Bengaluru In Charge Minister: ಸಿದ್ದು ಸಿಎಂ, ಡಿಕೆಶಿ ಡಿಸಿಎಂ: ಬೆಂಗಳೂರು ಉಸ್ತುವಾರಿ ಸಚಿವರು ಯಾರಾಗ್ತಾರೆ?
ಬೆಂಗಳೂರು, ಮೇ 19: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ನಲ್ಲಿ ಆರಂಭದಲ್ಲಿಯೇ ಮುಖ್ಯಮಂತ್ರಿ ವಿಚಾರವಾಗಿ ಒಂದು ವಾರಗಳ ಕಾಲ ಚರ್ಚೆ, ಸಂಧಾನ ನಡೆದಿದ್ದು, ಕೊನೆಗೂ ಹೈಕಮಾಂಡ್ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ ಕೆ ಶಿವಕುಮಾರ್ ಅವರನ್ನೇ ಘೋಷಿಸಿದೆ.
ಇತ್ತ ಕಾಂಗ್ರೆಸ್ ನಾಯಕರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇತ್ತ ಈ ಬಾರೀ ಬೆಂಗಳೂರಿಗೆ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬುದು ಕುತೂಹಲದ ವಿಚಾರವಾಗಿದೆ. ಏಕೆಂದರೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಉಸ್ತುವಾರಿ ವಿಚಾರವಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈ ಬಾರಿ ಬೆಂಗಳೂರು ಉಸ್ತುವಾರಿ ಯಾರಿಗೆ ಸಿಗಬಹುದು ಎಂಬ ಚರ್ಚೆಗಳು ಶುರುವಾಗಿದೆ.

ಬೆಂಗಳೂರು ರಾಜ್ಯ ರಾಜಧಾನಿ. ಹಲವು ಆಗುಹೋಗುಗಳ ಶಕ್ತಿಕೇಂದ್ರ. ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಬೆಂಗಳೂರಿನ ಪಾಲು 28 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇನ್ನೂ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಇಲ್ಲಿ ಹೆಚ್ಚು ಕಡಿಮೆ ಸಮಬಲದ ಪೈಪೋಟಿ ನೀಡಿದರೆ, ಜೆಡಿಎಸ್ ಈ ಬಾರೀ ತನ್ನ ಅಸ್ವಿತ್ವವನ್ನ ಕಳೆದುಕೊಂಡಿದೆ.
ಇನ್ನೂ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಂತೆ ಮುಂಬರುವ ರಾಜ್ಯ ರಾಜಧಾನಿ ಬೆಂಗಳೂರಿನ ಅಧಿಕಾರದ ಚುಕ್ಕಾಣಿ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಬಾರೀ ಹಳೆದು ತೂಗಿ ಬೆಂಗಳೂರು ಉಸ್ತುವಾರಿಯನ್ನ ನೀಡಲಿದೆ. ಇತ್ತ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ, ಗಾಂಧಿನಗರದಿಂದ ದಿನೇಶ್ ಗುಂಡೂರಾವ್, ಹೆಬ್ಬಾಳದಿಂದ ಬೈರತಿ ಸುರೇಶ್, ಸರ್ವಜ್ಞನಗರದಿಂದ ಕೆ ಜೆ ಜಾರ್ಜ್, ಶಿವಾಜಿನಗರದಿಂದ ರಿಜ್ವಾನ್ ಆರ್ಷದ್, ಶಾಂತಿನಗರದಿಂದ ಎನ್‌ಎ ಹ್ಯಾರಿಸ್, ವಿಜಯನಗರದಿಂದ ಎಂ.ಕೃಷ್ಣಪ್ಪ, ಗೋವಿಂದರಾಜನಗರದಿಂದ ಪ್ರಿಯಕೃಷ್ಣ, ಚಾಮರಾಜಪೇಟೆಯಿಂದ ಜಮೀರ್ ಅಹ್ಮದ್ ಖಾನ್, ಬಿಟಿಎಂ ಲೇಔಟ್‌ನಿಂದ ರಾಮಲಿಂಗಾ ರೆಡ್ಡಿ, ಆನೇಕಲ್‌ನಿಂದ ಬಿ ಶಿವಣ್ಣ ಗೆಲುವು ಸಾಧಿಸಿದ್ದಾರೆ.

ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಅವಧಿಯಲ್ಲಿ ಅಂದರೆ 2013ರಿಂದ 2018ರ ಅವಧಿಯಲ್ಲಿ ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರಾಗಿದ್ದವರು ರಾಮಲಿಂಗಾ ರೆಡ್ಡಿ. ಅವರಿಗೆ ಈ ವಿಚಾರದಲ್ಲಿ ಹೆಚ್ಚಿನ ಅನುಭವ ಇದೆ. ಈ ಶಾಸಕರ ಪೈಕಿ ಬೆಂಗಳೂರು ಭಾಗದಲ್ಲಿ ಹಾಗೂ ಬಿಬಿಎಂಪಿ ಮಟ್ಟದಲಿ ಹೆಚ್ಚು ಪ್ರಬಲ್ಯ ಹೊಂದಿರುವ ರಾಮಲಿಂಗರೆಡ್ಡಿಯವರೆಗೆ ಈ ಬಾರೀ ಬೆಂಗಳೂರು ಜಿಲ್ಲೆಯ ಉಸ್ತುವಾರಿಯನ್ನ ನೀಡಲಿದ್ದಾರೆ ಎನ್ನಲಾಗಿದೆ. ಏಕೆಂದರೆ ಬೆಂಗಳೂರು ನಗರದ ಪ್ರತಿಯೊಂದು ಸಮಸ್ಯೆಯ ಬಗ್ಗೆ ಹಾಗೂ ಸಮಸ್ಯೆಗೆ ತಕ್ಕ ಪರಿಹಾರದ ಬಗ್ಗೆ ರಾಮಲಿಂಗರೆಡ್ಡಿ ತಿಳಿದುಕೊಂಡಿದ್ದಾರೆ. ಇನ್ನೂ ಬಿಬಿಎಂಪಿ ಚುನಾವಣಾ ಹಿನ್ನಲೆ ರಾಮಲಿಂಗರೆಡ್ಡಿಯವರಿಗೆ ಬಹುತೇಕ ಬೆಂಗಳೂರು ಉಸ್ತುವಾರಿ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೂ ರಾಮಲಿಂಗಾ ರೆಡ್ಡಿ ಅವರನ್ನ ಹೊರೆತು ಪಡಿಸಿದರೇ ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್ ಹಿರಿಯರು. ಹಿಂದೆ ಸಚಿವರಾಗಿದ್ದವರು. ಇನ್ನು ಹಿರಿಯರನ್ನು ಬಿಟ್ಟು ಬೇರೆಯವರಿಗೆ ಬೆಂಗಳೂರು ಉಸ್ತುವಾರಿ ವಹಿಸುವುದಾದರೆ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಹೆಸರು ಮುಂಚೂಣಿಗೆ ಬರಬಹುದು. ಬೆಂಗಳೂರು ಉಸ್ತುವಾರಿ ಸಚಿವರ ಸ್ಥಾನಕ್ಕೆ ಇವರು ಕೂಡ ಪೈಪೋಟಿ ನೀಡಬಲ್ಲವರು ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications