ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು ಯಾರು..? ಇಲ್ಲಿದೆ ಪಟ್ಟಿ

Recommended Video

      Karnataka Elections 2018 : ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು | Oneindia Kannada

      ಬೆಂಗಳೂರು, ಏಪ್ರಿಲ್ 05: ಕರ್ನಾಟಕದ ಅತ್ಯಂತ ಶ್ರೀಮಂತ ಶಾಸಕರು ಯಾರು..? ಅತೀ ಕಡಿಮೆ ಆಸ್ತಿ ಹೊಂದಿರುವ ಶಾಸಕರು ಯಾರು? ಒಟ್ಟು ಎಷ್ಟು ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ? ಚುನಾವಣೆಯ ಹೊತ್ತಿನಲ್ಲಿ ಈ ಎಲ್ಲ ಪ್ರಶ್ನೆಗಳೂ ಪ್ರಸ್ತುತ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

      ಒಟ್ಟು 224 ಶಾಸಕರಲ್ಲಿ 2017 ಶಾಸಕರ ಅಫಿಡವಿಟ್ ಗಳನ್ನು ಪರಿಶೀಲಿಸಿದ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕೆ ರಿಪಾರ್ಮ್ಸ್ ವರದಿ ನೀಡಿದೆ. ಅದರ ಪ್ರಕಾರ ಕರ್ನಾಟಕದ 68 ಶಾಸಕರ ವಿರುದ್ಧ ಅಪರಾಧ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ. ಅಲ್ಲದೆ, 35 ಶಾಸಕರ ಮೇಲೆ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

      ಮೇ 12 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರಲ್ಲಿ ಅತ್ಯಂತ ಹೆಚ್ಚು ಆಸ್ತಿ ಹೊಂದಿರುವವರ್ಯಾರು, ಎಷ್ಟು ಜನರ ಮೇಲೆ ಅಪರಾಧ ಪ್ರಕರಣಗಳಿವೆ ಎಂಬಿತ್ಯಾದಿ ವಿವರ ಇಲ್ಲಿದೆ.

      ಶ್ರೀಮಂತ ಶಾಸಕರು ಯಾರು

      ಶ್ರೀಮಂತ ಶಾಸಕರು ಯಾರು

      ಪ್ರಿಯಾಕೃಷ್ಣ- ಕಾಂಗ್ರೆಸ್ ಪಕ್ಷ - 910 ಕೋಟಿ ರೂ.(ಆಸ್ತಿ ಮೌಲ್ಯ)
      ನಾಗರಾಜು ಎನ್.- ಕಾಂಗ್ರೆಸ್- 470 ಕೋಟಿ ರೂ.
      ಅನಿಲ್ ಎಚ್ ಲಾಡ್-ಕಾಂಗ್ರೆಸ್-288 ಕೋಟಿ ರೂ.
      ಡಿ.ಕೆ.ಡಿವಕುಮಾರ್ -ಕಾಂಗ್ರೆಸ್ - 250 ಕೋಟಿ ರೂ.
      ಸಂತೋಷ್ ಲಾಡ್ - ಕಾಂಗ್ರೆಸ್- 186 ಕೋಟಿ ರೂ.

      ಕಡಿಮೆ ಆಸ್ತಿ ಹೊಂದಿರುವ ಶಾಸಕರು

      ಕಡಿಮೆ ಆಸ್ತಿ ಹೊಂದಿರುವ ಶಾಸಕರು

      ಎಚ್ ರಾಜೇಶ್-ಕಾಂಗ್ರೆಸ್- 7 ಲಕ್ಷ ರೂ.
      ಡಿ.ರಾಮಕೃಷ್ಣ-ಕಾಂಗ್ರೆಸ್- 40 ಲಕ್ಷ ರೂ.
      ಜಿ ರಾಮಕೃಷ್ಣ- ಕಾಂಗ್ರೆಸ್- 50 ಲಕ್ಷ ರೂ.
      ಬಿ.ಬಿ.ನಿಂಗಯ್ಯ- ಜೆಡಿಎಸ್- 52 ಲಕ್ಷ ರೂ.
      ವರ್ತೂರ್ ಪ್ರಕಾಶ್ -ಪಕ್ಷೇತರ-66 ಲಕ್ಷ ರೂ.

      ಸರಾಸರಿ ಆಸ್ತಿ

      ಸರಾಸರಿ ಆಸ್ತಿ

      ಒಂದೊಂದು ಪಕ್ಷದ ಲೆಕ್ಕದಲ್ಲಿ ಪ್ರತಿ ಶಾಸಕರ ಸರಾಸರಿ ಆಸ್ತಿ ಎಷ್ಟು? ಕಾಂಗ್ರೆಸ್ಸಿನ 114 ಶಾಸಕರ ಸರಾಸರಿ ಆಸ್ತಿ 32.60 ಕೋಟಿ ರೂ.
      ಬಿಜೆಪಿಯ 40 ಶಾಸಕರ ಸರಾಸರಿ ಆಸ್ತಿ 13.23 ಕೋಟಿ ರೂ.
      ಜೆಡಿಎಸ್ ನ 35 ಶಾಸಕರ ಸರಾಸರಿ ಆಸ್ತಿ 12.80 ಕೋಟಿ ರೂ.
      ಕೆಜೆಪಿಯ 4 ಶಾಸಕರ ಸರಾಸರಿ ಆಸ್ತಿ 2.92 ಕೋಟಿ ರೂ.
      9 ಪಕ್ಷೇತರ ಶಾಸಕರ ಸರಾಸರಿ ಆಸ್ತಿ ವಿವರ: 23.04 ಕೋಟಿ ರೂ.

      ಶಾಸಕರ ವಯಸ್ಸೆಷ್ಟು?

      ಶಾಸಕರ ವಯಸ್ಸೆಷ್ಟು?

      25- 40 ವರ್ಷ ವಯಸ್ಸಿನ ಸುಮಾರು 19 ಕ್ಕಿಂತಲೂ ಹೆಚ್ಚು ಶಾಸಕರಿದ್ದಾರೆ.
      41 ರಿಂದ 60 ವರ್ಷ ವಯಸ್ಸಿನ 140 ಶಾಸಕರಿದ್ದಾರೆ. 46 ಶಾಸಕರು 61 ರಿಂದ 80 ವರ್ಷ ವಯಸ್ಸಿನವರೆಂದು ಘೋಷಿಸಿದ್ದಾರೆ.
      2 ಶಾಸಕರು 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿದ್ದಾರೆ.
      207 ಶಾಸಕರಲ್ಲಿ ಕೇವಲ 6 ಜನ ಮಾತ್ರವೇ ಮಹಿಳೆಯರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+