ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ

ಚೀನಾದಿಂದ ಆರಂಭವಾಗಿ ಭಾರತಕ್ಕೂ ಬಂದು ಇದುವರೆಗೆ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಮಾರಣಾಂತಿಕ ಕೊರೊನಾ ವೈರಸ್ ಗೆ ಮದ್ದೇ ಇಲ್ಲವೇ ಎನ್ನುವುದು ಈಗ ಬಹು ಚರ್ಚಿತ ವಿಷಯ.

Recommended Video

      Kalaburagi marks one more corona case but Sriramulu urges not to worry

      ನಾಲ್ಕು ದಶಕಗಳ ಹಿಂದೆಯೇ ಇಂತದ್ದೊಂದು ವೈರಸ್ ವಿಶ್ವದಲ್ಲೆ ತಲ್ಲಣ ಮೂಡಿಸಲಿದೆ ಎನ್ನುವ ವಿಚಾರ ಪುಸ್ತಕವೊಂದರಲ್ಲಿ ಬಂದಿದ್ದು, ಕೆಲವು ದಿನಗಳಿಂದ ವೈರಲ್ ಆಗಿದೆ.

      1981ರಲ್ಲಿ ಬಿಡುಗಡೆಯಾಗಿದ್ದ 'ದಿ ಎಂಡ್ ಆಫ್ ಡೇಸ್' ಎನ್ನುವ ಪುಸ್ತಕದಲ್ಲಿ ಕೊರೊನಾ ವೈರಸ್ ಹೆಸರನ್ನು ಉಲ್ಲೇಖಿಸದೇ, ಆದರೆ 2020ರಲ್ಲಿ ವಿಶ್ವವೇ ತಲ್ಲಣಗೊಳ್ಳುವ ಕಾಯಿಲೆ ಎದುರಾಗಲಿದೆ ಎಂದು ಆ ಪುಸ್ತಕದಲ್ಲಿ ಬರೆಯಲಾಗಿತ್ತು.

      ಈಗ, ಈ ವೈರಸ್ ನಿಂದ ವಿಶ್ವಕ್ಕೆ ಯಾವಾಗ ಮುಕ್ತಿ ಎನ್ನುವ ವಿಚಾರವನ್ನು ಜ್ಯೋತಿಷಿಗಳು ಹೇಳಿರುವ ವಿಚಾರ ವಾಟ್ಸಾಪ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇಂಗ್ಲಿಶ್ ನಲ್ಲಿ ಹೇಳಲಾಗಿರುವ ಈ ಭವಿಷ್ಯದ ಪ್ರಕಾರ, ಈ ವೈರಸ್ ನಿಂದ ಜಗತ್ತಿಗೆ ಮುಕ್ತಿ ಯಾವಾಗ?

      ಸಿಲ್ವಿಯಾ ಬ್ರೌನಿ ಬರೆದ 'ದಿ ಎಂಡ್ ಆಫ್ ಡೇಸ್' ಎನ್ನುವ ಪುಸ್ತಕ

      ಸಿಲ್ವಿಯಾ ಬ್ರೌನಿ ಬರೆದ 'ದಿ ಎಂಡ್ ಆಫ್ ಡೇಸ್' ಎನ್ನುವ ಪುಸ್ತಕ

      ಸಿಲ್ವಿಯಾ ಬ್ರೌನಿ ಬರೆದ 'ದಿ ಎಂಡ್ ಆಫ್ ಡೇಸ್' ಎನ್ನುವ ಪುಸ್ತಕದಲ್ಲಿ ಬರೆಯಲಾಗಿದ್ದ ವಾಕ್ಯಗಳು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. "ಯಾವುದೇ ಲಸಿಕೆ ಕೊರೊನಾ ವೈರಸ್ ಅನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಈ ವೈರಸ್ ಇದ್ದಕ್ಕಿದ್ದಂತೆ ದೂರವಾಗುತ್ತದೆ. 10 ವರ್ಷಗಳ ನಂತರ ಮತ್ತೆ ಈ ವೈರಸ್ ದಾಳಿ ಮಾಡುತ್ತದೆ, ನಂತರ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ" ಇದು ಆ ಪುಸ್ತಕದಲ್ಲಿ ಬರೆದಿದ್ದ ಅಂಶ.

