ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಆದಾಯದ ಮೇಲೆ ಜಿಎಸ್ಟಿ ಪರಿಣಾಮವೇನು?

|
Google Oneindia Kannada News

ಬೆಂಗಳೂರು, ಆಗಸ್ಟ್ 03 : ರಾಷ್ಟ್ರದಾದ್ಯಂತ ಏಕರೂಪ ತೆರಿಗೆಯನ್ನು ಜಾರಿಗೆ ತರುವ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಅಂಗೀಕಾರವದ್ದು ಇನ್ನು ಮುಂದೆ ಅನುಷ್ಠಾನಕ್ಕೆ ಬರಲಿದೆ. ಅದರೊಂದಿಗೆ ಈ ಜಿಎಸ್ ಟಿ ಕರ್ನಾಟಕದ ಆದಾಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ.[ಜಿಎಸ್ಟಿ ಪರಿಣಾಮ, ಯಾವುದು ಏರಿಕೆ? ಯಾವುದು ಇಳಿಕೆ?]

ಆರಂಭದಲ್ಲಿ ಕೆಲ ರಾಜ್ಯಗಳು ಜಿಎಸ್ ಟಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ನಿರಂತರ 9 ವರ್ಷಗಳ ಚರ್ಚೆ ನಂತರ ಜಿಎಸ್ ಟಿ ಜಾರಿಗೆ ಬಂದಿದೆ. ಹಾಗಾದರೆ ಇದು ರಾಜ್ಯಗಳ ಮೇಲೆ ಯಾವ ಪರಿಣಾಮ ಬೀರುತ್ತದೆ? ನಮ್ಮ ಕರ್ನಾಟಕದ ಮೇಲೆ ಯಾವ ಬಗೆಯ ಪರಿಣಾಮ ಬೀರಲಿದೆ ಎಂಬುದರ ಮೇಲೊಂದು ಸೂಕ್ಷ್ಮ ನೋಟ ಇಲ್ಲಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜಿಎಸ್ ಟಿ ಮಸೂದೆಯನ್ನು ಸ್ವಾಗತ ಮಾಡಿದ್ದಾರೆ. 5 ವರ್ಷಗಳವರೆಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ನಷ್ಟ ಭರಿಸುತ್ತೇನೆ ಎಂದು ಮಸೂದೆ ಮಂಡನೆಗೂ ಮುನ್ನ ಭರವಸೆಯನ್ನು ನೀಡಿತ್ತು.

ಕೇಂದ್ರ ಸರ್ಕಾರದೊಂದಿಗೆ ಹಂಚಿಕೆ

ಕೇಂದ್ರ ಸರ್ಕಾರದೊಂದಿಗೆ ಹಂಚಿಕೆ

ವ್ಯಾಟ್ ಅಥವಾ ಮೌಲ್ಯವರ್ಧಿತ ತೆರಿಗೆಯಲ್ಲಿ ಅರ್ಧದದಷ್ಟು ಆದಾಯವನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಕೇಂದ್ರಕ್ಕೆ ಸಲ್ಲಿಕೆ

ಕೇಂದ್ರಕ್ಕೆ ಸಲ್ಲಿಕೆ

ಎಂಟ್ರಿ ಟ್ಯಾಕ್ಸ್: ಬೇರೆ ರಾಜ್ಯದಿಂದ ವಸ್ತುಗಳು ರಾಜ್ಯ ಪ್ರವೇಶ ಮಾಡುವ ಮುನ್ನ ಸಲ್ಲಿಕೆಯಾಗುತ್ತಿದ್ದ ಶೇ. 2 ತೆರಿಗೆ ಕೇಂದ್ರದ ಪಾಲಾಗಲಿದೆ. ಸಿ ಎಸ್ ಟಿ( ಸೆಂಟ್ರಲ್ ಸೇಲ್ಸ್ ಟ್ಯಾಕ್ಸ್): ಇದು ಸಹ ಜಿಎಸ್ ಟಿ ನಿಯಮದ ಅನ್ವಯ ಕೇಂದ್ರ ಸರ್ಕಾರದ ಪಾಲಾಗುತ್ತದೆ.

