BJP MLA Munirathna Naidu ಬಿಜೆಪಿ ಶಾಸಕ ಮುನಿರತ್ನ ನಾಯ್ಡು ರಾಜೀನಾಮೆ, ಮುಜುಗರ ತಪ್ಪಿಸಲು ಈ ಕ್ರಮ ?

ಅತ್ಯಾಚಾರ ಆರೋಪ ಹಾಗೂ ವಿರೋಧಿಗಳ ಹನಿಟ್ರ್ಯಾಪ್‌ ಸೇರಿದಂತೆ ವಿವಿಧ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ. ಹೌದು, ರಾಜೀನಾಮೆ ನೀಡುವ ವಿಚಾರದ ಬಗ್ಗೆ ಶಾಸಕ ಮುನಿರತ್ನ ನಾಯ್ಡು ಅವರೇ ಮಾತನಾಡಿದ್ದಾರೆ. ಮುನಿರತ್ನ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ ಎಲ್ಲ ಪ್ರಕರಣಗಳ ತನಿಖೆ ಮಾಡುವುದಕ್ಕೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಶಾಸಕ ಮುನಿರತ್ನ ನಾಯ್ಡು ಪ್ರಕರಣ ಭಾರೀ ಸದ್ದು ಮಾಡಿದೆ. ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಲು ರಾಜಕೀಯ ನಾಯಕರು ಏನನ್ನು ಬೇಕಾದರೂ ಮಾಡುತ್ತಾರೆ ಎನ್ನುವ ಆರೋಪಗಳು ಇವೆ.ಆದರೆ, ಇದೀಗ ಶಾಸಕ ಮುನಿರತ್ನ ನಾಯ್ಡು ಮಾಡಿರುವ ಕುತಂತ್ರಗಳು ಬಿಜೆಪಿ ಶಾಸಕರನ್ನೇ ಬೆಚ್ಚಿ ಬೀಳಿಸಿದೆ. ಈ ರೀತಿಯೂ ಒಬ್ಬ ಶಾಸಕ ಮಾಡಬಹುದೇ. ಪ್ರಭಾವಿ ನಿರ್ಮಾಪಕ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರವನ್ನು ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಶಾಸಕನ ಈ ವರ್ತನೆ, ಸಿನಿಮೀಯ ರೀತಿಯ ಕೃತ್ಯಗಳು ಕರ್ನಾಟಕದ ಜನರನ್ನು ದಂಗು ಬಡಿಸಿದೆ. ಕರ್ನಾಟಕ ರಾಜಕೀಯದಲ್ಲಿ ಎದುರಾಳಿಯನ್ನು ಸೋಲಿಸಲು ಹನಿಟ್ರ್ಯಾಪ್ ಮಾದರಿ, ಸಿಡಿ, ವಿಡಿಯೋ ಬ್ಲ್ಯಾಕ್‌ ಮೇಲ್‌ಗಳನ್ನೆಲ್ಲ ಜನ ಕೇಳಿದ್ದಾರೆ. ಆದರೆ, ಹನಿಟ್ಯ್ರಾಪ್‌ ಮಾಡುವುದು ಎಚ್‌ಐವಿ ಸೋಂಕಿತರನ್ನು ಬಳಸಿಕೊಳ್ಳುತ್ತಿದ್ದರು ಎನ್ನುವ ಆರೋಪಗಳಿಂದ ಜನ ಭಯಭೀತರಾಗಿದ್ದಾರೆ.

What did BJP MLA Munirathna Naidu say about resigning

ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಶಾಸಕ ಈ ರೀತಿ ಮಾಡಲು ಸಾಧ್ಯವೇ ಎಂದು ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ದಾಖಲೆ ಸಹಿತ ಕೆಲವು ವಿಷಯಗಳು ಬಹಿರಂಗವಾಗುತ್ತಿದ್ದು, ಜನರು ಸಹ ಮುನಿರತ್ನ ಈ ರೀತಿ ಮಾಡಿದ್ದರೂ ಮಾಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಶಾಸಕ ಮುನಿರತ್ನ ಇದೀಗ ಎರಡು ವಾರದ ಅವಧಿಯಲ್ಲಿ ಎರಡು ಬಾರಿ ಬಂಧನಕ್ಕೆ ಒಳಪಟ್ಟಿದ್ದಾರೆ. ಅವರ ಮೇಲೆ ಕೇಳಿ ಬಂದಿರುವುದು ಅತ್ಯಂತ ಗಂಭೀರ ಆರೋಪಗಳು.ಇದೀಗ ಅವರೇ ನಾನು ಬೇಕಾದರೆ, ರಾಜೀನಾಮೆ ಕೊಡ್ತೀನಿ ಎಂದು ಹೇಳಿದ್ದಾರೆ.

