ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭನಿರೋಧಕಗಳು ಪತ್ತೆ: ಟ್ವಿಟರ್ ಚರ್ಚೆ ಹೀಗಿದೆ

|
Google Oneindia Kannada News

ಬೆಂಗಳೂರು, ಡಿ. 01: ಸಿಲಿಕಾನ್ ಸಿಟಿಯ ಹಲವು ಶಾಲೆಗಳಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್‌, ಗರ್ಭನಿರೋಧಕಗಳು, ನೀರಿನ ಬಾಟಲ್‌ಗಳಲ್ಲಿ ಮದ್ಯ ಮಿಶ್ರಿತ ನೀರು ಸಿಕ್ಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

14 ಮತ್ತು 16 ರ ವಯಸ್ಸಿನ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್, ಸಿಗರೇಟ್, ಗರ್ಭನಿರೋಧಕಗಳು ಮತ್ತು ಮದ್ಯ ಪತ್ತೆಯಾದ ಬೆನ್ನಲ್ಲೇ ಟ್ವಿಟರ್‌ನಲ್ಲಿ ಅದರ ಪರ ವಿರೋಧದ ಚರ್ಚೆ ಪ್ರಾರಂಭವಾಗಿದೆ. ಈ ವಿದ್ಯಾರ್ಥಿಗಳನ್ನು ಈಗಾಗಲೇ ಕೌನ್ಸೆಲಿಂಗ್ ಸೆಷನ್‌ಗಳಿಗೆ ಕಳುಹಿಸಲಾಗಿದೆ.

ಕಾಂಡೋಮ್ಸ್‌, ಗರ್ಭಪಾತ ಮಾತ್ರೆ ಪತ್ತೆ ವಿಚಾರ: ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕುಕಾಂಡೋಮ್ಸ್‌, ಗರ್ಭಪಾತ ಮಾತ್ರೆ ಪತ್ತೆ ವಿಚಾರ: ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು

ಟ್ವಿಟರ್‌ನಲ್ಲಿ ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದು, ಅವರು ಗರ್ಭನಿರೋಧಕಗಳು ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ತಿಳಿದಿರುವುದು ಒಳ್ಳೆಯದು ಎಂದಿದ್ದಾರೆ. ಮತ್ತೆ ಕೆಲವರು ಮಕ್ಕಳಿಗೆ ಸಾಕಷ್ಟು ಲೈಂಗಿಕ ಶಿಕ್ಷಣವನ್ನು ನೀಡಬೇಕು. ಅವರು 18 ವರ್ಷ ವಯಸ್ಸಿಗೆ ಬರುವವರೆಗೂ ಅವರ ಮೇಲೆ ಕಣ್ಣಿಟ್ಟಿರಬೇಕು ಎಂದಿದ್ದಾರೆ.

ಬೆಂಗಳೂರಿಗರೇ ಪ್ರತಿಕ್ರಿಯಿಸಿ ಎಂದು ಟ್ವೀಟ್ ಮಾಡಿದ ನೆಟ್ಟಿಗ

ಬೆಂಗಳೂರಿಗರೇ ಪ್ರತಿಕ್ರಿಯಿಸಿ ಎಂದು ಟ್ವೀಟ್ ಮಾಡಿದ ನೆಟ್ಟಿಗ

ಟ್ವಿಟ್ಟರ್ ಬಳಕೆದಾರರೊಬ್ಬರು ಘಟನೆಯನ್ನು ಬರೆದು ಚರ್ಚೆಯನ್ನು ಪ್ರಾರಂಭಿಸಿದ್ದಾರೆ. "ನಿನ್ನೆ, ಬೆಂಗಳೂರಿನಾದ್ಯಂತ ಅನೇಕ ಶಾಲೆಗಳಲ್ಲಿ, ಶಾಲಾ ಅಧಿಕಾರಿಗಳು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಫೋನ್‌ ತಂದಿದ್ದಾರೆಯೇ ಎಂದು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ಸೇರಿದ ಶಾಲಾ ಬ್ಯಾಗ್‌ಗಳಲ್ಲಿ ನೋಡಿದಾಗ, ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು ಇತ್ಯಾದಿಗಳನ್ನು ಕಂಡುಕೊಂಡರು. ಈ ಬಗ್ಗೆ ನಿಮ್ಮ ಆಲೋಚನೆಯೇನು ಬೆಂಗಳೂರು..?" ಎಂದು ಪ್ರಶ್ನಿಸಿದ್ದಾರೆ.

