ಚಿಕ್ಕಮಗಳೂರು ಹನಿಟ್ರ್ಯಾಪ್, ಕಿಡಿಕಾರಿದ ಎಸ್ ಪಿ ಅಣ್ಣಾಮಲೈ

Posted By:
Subscribe to Oneindia Kannada

ಚಿಕ್ಕಮಗಳೂರು, ಜನವರಿ 23: ಹನಿಟ್ರ್ಯಾಪ್ ದಂಧೆಯಲ್ಲಿ ಸಿಕ್ಕಬಿದ್ದು ನರಸಿಂಹರಾಜಪುರ ಠಾಣೆಯಲ್ಲಿ ಬಂಧಿದ್ದ ಆರೋಪಿಗಳನ್ನು ಬಿಟ್ಟು ಕಳುಹಿಸಿದ ಘಟನೆ ವಿರುದ್ಧ ಎಸ್ ಪಿ ಅಣ್ಣಾಮಲೈ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಕ್ರಮಕ್ಕೆ ತಾಕೀತು ಮಾಡಿದ್ದಾರೆ.[ಹನಿಟ್ರಾಪ್ ಎಂದರೇನು?]

ಹನಿಟ್ರ್ಯಾಪಿನಲ್ಲಿ ತೊಡಗಿದ್ದ ಖೈರುನ್ನಿಸಾ, ರುಕ್ಸಾನಾ ಮತ್ತು ಅರುಣ್ ಎನ್ನುವವರನ್ನು ಬಂಧಿಸಲಾಗಿತ್ತು. ಆದರೆ ಅವರು ಠಾಣೆಯಿಂದ ಪರಾರಿಯಾಗಿದ್ದರು. ಖೈರುನ್ನಿಸಾ ಮಗಳಾದ ರುಕ್ಸಾನಳನ್ನು 50 ಸಾವಿರಕ್ಕೆ ಮಾರಾಟ ಮಾಡಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದಳು ಎಂದು ವರದಿಯಲ್ಲಿದೆ. ಹೀಗಾಗಿ ಆರೋಪಿಗಳನ್ನು ಬಿಟ್ಟಿರುವ ಪೊಲೀಸರ ವಿರುದ್ಧ ಎಸ್ ಪಿ ಕಿಡಿಕಾರಿದ್ದು, ಹೆಚ್ಚುವರಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ತಿಳಿಸಿದರು.[ಹನಿಟ್ರ್ಯಾಪ್: ಏನಿದು ವರುಣ್ ಗಾಂಧಿ ಮೇಲಿನ ಗಂಭೀರ ಆರೋಪ?]

Who was arrested in honey-trap accuse escaped: SP against the ASI

ಹನಿಟ್ರ್ಯಾಪಿನಲ್ಲಿ ಬಂಧಿತರಾದ ಆರೋಪಿಗಳನ್ನು ಎಫ್ಐಆರ್ ದಾಖಲಾಗುವ ಮುನ್ನವೇ ಮೂವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಎಎಸ್ಐ ಶ್ರೀನಿವಾಸ್, ಕುಮಾರ ನಾಯ್ಕ ಮತ್ತು ಪಿಸಿಗಳಾದ ಯೋಗೇಂದ್ರ ಮತ್ತು ಚಂದ್ರ ಅವರು ಕರ್ತವ್ಯ ಲೋಪದ ಬಗ್ಗೆ ವಿಚಾರಣೆ ನಡೆಸಿ ಸೂಕ್ರ ಕ್ರಮ ಜರುಗಿಸುವುದಾಗಿ ಅಣ್ಣಾಮಲೈ ತಿಳಿಸಿದರು.[ಪೊಲೀಸರೇ ದೇಹದ ತೂಕ ಇಳಿಸಿಕೊಂಡರೆ ಮಾತ್ರ ವರ್ಗಾವಣೆ]

ಇನ್ನು ಠಾಣೆಯಿಂದ ಪರಾರಿಯಾಗಿರುವ ಮೂವರಲ್ಲಿ ಅರುಣ್ ಅವರನ್ನು ವಶಕ್ಕೆ ಪಡೆದಿದ್ದು ಖೈರುನ್ನಿಸಾ ಮತ್ತು ರುಕ್ಸಾನಾಗಾಗಿ ಶೋಧ ಮುಂದುವರೆದಿದೆ. ಅಲ್ಲದೆ ಪರಾರಿಯಾದ ತಂಡ ಹಲವರಿಗೆ ವಂಚನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Who was arrested in honey-trap The police sent him to out in the station in chikkanagalur, The SP Annamalai police action against the ASI. The investigation was conducted in the arrest of a fugitive
Please Wait while comments are loading...