ಬುಧವಾರದ ಬದಲು ಗುರುವಾರ ಕರ್ನಾಟಕದಲ್ಲಿ ರಂಜಾನ್

Posted By:
Subscribe to Oneindia Kannada

ಬೆಂಗಳೂರು, ಜುಲೈ 05 : ಶಾಲಾ ವಿದ್ಯಾರ್ಥಿಗಳ ಪಾಲಕರು, ಬ್ಯಾಂಕಿನ ಗ್ರಾಹಕರು, ಸಾಫ್ಟ್ ವೇರ್ ಇಂಜಿನಿಯರುಗಳು, ಕರಿಕೋಟಿನ ಅಡ್ವೋಕೇಟುಗಳು, ಚಾರ್ಟರ್ಡ್ ಅಕೌಂಟಂಟುಗಳು, ಅವರು, ಇವರು ಎಲ್ಲರಲ್ಲಿಯೂ ಒಂದೇ ಪ್ರಶ್ನೆ? ಕರ್ನಾಟಕದಲ್ಲಿ ರಂಜಾನ್ ರಜಾ ಎಂದು?

ಬುಧವಾರವೋ, ಗುರುವಾರವೋ ಎಂಬ ಗೊಂದಲ ಹಲವಾರು ಜನರಲ್ಲಿ ಮನೆಮಾಡಿದೆ. ಹಿಂದೂ ಪಂಚಾಂಗಗಳ ಸೋಮವಾರ ಅಮವಾಸ್ಯೆ, ಮಂಗಳವಾರವೂ ಕೆಲವೊಬ್ಬರು ಆಚರಿಸಿದ್ದಾರೆ. ಅಮವಾಸ್ಯೆಯೇನೋ ಆಯಿತು, ಮರುದಿನ ಚಂದ್ರ ಕಾಣಿಸಿಕೊಂಡರಷ್ಟೇ ರಂಜಾನ್!

ಶಾಲೆಗಳಿಗೆ ರಜಾ ಇರುತ್ತಾ, ಬುಧವಾರ ಬ್ಯಾಂಕು ತೆರೆದಿರುತ್ತಾ, ಕೋರ್ಟು ಕಚೇರಿಗಳು ಬುಧವಾರ ಕೆಲಸ ಮಾಡುತ್ತವಾ ಇಂಬಿತ್ಯಾದಿ ಪ್ರಶ್ನೆಗಳಲ್ಲಿ ಮೂಡಿಬರುತ್ತಿದ್ದವು. ಕರ್ನಾಟಕ ಸರಕಾರ ಹೊರಡಿಸಿರುವ ಅಧಿಕೃತ ರಜಾದಿನಗಳ ಪಟ್ಟಿಯ ಪ್ರಕಾರ ಬುಧವಾರವೇ ರಜಾ. ಆದರೆ ಕೊನೆಗೆ ಗುರುವಾರ, ಜುಲೈ 7ರಂದು ರಜಾ ಎಂದು ರಾಜ್ಯ ಸರಕಾರ ಘೋಷಿಸಿದೆ.

ಸರಕಾರಿ ಆದೇಶ : "ಪ್ರಸಕ್ತ ವರ್ಷದ ಪವಿತ್ರ ರಂಜಾನ್ ಪ್ರಯುಕ್ತ ಬುಧವಾರ (6-7-2016) ಸಾರ್ವತ್ರಿಕ ರಜೆ ಘೋಷಿಸಿ ಹೊರಡಿಸಲಾಗಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದು ಪಡಿಸಿದ್ದು, ಚಂದ್ರ ದರ್ಶನ ಸಮಿತಿಯ ಸೂಚನೆಯನ್ವಯ ಗುರುವಾರ (7-7-2017) ರಜೆ ಘೋಷಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ." [ಇಫ್ತಾರ್ ಕೂಟದಲ್ಲಿ ಬಿರಿಯಾನಿ ಬಾರಿಸಿದ ಗರಿಗರಿ ನಾಯಕರು]

When is holiday for Ramzan in Karnataka?

ಇದಕ್ಕೂ ಮೊದಲು ಕರ್ನಾಟಕದ ಹಲವಾರು ಶಾಲೆಗಳು ಮಕ್ಕಳಿಗೆ ಬುಧವಾರವೇ ರಜಾ ದಿನವೆಂದು ಘೋಷಿಸಿದ್ದವು. ನಂತರ ಸರಕಾರ ಗುರುವಾರ ರಜಾ ಎಂದು ಘೋಷಿಸಿದ ನಂತರ ಬದಲಾವಣೆ ಮಾಡಿ ಗುರುವಾರ ರಜಾ ಎಂದಿವೆ. ಬ್ಯಾಂಕು ತೆರೆದಿರುತ್ತಾ ಇಲ್ಲವಾ ಎಂದು ಬಹಳಷ್ಟು ಜನ ತಲೆಯನ್ನೂ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ಹೆಚ್ಚುಕಡಿಮೆ ಎಲ್ಲ ವಹಿವಾಟನ್ನು ಅಂತರ್ಜಾಲದಲ್ಲಿಯೇ ಮಾಡಬಹುದು.

ಬೆಂಗಳೂರಿನ ಹಲವಾರು ಸಾಫ್ಟ್ ವೇರ್ ಕಂಪನಿಗಳು ಬುಧವಾರ ರಜಾ ಎಂದು ಘೋಷಿಸಿದ್ದರೆ, ಕೆಲವೊಂದು ಸಾಫ್ಟ್ ವೇರ್ ಕಂಪನಿಗಳು ಅವುಗಳು ಇತರ ದೇಶಗಳಿಗೆ ಸಲ್ಲಿಸುವ ಸೇವೆಗಳ ಆಧಾರದ ಮೇಲೆ ಗುರುವಾರ ರಜಾ ಘೋಷಿಸಿವೆ. ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯಿದೆ. [ರಂಜಾನ್ ಉಪವಾಸದ ನಂತರ ಹೊಟ್ಟೆ ತುಂಬಿಸುವ ಸಮೋಸ]

ಆದರೆ, ದೆಹಲಿಯಲ್ಲಿರುವ ಕೇಂದ್ರ ಸರಕಾರಿ ಕಚೇರಿಗಳು ಬುಧವಾರದ ಬದಲು ಗುರುವಾರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ನಿರ್ಧರಿಸಿವೆ. ದೆಹಲಿಯಲ್ಲಿ ಕೂಡ ಜುಲೈ 6ರಂದೇ ರಜಾ ನೀಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ತದನಂತರ ಜುಲೈ 7ರಂದು ರಜಾ ಘೋಷಿಸಲಾಗಿದೆ. [ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು, ರಂಜಾನ್ ನಿಮಿತ್ತ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When is the holiday for Ramzan in Karnataka? Many schools, banks, government offices, courts, software companies are closed on Wednesday, 6th July. But, many software companies and central government offices in Delhi are closed on Thursday, 7th July.
Please Wait while comments are loading...