ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಎದುರಾದ ವಿಚಿತ್ರ ಸಮಸ್ಯೆಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 4: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಚಿತ್ರ ವಿಚಿತ್ರ ಸಮಸ್ಯೆಗಳು ಅವರ ಮನೆಯಲ್ಲಿ ಎದುರಾಗಿದ್ದವು.

ಐಟಿ ದಾಳಿ : ಡಿಕೆಶಿ ಮನೆಯಲ್ಲಿ ಇನ್ನು ಮುಗಿದಿಲ್ಲ ದಾಖಲೆಗಳ ಪರಿಶೀಲನೆ

ದಾಳಿ ನಡೆಸಿದ ಅಧಿಕಾರಿಗಳಿಗೆ ಡಿಕೆಶಿ ತಮ್ಮ ಮನೆಯ ಏರ್ ಕಂಡಿಷನರ್ ನಲ್ಲಿ ಹಣವನ್ನು ಸಂಗ್ರಹಿಸಿಟ್ಟಿರಬಹುದು ಎಂಬ ಅನುಮಾನ ಕಾಡತೊಡಗಿತು. ತಕ್ಷಣ ಐಟಿ ಇಲಾಖೆಯ ಅಧಿಕಾರಿಗಳು ಎಸಿ ತೆರೆಯಲು ಎಲೆಕ್ಟ್ರಿಷಿಯನ್ ಕರೆಸಿದರು.

ಡಿಕೆ ಶಿವಕುಮಾರ್ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ: ಸಂಕಷ್ಟದಲ್ಲಿ ಹೈಕಮಾಂಡ್?

ಇದಾದ ನಂತರ ಐಟಿ ಇಲಾಖೆಗೆ ಮನೆಯಲ್ಲಿ ಲಾಕರ್ ಗಳು ಸಿಕ್ಕಿದವು. ಅಧಿಕಾರಿಗಳು ಪೇಚಾಡಿ ಪೇಚಾಡಿ ಎರಡು ಲಾಕರ್ ಗಳನ್ನು ತೆರೆದರು. ಉಳಿದ ಮೂರನ್ನು ತೆರಯಲು ಸಾಧ್ಯವಾಗಲೇ ಇಲ್ಲ.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಪಾಸ್ವರ್ಡ್ ನೀಡದ ಡಿಕೆಶಿ

ಪಾಸ್ವರ್ಡ್ ನೀಡದ ಡಿಕೆಶಿ

ಡಿಜಿಟಲ್ ಲಾಕರ್ ತೆರೆಯಲು ಅಧಿಕಾರಿಗಳು ಪಾಸ್ವರ್ಡ್ಗಾಗಿ ಶಿವಕುಮಾರ್ ರನ್ನು ಕೇಳಿದರು. ಆದರೆ ಅವರೋ ನನಗೆ ನೆನಪಿಲ್ಲ; ಮರೆತು ಹೋಗಿದೆ ಎಂದು ಬಿಟ್ಟರು. ಅಂತಿಮವಾಗಿ ಕಮ್ಮಾರನಿಗೆ ಕರೆ ಹೋಯಿತು. ನಕಲಿ ಬೀಗದ ಕೀಲಿ ತಯಾರಿಸುವವ ಬಂದು ಬೀಗ ತಯಾರಿಸಿ ಲಾಕರ್ ಮುರಿಯಲಾಯಿತು. ಅಲ್ಲಿ ಐಟಿ ಇಲಾಖೆಯ ಅಧಿಕಾರಿಗಳಿಗೆ ಹಲವು ಹೂಡಿಕೆಯ ದಾಖಲೆಗಳು ಸಿಕ್ಕಿದವು.

ಲಾಕರ್ ನಲ್ಲಿ ಮಹತ್ವದ ದಾಖಲೆ

ಲಾಕರ್ ನಲ್ಲಿ ಮಹತ್ವದ ದಾಖಲೆ

ಸಿಂಗಾಪುರ್ ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡಿದ ದಾಖಲೆಗಳು ಅಲ್ಲಿದ್ದವು. ಇವನ್ನೆಲ್ಲಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯ ಮಗನೊಂದಿಗಿನ ಒಪ್ಪಂದಕ್ಕೆ ಸಂಬಂಧಿಸಿದ ಒಂದು ದಾಖಲೆ ಕೂಡ ಐಟಿಗೆ ಸಿಕ್ಕಿದೆ.

ವಿದೇಶಗಳಲ್ಲಿ ಹೂಡಿಕೆ

ವಿದೇಶಗಳಲ್ಲಿ ಹೂಡಿಕೆ

ಬರ್ಮಿಂಗ್ ಹ್ಯಾಮ್ ಆಸ್ತಿಯ ಹೊರತಾಗಿ ದುಬೈ ಮತ್ತು ಸಿಂಗಪುರದಲ್ಲಿ ಶಾಪಿಂಗ್ ಸಂಕೀರ್ಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡ ಬಗ್ಗೆ ಅಧಿಕಾರಿಗಳನ್ನು ಕೇಳಲಾಯಿತು. ಆದರೆ ಅಧಿಕಾರಿಗಳು ಸುದ್ದಿಯನ್ನು ಖಚಿತಪಡಿಸಲೂ ಇಲ್ಲ ಅತ್ತ ನಿರಾಕರಿಸಿಯೂ ಇಲ್ಲ.

ಡಿಕೆಶಿ ವಿಚಾರಣೆ

ಡಿಕೆಶಿ ವಿಚಾರಣೆ

ಇದೇ ವೇಳೆ ಸೌರ ವಿದ್ಯುತ್ ಉಪಕರಣ ಸಂಸ್ಥೆಗಳೊಂದಿಗೆ ನಡೆಸಿದ ಡೀಲ್ ಗೆ ಸಂಬಂಧಿಸಿದಂತೆ ಶಿವಕುಮಾರ್ ರನ್ನು ಸುಮಾರು ಎರಡು ಗಂಟೆಗಳ ಕಾಲ ಪ್ರಶ್ನಿಸಲಾಯಿತು. ಈ ವೇಳೆ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಮೂರನೇ ದಿನವೂ ಮುಂದುವರಿದ ದಾಳಿ

ಮೂರನೇ ದಿನವೂ ಮುಂದುವರಿದ ದಾಳಿ

ಡಿಕೆಶಿ ಮತ್ತು ಅವರ ಆಪ್ತರ ಮೇಲೆ ಮೂರನೇ ದಿನವೂ ದಾಳಿ ಮುಂದುವರಿದಿದೆ. ದೆಹಲಿಯ ಸಫ್ದರ್ ಜಂಗ್ ನಲ್ಲಿರುವ ಮನೆ, ಸದಾಶಿವನಗರದಲ್ಲಿರುವ ಮನೆ, ಮೈಸೂರಿನಲ್ಲಿರುವ ಮಾವ ತಿಮ್ಮಯ್ಯ ಮನೆ ಹಾಗೂ ಹಾಸನದಲ್ಲಿರುವ ಆಪ್ತ ಸಚಿನ್ ನಾರಾಯಣ್ ಸಹೋದರನ ಮನೆಯಲ್ಲಿ ಐಟಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Income Tax department which conducted raids on Karnataka's energy minister, D K Shivakumar had a peculiar problem to face. They suspected that he had stashed away cash in the air conditioner at his home.
Please Wait while comments are loading...