ಲೈಂಗಿಕ ಶಿಕ್ಷಣದ ಮೂಲಕ ಸರಿ, ತಪ್ಪು ತಿಳಿಸೋಣ

ಲೈಂಗಿಕ ಶಿಕ್ಷಣದ ಮೂಲಕ ಸರಿ, ತಪ್ಪು ತಿಳಿಸೋಣ

ಮತ್ತೊಬ್ಬ ನೆಟ್ಟಿಗರು ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದು, "ನನಗೆ ಅನಿಸುವುದು ವಯಸ್ಸಿಗೆ ಅನುಗುಣವಾದ ಲೈಂಗಿಕ ಶಿಕ್ಷಣ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಈಗೀನ ಕಾಲಕ್ಕೂ ನಾವು ಬೆಳೆದ ರೀತಿಗಿಂತ ಭಿನ್ನವಾಗಿದೆ. ಯಾವುದನ್ನಾದರೂ ತಿಳಿದುಕೊಳ್ಳುವುದು, ಮತ್ತು ಅದನ್ನು ನೋಡುವುದು ತುಂಬಾ ಸುಲಭ. ನಾವು ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸೋಣ. ಅದಕ್ಕೆ ಅನುಗುಣವಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ನೀಡೋಣ. ಶಿಕ್ಷಣ ನೀಡಿ ಯಾವುದು ಸರಿ ಮತ್ತು ತಪ್ಪು ಎಂದು ತಿಳಿಸೋಣ" ಎಂದಿದ್ದಾರೆ.

ಮತ್ತೊಬ್ಬರು, ಪೋಷಕರು ಮತ್ತು ಶಾಲೆಗಳು ಮಕ್ಕಳಿಗೆ 'ಒಳ್ಳೆಯ ಅಭ್ಯಾಸಗಳು' ಮತ್ತು 'ನೈತಿಕ ಮೌಲ್ಯಗಳನ್ನು' ಕಲಿಸಬೇಕು ಎಂದಿದ್ದಾರೆ.

ಸುರಕ್ಷಿತ ಲೈಂಗಿಕತೆಯ ಅಭ್ಯಾಸ ನಡೆಯುತ್ತಿದೆ!

ಸುರಕ್ಷಿತ ಲೈಂಗಿಕತೆಯ ಅಭ್ಯಾಸ ನಡೆಯುತ್ತಿದೆ!

ಕೆಲವರು ಮಕ್ಕಳಿಗೆ ಸುಲಭವಾಗಿ ಲಭ್ಯವಿರುವ ಇಂಟರ್ನೆಟ್ ಮತ್ತು ತಂತ್ರಜ್ಞಾನವನ್ನು ದೂಷಿಸಿದ್ದಾರೆ. "ಬೇಕಾಗುವಂತಹ ವಿಷಯಗಳಿಗೆ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಮಾಡಿದ ಇಂಟರ್ನೆಟ್‌ಗೆ ಮತ್ತು ತಂತ್ರಜ್ಞಾನಗಳು ಕೂಡ ಇದಕ್ಕೆ ಕಾರಣ" ಎಂದಿದ್ದಾರೆ.

ಮತ್ತೆ ಕೆಲವರು, ತಂತ್ರಜ್ಞಾನದ ತಪ್ಪು ಎನ್ನುವುದನ್ನು ಒಪ್ಪದೆ, ಕಾಂಡೋಮ್‌ಗಳು ದೊರೆತಿರುವುದು ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಬೇಜವಾಬ್ದಾರಿಯಿಂದ ಕೆಲಸ ಮಾಡುವುದಕ್ಕಿಂತ ಇದು ಉತ್ತಮ ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳ ಅರಿವಿದೆ

ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳ ಅರಿವಿದೆ

"ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್‌ಗಳು ಮತ್ತು ಗರ್ಭನಿರೋಧಕಗಳು ಸಿಗುವುದು ಹೇಗೆ ಕೆಟ್ಟದ್ದು? ಅವರು ಅದನ್ನು ಬಳಸುತ್ತಿರುವುದು ಒಳ್ಳೆಯದೆ. ಅವರಿಗೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಅರಿವಿದೆ. ಆದರೆ, ಆಲ್ಕೋಹಾಲ್ ಮತ್ತು ಸಿಗರೇಟ್‌ಗಳು, ಮಾದಕ ದ್ರವ್ಯಗಳು ಆರೋಗ್ಯಕ್ಕೆ ಕೆಟ್ಟದು ಮತ್ತು ಸಮಾಜಕ್ಕೂ ಕೆಟ್ಟದು" ಎಂದು ಡಾ ಕವಿತಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಇನ್ನು, ಘಟನೆ ಕುರಿತು ಮಕ್ಕಳನ್ನು ದೋಷಿಸುವುದು ಅನ್ಯಾಯ, ಸರ್ಕಾರ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಿಕ್ಷಣ ತಜ್ಞರು, ವೈದ್ಯಕೀಯ ತಜ್ಞರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

English summary
What Twitter discussion says about condoms, cigarettes, contraceptives found in students' bags in bengaluru. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X