ನಕಲಿ ದಾಖಲೆ ನೀಡಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೈತಿ ಮಾರಿಹಬ್ಬ
ಬೆಂಗಳೂರು, ಸೆಪ್ಟೆಂಬರ್, 06: ರಾಜ್ಯದಲ್ಲಿ ಬಹುತೇಕ ಮಂದಿ ಅರ್ಹರಲ್ಲದವರು ಕೂಡ ಬಿಪಿಎಲ್ ಕಾರ್ಡ್ ಪಡೆದು ಅಕ್ರಮವಾಗಿ ಪಡಿತರ ಪಡೆಯುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು. ಇದೀಗ ಇದಕ್ಕೆಲ್ಲ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ ಯಾವೆಲ್ಲ ಸೂಕ್ತ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ನಕಲಿ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಹೆಚ್ಚುವರಿ ಅಕ್ಕಿ ವಿತರಣೆ ಚರ್ಚೆ ವೇಳೆ ಸಚಿವರು ಆಗ್ರಹಿಸಿದ್ದಾರೆ. ಇದೇ ವೇಳೆ ನಕಲಿ ಕಾರ್ಡ್‌ಗಳಿಂದ ಗ್ಯಾರಂಟಿಗಳ ಮೇಲೆ ಹೊಡೆತ ಬೀಳಲಿದೆ. ಅಲ್ಲದೆ, ದೊಡ್ಡ ಮಟ್ಟದ ಸೋರಿಯಾಗಿದೆ," ಎಂದು ಆಗ್ರಹಿಸಿದ್ದಾರೆ. ಹಾಗಾದರೆ ಇದಕ್ಕೆ ಸಿಎಂ ಕೊಟ್ಟ ಉತ್ತರ ಏನು ಎಂದು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಜ್ಯದಲ್ಲಿ ನಕಲಿ ದಾಖಲೆ ನೀಡಿ ಅಕ್ರಮವಾಗಿ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು.
ರಾಜ್ಯದಲ್ಲಿ ಅಕ್ರಮ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದುಕೊಂಡಿರುವವರ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ 10,97,621 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಯಾಗಿವೆ. ಇದರಲ್ಲಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರು, 10,04,716 ಜನ 1.20 ಲಕ್ಷ ರೂಪಯಿಗಳ ಅಧಿಕ ಆದಾಯ ಹೊಂದಿರುವವರಾಗಿದ್ದಾರೆ.
4,036 ಮಂದಿ ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿರುವುದು ತಿಳಿದುಬಂದಿದೆ. ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು, ಮನೆಗಳನ್ನು ಬಾಡಿಗೆ ಕೊಟ್ಟಿರುವವರು, 7.5 ಹೆಕ್ಟೇರ್‌ಗಿಂದ ಅಧಿಕ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುವ ನಿಯಮವೇ ಇದೆ. ಇದನ್ನು ಮೀರಿ ಅವರ್ಹರು ಬಿಪಿಎಲ್ ಬಿಪಿಡಲ್ ಕಾರ್ಡನ್ನು ಪಡೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಪ್ರಹ್ಲಾದ್ ಜೋಶಿ ಆಕ್ರೋಶ: ನಾವು ಕಾಂಗ್ರೆಸ್‌ನವರ ಕಳ್ಳತನ ಪ್ರಕರಣ ಬಯಲಿಗೆ ತಂದಿದ್ದೇವೆ. ಆದರೆ ಕಾಂಗ್ರೆಸಿಗರು, ತಮ್ಮ ಕಳ್ಳತನ ಮುಚ್ಚಿ ಹಾಕಲು ಬೇರೆಯವರನ್ನು ಕಳ್ಳರು ಎಂದು ಬಿಂಬಿಸಲು ಕೋವಿಡ್ ಸ್ಕ್ಯಾಮ್ ಅಂತಾ ಬಿಂಬಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದರು.
ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದೂವರೆ ವರ್ಷ ಬಿಟ್ಟು ಈಗ ಯಾಕೆ ಕೋವಿಡ್ ಹಗರಣದ ತನಿಖೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಹೊರಗೆ ಬಿಟ್ಟಿದ್ದಾರೆ. 2021-22ರ ವರದಿ ಇದಾಗಿದೆ. ಇಲ್ಲಿವರೆಗೂ ಯಾಕೆ ಬಿಡುಗಡೆ ಮಾಡಿರಲಿಲ್ಲ? ನೀವು ಕಳ್ಳತನ ಮಾಡಿದಾಗ ನಿಮ್ಮನ್ನು ಹಿಡಿದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ಅವರೂ ಕಳ್ಳತನ ಮಾಡಿದ್ದಾರೆ ಅಂತಾ ಬಿಂಬಿಸಿ ಬಚಾವಾಗೋ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆಲ್ಲವೂ ನಡೆಯುವುದಿಲ್ಲ. ಅವರು ಏನು ತನಿಖೆ ಮಾಡುತ್ತಾರೋ ಮಾಡಲಿ, ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರೇ ಹೇಳಿದ್ದಾರೆ. ಏನು ಬೇಕಾದರೂ ತನಿಖೆ ಮಾಡಿ, ನನಗೇನು ಭಯ ಇಲ್ಲ ಅಂತಾ ಹೇಳಿದ್ದಾರೆ. ವಿಜಯೇಂದ್ರ, ಆರ್.ಅಶೋಕ್ ಅವರೂ ತನಿಖೆ ಮಾಡಲಿ ಎಂದಿದ್ದಾರೆ. ಜನಾರ್ದನ್ ರೆಡ್ಡಿ ಪ್ರಕರಣದಿಂದ ಹಿಡಿದು ಎಲ್ಲವೂ ಮುಡಾ ಹಗರಣ ಆದ ನಂತರ ಶುರುವಾಗಿವೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.












Click it and Unblock the Notifications