Vande Bharat Express ಪ್ರಯಾಣ ದರದ ಬಗ್ಗೆ ಜನರು ಹೇಳುವುದೇನು
ಬೆಂಗಳೂರು, ಜನವರಿ 6: ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜನಪ್ರಿಯತೆ ಹೆಚ್ಚಿದೆ. ಆದರೆ ಅದರ ಪ್ರಯಾಣ ದರ ಅಧಿಕವಾಗಿರುವುದರಿಂದ ಸಾಮಾನ್ಯ ವರ್ಗದ ಪ್ರಯಾಣಿಕರು ವಂದೇ ಭಾರತ್‌ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ಮೊದಲ ದರ್ಜೆಯ ಪ್ರಯಾಣದ ಸೌಕರ್ಯವನ್ನು ಒದಗಿಸುವ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡುವುದು ಸಾಕಷ್ಟು ಜನರನ್ನು ಪ್ರೇರೇಪಣೆ ಮಾಡಿದೆ. ಆದರೆ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣ ದರವು ದುಬಾರಿಯಾಗಿದೆ. ಇದರಿಂದ ಮುಂಬರುವ ದಿನಗಲ್ಲಿ ದಶಪಥ ಎಕ್ಸ್‌ಪ್ರೆಸ್‌ವೇ ನಿರ್ಮಾಣದೊಂದಿಗೆ ಹೆಚ್ಚಿನ ವಾಹನಗಳು ರಸ್ತೆಗಳಿಗೆ ಇಳಿಯಲಿದ್ದು, ಕಠಿಣ ಸ್ಪರ್ಧೆಯನ್ನು ಒಡ್ಡಲು ಹೊಂದಿಸಲಾದ 50% ಸೀಟುಗಳು ಖಾಲಿ ಉಳಿಯಲಿವೆ.
ಪ್ರಯಾಣಿಕರೊಂದಿಗೆ ಸಂವಾದದ ಸಮಯದಲ್ಲಿ ರೈಲಿನ ಟಿಕೆಟ್ ದರವು ಪದೇ ಪದೇ ಉದ್ಭವಿಸುವ ಸಮಸ್ಯೆಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು 515 ರೂ. ಮತ್ತು ಹಿಂದಿರುಗುವ ದಿಕ್ಕಿಗೆ 720 ರೂ. ಆಗಿದೆ ಎಂದು ಅವರು ತಿಳಿಸಿದ್ದಾರೆ. ನೈಋತ್ಯ ರೈಲ್ವೆಯ ಅಧಿಕಾರಿಗಳ ಪ್ರಕಾರ, ನವೆಂಬರ್ ತಿಂಗಳು ಪರಿಚಯಿಸಲಾದ ವಂದೇ ಭಾರತ್ ರೈಲು ಸೇವೆಯು ಬೆಂಗಳೂರು ಮತ್ತು ಚೆನ್ನೈ ನಡುವೆ ಜನಪ್ರಿಯವಾಗಿದೆ. ಸರಾಸರಿ ಸೀಟು ಸುಮಾರು 100% ನಷ್ಟು ಭರ್ತಿಯಾಗುತ್ತಿದೆ.
ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸೀಟುಗಳು 53% ಭರ್ತಿ ಆಗಿದ್ದರೆ, ಇದೇ ಹಿಂತಿರುಗುವ ದಿಕ್ಕಿನಲ್ಲಿ ಅದು 45% ಆಗಿದೆ. ಹಬ್ಬದ ದಿನಗಳು ಅಥವಾ ಕೆಲವು ವಾರಾಂತ್ಯಗಳಲ್ಲಿ ಇದು 80% ಕ್ಕೆ ಏರುತ್ತದೆ. ಆದರೆ ಸರಾಸರಿ ಶೇ. 50ರಷ್ಟು ಸೀಟುಗಳು ಖಾಲಿ ಉಳಿದಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಭರವಸೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು ಎಂದು ಡಿಎಚ್ ವರದಿ ಮಾಡಿದೆ.