ಕೇಂದ್ರದ ಪಾಲು ದೊಡ್ಡದಿದೆ

ಕೇಂದ್ರದ ಪಾಲು ದೊಡ್ಡದಿದೆ

ಲಕ್ಷುರಿ ಟ್ಯಾಕ್ಸ್, ಮನರಂಜನಾ ತೆರಿಗೆ, ಬೆಟ್ಟಿಂಗ್ ತೆರಿಗೆ ಇವು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತವೆ.

ರಾಜ್ಯದ ಕೈಯಲ್ಲಿ

ರಾಜ್ಯದ ಕೈಯಲ್ಲಿ

ಸ್ಟಾಂಪ್ಸ್ ಮತ್ತು ನೋಂದಣಿ, ಸೇಲ್ಸ್ ಟ್ಯಾಕ್ಸ್(ಮಾರಾಟ ತೆರಿಗೆ). ಪ್ರೊಫೇಶನ್ ಟ್ಯಾಕ್ಸ್ ಮತ್ತು ಎಲೆಕ್ಟ್ರಿಸಿಟಿ ಟ್ಯಾಕ್ಸ್ ರಾಜ್ಯದ ಬೊಕ್ಕಸಕ್ಕೆ ಲಭ್ಯವಾಗುತ್ತದೆ. ಅಬಕಾರಿ ಸುಂಕದ ಅಧಿಕಾರ ರಾಜ್ಯದ ಕೈಯಲ್ಲೇ ಇರುತ್ತದೆ.

ನಷ್ಟದ ಲೆಕ್ಕ

ನಷ್ಟದ ಲೆಕ್ಕ

ಜಿಎಸ್ ಟಿ ಅನ್ವಯ (ಎಂಟ್ರಿ ಟ್ಯಾಕ್ಸ್, ಸಿಎಸ್ ಟಇ, ಬೆಟ್ಟಿಂಗ್, ಮನರಂಜನೆ ತೆರಿಗೆ) ಕಳೆದುಕೊಳ್ಳುವುದು- 5,835 ಕೋಟಿ ರು.

 ಇನ್ನು ಇದೆ

ಇನ್ನು ಇದೆ

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಮಾಡಿಕೊಳ್ಳುವುದರಿಂದ ಕಳೆದುಕೊಳ್ಳುವುದು- 7,769 ಕೋಟಿ ರು., ತೆರಿಗೆ ಹರಿವಿನಿಂದ ರಾಜ್ಯಕ್ಕೆ ನಷ್ಟ- 8556 ಕೋಟಿ ರು.(ಒಟ್ಟು ನಷ್ಟ 22,160 ಕೋಟಿ ರು.)

ಆದಾಯದ ಲೆಕ್ಕ

ಆದಾಯದ ಲೆಕ್ಕ

ಸೇವಾ ಶುಲ್ಕ ವಿಧಿಸುವುದರಿಂದ ಆದಾಯ-5, 680 ಕೋಟಿ ರು., ವಿನಾಯಿತಿಗಳನ್ನು ತಡೆದಿದ್ದಕ್ಕೆ ಸಿಗುವ ಆದಾಯ- 8, 064 ಕೋಟಿ ರು.

ಒಟ್ಟು ಲೆಕ್ಕ

ಒಟ್ಟು ಲೆಕ್ಕ

ಈ ಎಲ್ಲ ವಿವರಗಳನ್ನು ತಾಳೆ ಹಾಕಿದರೆ ಕರ್ನಾಟಕ ಜಿಎಸ್ ಟಿ ಕಾರಣಕ್ಕೆ 8,416 ಕೋಟಿ ರು. ಆದಾಯವನ್ನು ಕಳೆದುಕೊಳ್ಳಲಿದೆ.

English summary
Based on data for FY 2014-15 the impact of GST on thetax revenues for the state of Karnataka is analyzed. Netimpact for Karnataka would hence be a revenue loss of Rs 8,416 or a reduction of around 13%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X