ಬೆಂಗಳೂರಿಗೆ ಆಧಾರ್ LPG ಗ್ಯಾಸ್ ಯಾವಾಗಿನಿಂದ?
ಬೆಂಗಳೂರು, ಸೆಪ್ಟೆಂಬರ್ 20: ಮಹತ್ವದ 'ಆಧಾರ್' ಗುರುತಿನ ಸಂಖ್ಯೆ ಮೂಲಕ ಮನೆಮನೆಗಳಿಗೆ ಅಡುಗೆ ಅನಿಲ ವಿತರಿಸುವ ಕಾರ್ಯ ಈಗಾಗಲೇ ರಾಜ್ಯದ ಒಂದೆರಡು ಜಿಲ್ಲೆಗಳಲ್ಲಿ ಅಂಬೆಗಾಲಿಟ್ಟಿದೆ. ಇನ್ನೂ ಒಂದಷ್ಟು ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ.
ಈ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಯಾವಗಿನಿಂದ ಈ Aadhaar-based Direct Benefit Transfer (DBT) ವ್ಯವಸ್ಥೆ ಜಾರಿಗೆ ಬರುತ್ತದೆ ತಿಳಿಸಿ ಎಂದು 'ಒನ್ಇಂಡಿಯಾಕನ್ನಡ' ಓದುಗರು ಒಂದೇ ಸಮನೆ ವಿಚಾರಿಸುತ್ತಿದ್ದಾರೆ.

ಹೌದು, 'ಆಧಾರ್' ಗುರುತಿನ ಸಂಖ್ಯೆ ಮೂಲಕ IOC, HPC ಮತ್ತು BPC ಕಂಪನಿಗಳ ಅಡುಗೆ ಅನಿಲ ಗ್ರಾಹಕರಿಗೆ LPG ಗ್ಯಾಸ್ ಸಿಲಿಂಡರ್ ವಿತರಣೆ ಕಾರ್ಯ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ 6 ಜಿಲ್ಲೆಗಳಲ್ಲಿ ಮುಂದಿನ ಮಾರ್ಚ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಆದರೆ ಅದು ಆ ಕಾಲಮಾನದಲ್ಲಿ ಜಾರಿಗೆ ಬರುವುದು ಅನುಮಾನವಾಗಿದೆ. ಏಕೆಂದರೆ ಹೇಳಿ ಕೇಳಿ ಅದು ಸಾರ್ವತ್ರಿಕ ಚುನಾವಣೆ ಸಂದರ್ಭ. ಹಾಗಾಗಿ ಮುಂದಿನ ಜೂನ್- ಜುಲೈ ವೇಳೆಗೆ ಈ ಆಧಾರ್ ಆಧರಿತ DBT ಸೇವೆ ಜಾರಿಗೆ ಬರುವ ಸಾಧ್ಯತೆಯಿದೆ.
ಉಳಿದ ಜಿಲ್ಲೆಗಳು ಯಾವುವು:? ಹಾವೇರಿ, ಕೊಪ್ಪಳ, ಬೀದರ್, ದಾವಣಗೆರೆ ಮತ್ತು ಬಿಜಾಪುರ. ಇನ್ನು ತುಮಕೂರು, ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆ ತೆವಳುತ್ತಾ ಜಾರಿಗೆ ಬಂದಿದೆ.
ಗಮನಿಸಿ, ಬೆಂಗಳೂರಿನಲ್ಲಿ ಇದುವರೆಗೂ ಶೇ. 60ರಷ್ಟು ಮಂದಿ 'ಆಧಾರ್' ಗುರುತಿನ ಸಂಖ್ಯೆ ಪಡೆದಿದ್ದಾರಾದರೂ ಅವರೆಲ್ಲ ಇನ್ನೂ ತಮ್ಮ ಬ್ಯಾಂಕ್ ಖಾತೆಯ ಜತೆ ಅದನ್ನು ಸೇರ್ಪಡೆ ಮಾಡಿಕೊಂಡಿಲ್ಲ. ಹಾಗಾಗಿ, ಈ ವ್ಯವಸ್ಥೆಯ ಫಲಾನುಭವಿಗಳಾಗಲು ತಕ್ಷಣವೇ ಆಧಾರ್ ಕಾರ್ಡ್ ಮಾಡಿಸಿಟ್ಟುಕೊಂಡು ಅದನ್ನು ನಿಮ್ಮ ಬ್ಯಾಂಕ್ ಖಾತೆಗೂ ಸೇರ್ಪಡೆ ಮಾಡಿಕೊಳ್ಳಿ. ನಿರೀಕ್ಷಿಸಿ: ಎಲ್ ಪಿಜಿ ಜೊತೆ ಆಧಾರ್ ಕಾರ್ಡ್ ಲಿಂಕ್ ಹೇಗೆ?












Click it and Unblock the Notifications