಬಿಎಸ್‌ಪಿ ಮೈತ್ರಿ

ಜೆಡಿಎಸ್-ಬಿಎಸ್‌ಪಿ ಮೈತ್ರಿ

2018ರ ಚುನಾವಣೆಗೆ ಬಿಎಸ್‌ಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಅದರ ಅನ್ವಯ ಗುಂಡ್ಲುಪೇಟೆ ಕ್ಷೇತ್ರದಲ್ಲೂ ಮೈತ್ರಿಯ ಅಡಿ ಬರುತ್ತದೆ. ಜೆಡಿಎಸ್ ಪಕ್ಷದಿಂದ ಗುರುಪ್ರಸಾದ್ ಮತ್ತು ಬಿಎಸ್‌ಪಿಯಿಂದ ಕಾಂತರಾಜು ಅವರು ಟಿಕೆಟ್ ಆಕಾಂಕ್ಷಿಗಳು. ಯಾರಿಗೆ ಟಿಕೆಟ್? ಎಂದು ಕಾದು ನೋಡಬೇಕು.

English summary
Who will get Congress ticket in Gundlupet assembly constituency, Chamarajanagar. Sugar and Small Scale Industries Minister Dr. Geetha Mahadevaprasad sitting MLA of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X