      ವಿಷ್ಣುಸಹಸ್ರನಾಮ ಪಠಣವೇ ಈ ವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಪರಿಹಾರ

      ವಿಷ್ಣುಸಹಸ್ರನಾಮ ಪಠಣವೇ ಈ ವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಪರಿಹಾರ

      ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಜ್ಯೋತಿಷ್ಯ ವಿಡಿಯೋ ಪ್ರಕಾರ (ಧ್ವನಿ ಯಾರದ್ದು ಎಂದು ತಿಳಿದುಬಂದಿಲ್ಲ), "ಅಮ್ಮ ನನಗೆ ನೀಡಿರುವ ಸಲಹೆಯ ಪ್ರಕಾರ, ವಿಷ್ಣುಸಹಸ್ರನಾಮ ಪಠಣವೇ ಈ ವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಪರಿಹಾರ. ಶುಶ್ರುತಾ ಎನ್ನುವ ವೈದ್ಯೆ ಕೂಡಾ ಚರಕ ಸಂಹಿತೆಯಲ್ಲೂ ಇದನ್ನೇ ಹೇಳಿದ್ದಾರೆ. ಕೊರೊನಾ ವೈರಸ್ ಹೆಸರನ್ನು ಅವರು ಉಲ್ಲೇಖಿಸಲಿಲ್ಲ, ಆದರೆ, ಈ ಮಾರಣಾಂತಿಕ ವೈರಸ್ ಬಗ್ಗೆ ಹೇಳಿದ್ದಾರೆ".

      ತಟ್ಟೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ತುಳಸಿ ಎಲೆಯನ್ನು ಹಾಕಿ

      ತಟ್ಟೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ತುಳಸಿ ಎಲೆಯನ್ನು ಹಾಕಿ

      "ವಿಷ್ಣುಸಹಸ್ರನಾಮ ಗೊತ್ತಿಲ್ಲದಿದ್ದವರು 'ಓಂ ನಮೋ ನಾರಾಯಣಾಯ ಅಥವಾ ಓಂ ನಮೋ ಭಗವತೇ ವಾಸುದೇವಾಯ' ಎನ್ನುವ ಮಂತ್ರವನ್ನು 101 ಬಾರಿ ಹೇಳಬೇಕು. ಒಂದು ತಾಮ್ರದ ಅಥವಾ ಮನೆಯಲ್ಲಿ ಲಭ್ಯವಿರುವ ತಟ್ಟೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ತುಳಸಿ ಎಲೆಯನ್ನು ಹಾಕಿ, ಮಂತ್ರ ಪಠಿಸುವಾಗ ತಟ್ಟೆಯನ್ನು ಮುಟ್ಟಿ , 101 ಬಾರಿ ಹೇಳಿದ ನಂತರ, ಆ ನೀರನ್ನು ಕುಡಿದರೆ, ಯಾವ ವೈರಸ್ ಕೂಡಾ ಹತ್ತಿರ ಬರುವುದಿಲ್ಲ" ಎಂದು ಆಡಿಯೋದಲ್ಲಿ ಹೇಳಲಾಗಿದೆ.

      ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಿಂದ ಕೊರೊನಾ ವೈರಸ್ ನಿಂದ ಮುಕ್ತಿ

      ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಿಂದ ಕೊರೊನಾ ವೈರಸ್ ನಿಂದ ಮುಕ್ತಿ

      ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೈರಸ್ ಎಂದರೆ ರಾಹು. ಇವನು ಮಿಥುನ ರಾಶಿ, ಆದ್ರಾ ನಕ್ಷತ್ರದಲ್ಲಿದ್ದಾನೆ. ಆದ್ರಾ ನಕ್ಷತ್ರ ಎಂದರೆ ನೀಲಕಂಠಸ್ಯ ಕಂಠ. ರಾಹು ಇನ್ನೊಂದು ನಕ್ಷತ್ರಕ್ಕೆ ತನ್ನ ಪಥವನ್ನು ಬದಲಿಸಿದಾಗ, ಈ ವೈರಸ್ ನಿಂದ ಮುಕ್ತಿ ಸಿಗುತ್ತದೆ. ಆದ್ರಾ ನಕ್ಷತ್ರನಿಂದ ಮೃಗಶಿರಾ ನಕ್ಷತ್ರಕ್ಕೆ ರಾಹು ಹೋದಾಗ, ಅಂದರೆ, ಮೇ 12-15ರ ಅವಧಿಯಲ್ಲಿ ರಾಹು ಆ ರಾಶಿಗೆ ಸಂಚರಿಸಲಿದ್ದಾನೆ. ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಿಂದ ಕೊರೊನಾ ವೈರಸ್ ನಿಂದ ಮುಕ್ತಿ ಸಿಗಲಿದೆ. ಅಲ್ಲಿಯವರೆಗೆ ವಿಷ್ಣು ಸಹಸ್ರನಾಮ ಪಠಿಸಿ" ಎಂದು ಜ್ಯೋತಿಷಿಗಳು ಸಲಹೆಯನ್ನು ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+