ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಎಸ್ ಎಂ ಕೃಷ್ಣಗೆ ಸಿಎಂ ಎಚ್ಡಿಕೆ 'ನೀತಿಪಾಠ'

Recommended Video

      ಹಿರಿಯ ಎಸ್.ಎಂ.ಕೃಷ್ಣರಿಗೆ ಬುದ್ಧಿ ಹೇಳಿದ ಕುಮಾರಸ್ವಾಮಿ | Oneindia Kannada

      ಬೆಂಗಳೂರು, ಜೂನ್ 9: ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರೂ ಆದ ಎಸ್.ಎಂ. ಕೃಷ್ಣ ಅವರು ಮಾಧ್ಯಮಗಳ ಸ್ವಾತಂತ್ರ್ಯದ ಕುರಿತು ನೀಡಿರುವ ಹೇಳಿಕೆಯನ್ನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

      ಖಾಸಗಿ ಕನ್ನಡ ಮಾಧ್ಯಮವೊಂದರ ವಿರುದ್ದ ಕುಮಾರಸ್ವಾಮಿ ಆಕ್ರೋಶ ಹೊರಹಾಕಿರುವುದನ್ನು ಉಲ್ಲೇಖಿಸಿ, ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ನೀತಿಪಾಠ ಮಾಡುವ ಟ್ವೀಟ್ ಮಾಡಿದ್ದರು.

      ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಕುಮಾರಸ್ವಾಮಿ, ಮಾಧ್ಯಮಗಳ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮಾಡಲು ಅವಕಾಶವಿಲ್ಲ. ಕಾನೂನಿನ ಮುಂದೆ ಮುಖ್ಯಮಂತ್ರಿಯಾಗಿರಲಿ, ಪತ್ರಕರ್ತರಾಗಿರಲಿ ಎಲ್ಲರೂ ಒಂದೇ, ತಲೆಬಾಗಲೇಬೇಕು ಎಂಬುದನ್ನೂ ಸಹ ಸನ್ಮಾನ್ಯ ಕೃಷ್ಣ ಅವರು ಸಂಬಂಧಿಸಿದ ಪತ್ರಕರ್ತರ ಗಮನಕ್ಕೂ ತರಲಿ ಎಂದು ಆಶಿಸುತ್ತೇನೆ.

      What is the role of media, CM Kumaraswamy reaction on SM Krishna tweet

      ಸಂವಿಧಾನದತ್ತವಾದ ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಖಂಡಿತಾ ಗೌರವಿಸುತ್ತೇನೆ. ಆದರೆ ರಾಜ್ಯಪಾಲರು, ಮುಖ್ಯಮಂತ್ರಿ ಹುದ್ದೆಯಂತಹ ಸಂವಿಧಾನಾತ್ಮಕ ಹುದ್ದೆಯನ್ನು ಅಗೌರವದಿಂದ ಕಾಣುವ 'ಸ್ವಾತಂತ್ರ್ಯ' ಖಂಡಿತ ಇಲ್ಲ ಎನ್ನುವುದು ನನ್ನ ಸೀಮಿತ ತಿಳುವಳಿಕೆಯಲ್ಲಿರುವ ವಿಚಾರ.

      ಒಬ್ಬ ವ್ಯಕ್ತಿಯ ದುರುದ್ದೇಶಪೂರಿತ ತೇಜೋವಧೆ ಮಾಡುವ ಅಧಿಕಾರವನ್ನಂತೂ ಸಂವಿಧಾನ ಮಾಧ್ಯಮಗಳಿಗೆ ನೀಡಿಲ್ಲ. ಸರ್ಕಾರದ ಕುರಿತಾಗಲಿ, ನನ್ನ ನಡವಳಿಕೆಯ ಕುರಿತಾಗಲಿ ರಚನಾತ್ಮಕ ಟೀಕೆಗಳನ್ನು ಮಾಡಿದಾಗ ನಾನು ಅದನ್ನು ಸ್ಫೂರ್ತಿಯಿಂದ ಸ್ವೀಕರಿಸುವಷ್ಟು ಮುಕ್ತ ಮನೋಭಾವ ಹೊಂದಿದ್ದೇನೆ.

      ಆದರೆ ಮಾಧ್ಯಮಗಳು ಅನವಶ್ಯಕ ತೇಜೋವಧೆ ಮಾಡಿದಲ್ಲಿ ಕಾನೂನು ಕ್ರಮ ಅನಿವಾರ್ಯ ಎಂಬುದನ್ನು ಶ್ರೀ ಕೃಷ್ಣ ಅವರು ಅರಿತಿದ್ದಾರೆಂದು ಭಾವಿಸಿದ್ದೇನೆ. ಮುಖ್ಯಮಂತ್ರಿ ಹುದ್ದೆ ಶಾಶ್ವತ ಅಲ್ಲ ಎಂಬ ಅರಿವು ಕೂಡ ನನಗಿದೆ ಎಂಬುದನ್ನು ವಿನಮ್ರನಾಗಿ ಅವರ ಗಮನಕ್ಕೆ ತರಲು ಬಯಸುತ್ತೇನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+