Karnataka CM: ಕರ್ನಾಟಕ ಮುಂದಿನ ಸಿಎಂ ಯಾರು? ಕೃಷ್ಣಬೈರೇಗೌಡ ಉತ್ತರಿಸಿದ್ದು ಹೀಗೆ..
ಇನ್ನೂ 48 ಗಂಟೆಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಚುನಾವಣಾ ಪೂರ್ವ ಮತ್ತು ಮತಕಟ್ಟೆಗಳು ನುಡಿದ ಭವಿಷ್ಯದಂತೆಯೇ ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದು ಗ್ಯಾರೆಂಟಿ ಇದೆ. ಅದೇ ರೀತಿ ಸಿದ್ದರಾಮಯ್ಯ ಸಿಎಂ ಆಗೋದು ಪಕ್ಕ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಮೀಕ್ಷೆಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವುದಕ್ಕೆ ಫುಲ್ ಮಾರ್ಕ್ಸ್ ಹಾಕಿವೆ. ಮತಗಟ್ಟೆಗಳ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರ ಬಂದಿವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಗದ್ದುಗೆಗೆ ಏರುವುದು ಪಕ್ಕಾ ಆಗಿದೆ. ಇದರ ನಡುವೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಮೊದಲೇ ಹೇಳಿದ್ವಿ ಅಂತೇಳಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ ಆಗಿರೋದ್ರಿಂದ ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಯಾರೆಂಬ ಚರ್ಚೆ ಶುರುವಾಗಿದೆ.

ಈ ಬಗ್ಗೆ ಮಾಜಿ ಸಚಿವ ಕೃಷ್ಣ ಬೈರೇಗೌಡರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಮಾತನಾಡಿದ ಅವರು, 'ಮುಂದಿನ ಸಿಎಂ ಯಾರಾಗುತ್ತಾರೆ ಎಂದು ಹೈಕಮಾಂಡ ತೀರ್ಮಾನ ಮಾಡಲಿದೆ. ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದರು. ಯಾವಾಗ ಈ ಸರ್ಕಾರ ಹೋಗಲಿದೆ ಎಂದು ಕಾಯುತ್ತಾ ಇದ್ದರು. ಹೀಗಾಗಿ ನಮ್ಮ ಪಕ್ಷಕ್ಕೆ ಬಹುಮತ ಬಂದಿದೆ' ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ 'ಕೆಲವು ಸಮೀಕ್ಷೆಗಳಲ್ಲಿ ಹತ್ತಿರದ ಸಮೀಕ್ಷೆ ಬಂದಿದ್ದರೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ' ಎಂದು ಹೇಳಿದ್ದಾರೆ. 'ಹೀಗಾಗಿ ಯಾವ ಮೈತ್ರಿ ವಿಚಾರ ಬರುವುದಿಲ್ಲ. ಫಲಿತಾಂಶದ ಬಳಿಕ ಎಲ್ಲಾ ಶಾಸಕರ ಸಭೆ ನಡೆಸಿ, ಅಭಿಪ್ರಾಯವನ್ನು ಆಲಿಸಲಾಗುವುದು. ಆ ಬಳಿಕ ಹೈಕಮಾಂಡ್ ಜೊತೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಇನ್ನೂ 'ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಿಎಂ ಗದ್ದುಗೆಗಾಗಿ ಕಿತ್ತಾಟ ನಡೆಯುತ್ತಿದೆ ಎಂದು ಬಿಜೆಪಿ ಬಿಂಬಿಸಿತ್ತು. ಪಕ್ಷದಲ್ಲಿ ಈ ರೀತಿ ಏನೂ ಕೂಡ ಆಗಿಲ್ಲ. ಇಬ್ಬರೂ ನಾಯಕರು ಜವಬ್ದಾರಿಯನ್ನು ಅರಿತು ಕೆಲಸ ಮಾಡಿದ್ದಾರೆ. ಹಾಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಸುಭದ್ರ ಅಧಿಕಾರವನ್ನು ನೀಡುತ್ತೇವೆ. ಜನರೂ ಕೂಡ ನಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ' ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ಇನ್ನೂ ಸಿದ್ದರಾಮಯ್ಯ ಜನಪ್ರಿಯ ನಾಯಕ. ರಾಜ್ಯದಲ್ಲಿ ಮತದಾನಪ್ರಭುಗಳ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಯಾವುದೇ ಸಮೀಕ್ಷೆ ನೋಡಿದರೂ ಸಿದ್ದರಾಮಯ್ಯ ಹೆಸರೇ ಮುಂಚುಣಿಯಲ್ಲಿದೆ. ಕಳೆದ ಅಧಿಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅತ್ಯುತ್ತಮ ಆಡಳಿತ ನೀಡಿದ್ದರು. ಡಿಕೆ ಶಿವಕುಮಾರ್ ಸಂಘಟನೆ ಮಾಡಿದ್ದರು. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಇಬ್ಬರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ಬರು ನಾಯಕರು ಸಿಎಂ ಗದ್ದುಗೆಗೆ ಅರ್ಹರಿದ್ದಾರೆ. ಇಬ್ಬರಿಗೂ ಸಮಾನ ಸ್ಥಾನಮಾನ ಸಿಗಬೇಕು ಎನ್ನುವುದು ಕಾಂಗ್ರೆಸ್ ಇನ್ನುಳಿದ ನಾಯಕರ ಅಭಿಪ್ರಾಯ.
ಚುನಾವಣಾಪೂರ್ಣ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಅದರಲ್ಲೂ ಸೌತ್ ಪೋಲ್ ಸರ್ವೇಯಲ್ಲಿ ಮುಂದಿನ ಸಿಎಂ ಯಾರಾಗಬೇಕು ಎನ್ನುವ ಪ್ರಶ್ನೆಗೆ ಶೇ.30ರಷ್ಟು ಜನ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿದರೆ, ಕೇವಲ ಶೇ.3ರಷ್ಟು ಜನ ಡಿಕೆ ಶಿವಕುಮಾರ್‌ತ್ತ ಒಲವು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಹೆಚ್ಚು ರಾಜ್ಯ ಕಾಂಗ್ರೆಸ್ ನಾಯಕರಲ್ಲೂ ಸಿದ್ದರಾಮಯ್ಯ ಪರ ಬೆಂಬಲವಿದೆ. ಹೀಗಾಗಿ ಮುಂದಿನ ಐದು ವರ್ಷದ ಆಡಳಿತದಲ್ಲಿ ಸಿದ್ದರಾಮಯ್ಯ ಮೊದಲ ಸಿಎಂ ಆದರೆ ಎರಡನೇ ಸಿಎಂ ಡಿಕೆ ಶಿವಕುಮಾರ್ ಆಗೋ ಸಾಧ್ಯತೆ ಇದೆ.












Click it and Unblock the Notifications