ಕರ್ನಾಟಕ ರೈಲ್ವೆ ವೇದಿಕೆಯ ಕೃಷ್ಣ ಪ್ರಸಾದ್ ಮಾತನಾಡಿ, ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೇ ಪ್ರಯಾಣ ದರವನ್ನು ಪರಿಶೀಲಿಸಬೇಕಾಗಿದೆ. ಬೆಂಗಳೂರು-ಮೈಸೂರು ಮಾರ್ಗಕ್ಕೆ ಎಂದಿಗೂ ಸಾಕಷ್ಟು ರೈಲುಗಳಿಲ್ಲ. ಆದರೆ, ರೈಲ್ವೆಯು ವಂದೇ ಭಾರತ್ ರೈಲನ್ನು ಅರ್ಧ ಖಾಲಿಯಾಗಿ ಓಡಿಸಬೇಕಾಗಿಲ್ಲ. ಕನಿಷ್ಠ, 300ಕ್ಕಿಂತ ಹೆಚ್ಚು ಕಡಿಮೆ ದರದ ಎಸಿ ವರ್ಗದ ಬಸ್‌ಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗಬೇಕು ಎಂದು ಹೇಳಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಖಾಸಗಿ ವಾಹನಗಳನ್ನು ಹಿಮ್ಮೆಟ್ಟಿಸಬೇಕು. ದಶಪಥ ಎಕ್ಸ್‌ಪ್ರೆಸ್‌ವೇ ಪ್ರಯಾಣಕ್ಕೆ ತೆರೆದರೆ ಹೆಚ್ಚಿನ ಜನರು ತಮ್ಮ ಸ್ವಂತ ಕಾರುಗಳಲ್ಲಿ ಓಡಾಡುವುದನ್ನು ನಾವು ನೋಡಬಹುದು. ರೈಲ್ವೆಯು ತನ್ನ ಪ್ರಯಾಣಿಕರನ್ನು ಕಳೆದುಕೊಳ್ಳದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ವಾಣಿಜ್ಯ ಆದಾಯದ ಮೌಲ್ಯಮಾಪನ ಆಗಬೇಕು
ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಬೆಲೆಯನ್ನು ಪರಿಷ್ಕರಿಸುವ ಸಾಧ್ಯತೆಯ ಬಗ್ಗೆ ಅಂತಹ ನಿರ್ಧಾರವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗುವುದಿಲ್ಲ. ವಾಣಿಜ್ಯ ಆದಾಯವನ್ನು ಮೌಲ್ಯಮಾಪನ ಮಾಡುವಾಗ ಸಂಪೂರ್ಣ ಚೆನ್ನೈ-ಮೈಸೂರು ವಿಭಾಗದ ಆದಾಯವನ್ನು ಪರಿಗಣಿಸಲಾಗುತ್ತದೆ. ಆದಾಗ್ಯೂ, ಪ್ರಯಾಣಿಕರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ಅನುಭವ
ಬೆಂಗಳೂರಿಗೆ ಪ್ರಯಾಣಿಸುವ ಉದ್ಯಮಿ ದೀಪಕ್ ಎನ್ ಟಿ ಅವರು, "ನಾನು ವಿಮಾನದಂತಹ ಒಳಾಂಗಣದ ಸುದ್ದಿ ಮತ್ತು ವೀಡಿಯೊಗಳನ್ನು ನೋಡಿದ್ದೇನೆ. ಅದನ್ನು ಒಮ್ಮೆ ಅನುಭವಿಸಲು ಬಯಸಿದ್ದೇನು. ನಾನು ರೈಲಿನಲ್ಲಿ ನಿಯಮಿತವಾಗಿ ಪ್ರಯಾಣಿಸುವುದಿಲ್ಲ. ಆದರೆ ಈ ರೈಲಿನಲ್ಲಿ ಪ್ರಯಾಣದ ಒಂದು ಅನುಭವಕ್ಕಾಗಿ ಬಂದಿದ್ದೇನೆ ಎಂದು ಅವರು ಹೇಳಿದರು.
ವಂದೇ ಭಾರತ್‌ನ ಪ್ರಸ್ತುತ ಸಮಯಗಳು ಶತಾಬ್ದಿ ಎಕ್ಸ್‌ಪ್ರೆಸ್‌ನೊಂದಿಗೆ ಸ್ಪರ್ಧೆ ಮಾಡುತ್ತಿವೆ. ಬೆಂಗಳೂರಿನಿಂದ ವಂದೇ ಭಾರತ್ ಬೆಳಿಗ್ಗೆ ಶತಾಬ್ದಿಗೆ ಕೇವಲ 20 ನಿಮಿಷಗಳ ಮುಂಚಿತವಾಗಿ ಹೊರಡುತ್ತದೆ. ಈ ರೈಲುಗಳು ಮಧ್ಯಾಹ್ನ 15 ನಿಮಿಷಗಳ ಅಂತರದಲ್ಲಿ ಮೈಸೂರಿನಿಂದ ಹೊರಡುತ್ತವೆ. ಎರಡೂ ರೈಲುಗಳು ಒಂದಕ್ಕೊಂದು ಪೈಪೋಟಿ ನಡೆಸದಂತೆ ರೈಲ್ವೆ ಸಮಯಗಳನ್ನು ಸರಿದೂಗಿಸಬೇಕು ಎಂದು ಕೃಷ್ಣ ಪ್ರಸಾದ್ ಸಲಹೆ ನೀಡಿದರು.

ಈಗ 100 ಕಿಲೋಮೀಟರ್ ವೇಗ
ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸಲು ಸಜ್ಜುಗೊಂಡಿದ್ದರೆ, ಮೈಸೂರು-ಬೆಂಗಳೂರು ಮಾರ್ಗದಲ್ಲಿ ರೈಲು ಹಲವಾರು ನಿರ್ಬಂಧಗಳಿಂದ ಕೇವಲ 100 ಕಿಲೋಮೀಟರ್ ದಾಟಬಹುದು. ರೈಲಿನ ವೇಗವನ್ನು ಹೆಚ್ಚಿಸಲು ಹಳಿಗಳ ವಕ್ರತೆಯು ಪ್ರಮುಖ ಅಡಚಣೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಅಗತ್ಯ
ಬೆಂಗಳೂರು- ಮೈಸೂರು ವಿಭಾಗದಲ್ಲಿ ಅನುಮತಿಸಲಾದ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ. ಅದಕ್ಕಿಂತ ಹೆಚ್ಚಿನ ವೇಗ ಪಡೆಯಲು ಕೆಲವು ವಕ್ರಾಕೃತಿಗಳನ್ನು ತೆಗೆದುಹಾಕುವುದು ಮತ್ತು ಇತರವುಗಳ ತಿದ್ದುಪಡಿಯ ಅಗತ್ಯವಿರುತ್ತದೆ. ಕೆಲವು ಸ್ಥಳಗಳಲ್ಲಿ, ಇದಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಹಳಿಗಳ ಸ್ಥಿತಿ ಸುಧಾರಿಸಿದರೆ ವಂದೇ ಭಾರತ್ ರೈಲುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಅವರು ಹೇಳಿದರು.












Click it and Unblock the Notifications