Fresh Candidates In Congress List: ಟಿಕೆಟ್ ಪಡೆದ ಹೊಸಬರು ಯಾರೆಲ್ಲಾ ಗೊತ್ತಾ?

ಬೆಂಗಳೂರು, ಏಪ್ರಿಲ್‌ 15: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಅನೇಕ ಮಂದಿ ಹೊಸಬರಿಗೆ ಅವಕಾಶ ನೀಡಿದೆ.

ಹೊಸಬರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲ ಎಂದು ಹೇಳುತ್ತಿದ್ದವರಿಗೆ ಉತ್ತರ ನೀಡಲು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಭಾರೀ ಆಲೋಚನೆಯ ನಂತರ ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಕೋಲಾರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ನೀಡದೆ ಕೊತ್ತೂರು ಮಂಜುನಾಥ್‌ಗೆ ನೀಡಲಾಗಿದೆ.

Who Are The Fresh Candidates In Congresss 3rd List For Karnataka Assembly Election

ಕಾಂಗ್ರೆಸ್‌ ಹೊಸಬರ ಪಟ್ಟಿ ಇಂತಿದೆ:

ಕ್ರಮ ಸಂಖ್ಯೆ ಕ್ಷೇತ್ರ ಅಭ್ಯರ್ಥಿಗಳು
01 ಶಿರಹಟ್ಟಿ ಸುಜಾತಾ ದೊಡ್ಮನಿ
02 ಕಾರ್ಕಳ ಉದಯ್‌ ಶೆಟ್ಟಿ
03 ಮದ್ದೂರು ಉದಯ್‌ ಗೌಡ
04 ಪುತ್ತೂರು ಅಶೋಕ್ ರೈ
05 ಮೂಡಿಗೆರೆ ನಯನಾ ಮೋಟಮ್ಮ
06 ನವಲಗುಂದ ಎನ್‌ಎಚ್‌ ಕೋನರೆಡ್ಡಿ
07 ಕುಮಟ ನಿವೇದಿತ್ ಆಳ್ವಾ
08 ಸಿರಗುಪ್ಪ ಬಿಎಂ ನಾಗರಾಜ್‌
09 ಬಳ್ಳಾರಿ ನಗರ ಭರತ್‌ ರೆಡ್ಡಿ
10 ಜಗಳೂರು ಬಿ ದೇವೇಂದ್ರಪ್ಪ
11 ಹರಪ್ಪನಹಳ್ಳಿ ಎನ್‌ ಕೊಟ್ರೇಶ್‌
12 ಶಿವಮೊಗ್ಗ ಗ್ರಾಮಾಂತರ ಡಾ. ಶ್ರೀನಿವಾಸ್‌ ಕರಿಯಣ್ಣ
13 ಬೊಮ್ಮನಹಳ್ಳಿ ಉಮಾಪತಿ ಶ್ರೀನಿವಾಸ್‌ಗೌಡ
14 ತರೀಕೆರೆ ಜಿ ಎಚ್‌ ಶ್ರೀನಿವಾಸ
15 ಚಿಕ್ಕಬಳ್ಳಾಪುರ ಪ್ರದೀಪ್‌ ಈಶ್ವರ್‌

ಕಾಂಗ್ರೆಸ್‌ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸುದ್ದಿ ಮಾಡಿದ್ದ ಕೆಆರ್‌ ನಗರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಐಶ್ವರ್ಯ ಮಹಾದೇವ್‌, ರಾಜಾಜೀನಗರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಭವ್ಯಾ ನರಸಿಂಹಮೂರ್ತಿ ಸೇರಿದಂತೆ ಇತರರಿಗೆ ಟಿಕೆಟ್‌ ನೀಡಲಾಗಿಲ್ಲ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಪಕ್ಷವು 58 ಕ್ಷೇತ್ರಗಳಲ್ಲಿ ಟಿಕೆಟ್‌ ಬಾಕಿ ಇರಿಸಿಕೊಂಡಿತ್ತು. ಈ ಪೈಕಿ 43 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಆ ಮೂಲಕ ಇನ್ನೂ 15 ಕ್ಷೇತ್ರಗಳ ಟಿಕೆಟ್‌ ಅನ್ನು ಬಾಕಿ ಉಳಿಸಿಕೊಂಡಿದೆ. ಇನ್ನು ಬಿಜೆಪಿಯಿಂದ ನಿನ್ನೆ ತಾನೆ ಬಂದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಅಥಣಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪಕ್ಷವು ತನ್ನ ನಾಯಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂದು ಲಕ್ಷ್ಮಣ ಸವದಿ ಆರೋಪಿಸಿ, ಕಾಂಗ್ರೆಸ್‌ ಸೇರಿದ್ದಾರೆ. ಇದಾದ ಒಂದು ದಿನದ ಬಳಿಕ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ದೊರೆತಿದೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಪಕ್ಷದ ಹಿರಿಯ ನಾಯಕರಾಗಿರುವ ಸವದಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಅವರನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ. ಕೋಲಾರ ಕ್ಷೇತ್ರವನ್ನು ಕೊತ್ತೂರು ಮಂಜುನಾಥ್‌ಗೆ ನೀಡಲಾಗಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಾರೆ ಎಂಬ ಉಹಾಪೋಹಗಳಿಗೆ ತೆರೆ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+