ಭಾರತ ಬಂದ್ : ಯಾರು, ಏನು ಹೇಳಿದರು?

Recommended Video

      Bharat Bandh : ಇಂದಿನ ಭಾರತ್ ಬಂದ್ ಬಗ್ಗೆ ಯಾರು ಏನು ಹೇಳಿದರು? | Oneindia Kannada

      ಬೆಂಗಳೂರು, ಸೆಪ್ಟೆಂಬರ್ 10 : ಇಂಧನ ಬೆಲೆಗಳ ಹೆಚ್ಚಳ ವಿರೋಧಿಸಿ ಕರೆ ನೀಡಿರುವ ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

      ಕೆಲವು ಕಡೆ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು ಬಿಟ್ಟರೆ ಶಾಂತಿಯುತವಾಗಿ ಬಂದ್ ನಡೆಯುತ್ತಿದೆ. ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕೆಲವು ಕಡೆ ಹೋಟೆಲ್, ಅಂಗಡಿಗಳು ತೆರೆದಿವೆ.

      ಕಲಬುರಗಿಯಲ್ಲಿ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ನರೇಂದ್ರ ಮೋದಿ ಈಡೇರಿಸಿಲ್ಲ' ಎಂದು ಆರೋಪ ಮಾಡಿದರು.

      'ಭಾರತ ಬಂದ್ ದುರುದ್ದೇಶದಿಂದ ಕೂಡಿದೆ. ತೈಲ ಬೆಲೆ ಏಕೆ ಹೆಚ್ಚಳವಾಗಿದೆ ಎಂಬುದು ಜಗತ್ತಿಗೆ ತಿಳಿದಿದೆ. ಕರ್ನಾಟಕದಲ್ಲಿ ಶಾಲಾ-ಕಾಲೇಜು ಬಂದ್ ಮಾಡಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಬಂದ್ ಮಾಡಿಸಲಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರಿದರು.

      ಸ್ವಯಂ ಪ್ರೇರಣೆಯಿಂದ ಜನರ ಹೋರಾಟ

      ಸ್ವಯಂ ಪ್ರೇರಣೆಯಿಂದ ಜನರ ಹೋರಾಟ

      ಕಲಬುರಗಿಯಲ್ಲಿ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, 'ಜನರು ಬೀದಿಗಿಳಿದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಜನರು ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ವಾಸ್ತವ ಅರಿಯದೇ ಮಾತನಾಡುತ್ತಿದ್ದಾರೆ' ಎಂದು ಹೇಳಿದರು.

      'ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಒಂದು ಭರವಸೆಯನ್ನು ಈಡೇರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಾ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

      ದುರುದ್ದೇಶದ ಬಂದ್

      ದುರುದ್ದೇಶದ ಬಂದ್

      'ಭಾರತ ಬಂದ್ ದುರುದ್ದೇಶದಿಂದ ಕೂಡಿದೆ. ತೈಲ ಬೆಲೆ ಏಕೆ ಹೆಚ್ಚಳವಾಗಿದೆ ಎಂಬುದು ಜಗತ್ತಿಗೆ ಗೊತ್ತು. ಕರ್ನಾಟಕದಲ್ಲಿ ವಿಶೇಷವಾಗಿ ಶಾಲಾ-ಕಾಲೇಜು ಬಂದ್ ಮಾಡಿಸಿ, ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಬಂದ್ ಶಾಂತಿಯುತವಾಗಿ ನಡೆಯಲಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಂದ್ ಮಾಡಿದರೆ ನಮ್ಮ ಅಭ್ಯಂತರವೇನಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

      ನಾಲ್ಕೂವರೆ ವರ್ಷದಲ್ಲಿ ಅಚ್ಛೇದಿನ್ ನೋಡಿಲ್ಲ

      ನಾಲ್ಕೂವರೆ ವರ್ಷದಲ್ಲಿ ಅಚ್ಛೇದಿನ್ ನೋಡಿಲ್ಲ

      ಬೆಂಗಳೂರಿನಲ್ಲಿ ಬಂದ್ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 'ಕೇಂದ್ರ ಸರ್ಕಾರ ಜನರ ಬದುಕನ್ನು ದುಸ್ಥರಗೊಳಿಸಿದೆ. ನಾಲ್ಕೂವರೆ ವರ್ಷಗಳಾದ್ರು ಒಂದು ದಿನವೂ ಅಚ್ಛೇದಿನ್ ನೋಡಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳನ್ನೇ ಹೇಳಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ' ಎಂದು ಆರೋಪಿಸಿದರು.

      ಜನಸಾಮಾನ್ಯರು ನೊಂದು ಹೋಗಿದ್ದಾರೆ

      ಜನಸಾಮಾನ್ಯರು ನೊಂದು ಹೋಗಿದ್ದಾರೆ

      ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು, 'ಮೋದಿ ರಾಜಕಾರಣದಿಂದ ಜನಸಾಮಾನ್ಯರು ನೊಂದು ಹೋಗಿದ್ದಾರೆ. ಒಂದು ಒಳ್ಳೆಯ ಕೆಲಸವನ್ನು ಸಹ ಪ್ರಧಾನಿ ಮೋದಿ ಮಾಡಿಲ್ಲ. ನೋಟುಗಳ ನಿಷೇಧದ ಬಳಿಕ ಜನರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಜನಪರ ಕೆಲಸ ಮಾಡಿ, ಅದನ್ನು ಬಿಟ್ಟು ಜನರಿಗೆ ತೊಂದರೆ ಕೊಡಬೇಡಿ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ತೈಲ ಬೆಲೆಯನ್ನು ತಕ್ಷಣ ಇಳಿಸಿ' ಎಂದು ಅವರು ಆಗ್ರಹಿಸಿದರು.

      ಬಂದ್‌ಗೆ ಜನರು ಬೆಂಬಲ ನೀಡಬಾರದು

      ಬಂದ್‌ಗೆ ಜನರು ಬೆಂಬಲ ನೀಡಬಾರದು

      'ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಹೆಚ್ಚಾದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ. ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಜನರು ಬಂದ್‌ಗೆ ಬೆಂಬಲ ನೀಡಬಾರದು' ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+