ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ, ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ನೀಡಿರುವ ವರದಿ ಬಗ್ಗೆ ಸರ್ಕಾರ ಇಂದು ಅಂತಿಮ ನಿರ್ಧಾರ ಕೈಗೊಂಡಿದೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲೇ ಸದ್ದು ಮಾಡುತ್ತಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಹಿಂದುಗಳನ್ನು ಒಡೆಯ ಸರ್ಕಾರದ ಕ್ರಮ ಸ್ವಾಗತಾರ್ಹವಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರೆ, ಶೇ.9 (2011 ರ ಜನಗಣತಿ ಪ್ರಕಾರ)ರಷ್ಟು ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮುದಾಯಕ್ಕೆ ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಕ್ಖ್, ಜೈನರಂತೆ ಪ್ರತ್ಯೇಕ ಧರ್ಮ ಹೊಂದುವ ಅರ್ಹತೆ ಇದೆ ಎಂದು ಮತ್ತಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ.

ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
ಧರ್ಮದ ವಿಚಾರವನ್ನು ಬೇಕೆಂದೇ ಮುಖ್ಯಮಂತ್ರಿ ಮೈಮೇಲೆಳೆದುಕೊಂಡಿದ್ದಾರೆ. ಚುನಾವಣೆ ಸಮಯವಾಗಿರುವುದರಿಂದ ಲಾಭಕ್ಕಾಗಿ ಈ ವಿವಾದ ಸೃಷ್ಟಿಸಿದ್ದಾರೆ. ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿ ಸರ್ಕಾರಿ ಪ್ರಾಯೋಜಿತ. ಸರ್ಕಾರ ನಾಟಕವಾಡುತ್ತಿದೆ.
-ಜಗದೀಶ್ ಶೆಟ್ಟರ್, ಬಿಜೆಪಿ ಮುಖಂಡ

ಎಂ.ಬಿ.ಪಾಟೀಲ್ ಹೇಳಿಕೆ
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಸಮೀತಿ ನೀಡಿದ ವರದಿಯನ್ನೇ ನಾವೂ ಪುನರುಚ್ಛರಿಸಿದ್ದೇವೆ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಲಿಂಗಾಯತ ಸುಮಾದಯ, ಬಸವಣ್ಣನವರ ಅನುಯಾಯಿಗಳ ಪರವಾಗಿ ಕೃತಜ್ಞತೆ ಅನುಭವಿಸುತ್ತೇನೆ.
-ಎಂ.ಬಿ.ಪಾಟೀಲ್, ಸಚಿವ

ಡಾ.ಜಿ.ಪರಮೇಶ್ವರ್ ಹೇಳಿಕೆ
ಯಾವುದೇ ಪಕ್ಷವಾಗಲಿ ಒಂದು ಧರ್ಮವನ್ನು ನಿರ್ಧಾರ ಮಾಡುವುದಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷವೂ ನಿರ್ಧಾರ ಮಾಡುವುದಕ್ಕಾಗುವುದಿಲ್ಲ. ಸರ್ಕಾರಕ್ಕೆ ಮನವಿ ಪತ್ರವನ್ನು ಕೊಟ್ಟಿದ್ದಾರೆ. ಅದರ ಕಾರ್ಯನಿರ್ವಹಣೆ ಪ್ರಗತಿಯಲ್ಲಿದೆ. ಅದರ ಸಾಧಕ - ಬಾಧಕಗಳನ್ನು ನೋಡಿ ಸಮಿತಿ ತೀರ್ಮಾನ ಕೈಗೊಳ್ಳತ್ತದೆ. ಅದಕ್ಕಾಗಿ ಕ್ಯಾಬಿನೆಟ್ ಸಬ್ ಕಮಿಟಿ ಹಾಗೂ ಎಕ್ಸ್ಪರ್ಟ್ ಕಮಿಟಿ ಮಾಡಿ ವರದಿ ಸಹ ತಗೆದುಕೊಳ್ಳಲಾಗಿದೆ. ಅದರ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಆದ್ರೆ ಕಾಂಗ್ರೆಸ್ ಪಕ್ಷ ಮಾತ್ರ ಈ ಧರ್ಮದ ವಿಚಾರದಲ್ಲಿ ಭಾಗಿಯಾಗಲ್ಲ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಸುರೇಶ್ ಕುಮಾರ್ ಹೇಳಿಕೆ
ಅಂತೂ ಸರಕಾರಕ್ಕೆ ತಾನು ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ಕೆಲಸವನ್ನು ಮಾಡಬಾರದ ರೀತಿಯಲ್ಲಿ ಮಾಡುವುದಕ್ಕೆ ಏನೋ ಹುಮ್ಮಸ್ಸು. 'ಆಸ್ತಾನ ತಜ್ಞರ' ಸಮಿತಿ ರಚಿಸಿ ಅವರು ಕೇಳಿದ ಸಮಯ ನೀಡದೆ ತಾನು ಹೇಳಿದ ಸಮಯದಲ್ಲಿಯೇ ಮಾಡಬೇಕೆಂದು ಹೇಳಿ, ಸಮುದಾಯವನ್ನು ಒಡೆಯುವುದು ತನ್ನ ಪರಮಾಧಿಕಾರವೆಂಬ ಅಟ್ಟಹಾಸ ಮೆರೆದಿದೆ.
-ಸುರೇಶ್ ಕುಮಾರ್, ಬಿಜೆಪಿ ಶಾಸಕ












Click it and Unblock the Notifications