ಶಾಸಕ ಮುನಿರತ್ನ ನಾಯ್ಡು ರಾಜೀನಾಮೆ ಇಂಗಿತ

ಶಾಸಕ ಮುನಿರತ್ನ ನಾಯ್ಡು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆಯೇ ಈ ವಿಷಯವನ್ನು ಮುನಿರತ್ನ ಪ್ರಸ್ತಾಪಿಸಿದ್ದಾರೆ. ನಾನು ರಾಜೀನಾಮೆ ಕೊಡುವುದಕ್ಕೆ ರೆಡಿ ಇದ್ದೀನಿ. ನನ್ನ ಜೊತೆಗಿದ್ದವರಿಂದಲೇ ಈಗ ನನ್ನ ಮೇಲೆ ಪ್ರಕರಣ ದಾಖಲಾಗ್ತಿದೆ. ಒಂದು ಪ್ರಕರಣದಲ್ಲಿ ಹೊರಗೆ ಬಂದರೆ, ಮತ್ತೊಂದರಲ್ಲಿ ಜೈಲಿಗೆ ಕಳುಹಿಸುತ್ತಿದ್ದಾರೆ. ಇದಕ್ಕೆಲ್ಲ ರಾಜಕೀಯವೇ ಕಾರಣ. ರಾಜಕೀಯದ ದುರುದ್ದೇಶದಿಂದ ನನ್ನ ಮೇಲೆ ಈ ರೀತಿ ದೂರು ದಾಖಲಿಸಲಾಗುತ್ತಿದೆ. ಇದರಿಂದ ನನಗೆ ಸಾಕಾಗಿ ಹೋಗಿದೆ ಬೇಕಾದರೆ ರಾಜೀನಾಮೆ ಕೊಡ್ತೀನಿ ಎಂದು ಶಾಸಕ ಮುನಿರತ್ನ ಹೇಳಿದ್ದಾನೆ. ಈ ಮೂಲಕ ರಾಜಕೀಯವಾಗಿ ದೂರ ಸರಿಯುವ ಮಾತನಾಡಿದ್ದಾನೆ. ಈ ಮಾತು ಕೇಳಿರುವ ಜಡ್ಜ್‌ ನಿಮ್ಮ ರಾಜೀನಾಮೆಯನ್ನು ಎಲ್ಲಿ ಕೊಡಬೇಕೋ ಅಲ್ಲಿ ಕೊಡಿ ಎಂದಿದ್ದಾರೆ.

ಈಗಾಗಲೇ ಮುನಿರತ್ನ ಮಾಡಿರುವ ಕುತಂತ್ರಗಳು ಜನರ ಮುಂದೆ ಬಯಲಾಗುತ್ತಿದೆ. ಈ ಷಡ್ಯಂತ್ರಗಳು ಎಂತವರನ್ನು ಬೆಚ್ಚಿ ಬೀಳಿಸುವಂತಿದೆ. ಮುಂದಿನ ದಿನಗಳಲ್ಲಿ ಮುನಿರತ್ನ ನಾಯ್ಡು ಜನರ ಮುಂದೆ ಹೋಗುವುದು ಬಹುದೊಡ್ಡ ಸವಾಲು. ಮುನಿರತ್ನ ನಾಯ್ಡು ಶಾಸಕನಾಗಿ ಜನರ ನಡುವೆಯೇ ಕೆಲಸ ಮಾಡಬೇಕಿದೆ. ಇದೀಗ ಈ ತರದ್ದ ಆರೋಪಗಳಿಂದ ಜನ ಚೀ ಥೂ ಎನ್ನುತ್ತಿದ್ದಾರೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಮುನಿರತ್ನ ರಾಜಕೀಯದಿಂದಲೇ ದೂರವುಳಿಯಲು ಮುಂದಾಗಿರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+