ಎಚ್ಡಿಕೆಗೆ ವಾರದ ಹಿಂದೆ ಝೀರೋ ಟ್ರಾಫಿಕ್, ಈಗ ಟ್ರಾಫಿಕ್ ಜಾಮ್ ಬಿಸಿ

ಬೆಂಗಳೂರು, ಜುಲೈ 30: ಕೇವಲ ಒಂದು ವಾರದ ಹಿಂದೆ ಝೀರೋ ಟ್ರಾಫಿಕ್ ನಲ್ಲಿ ಓಡಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಇಂದು (ಜು 30) ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡರು.

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ, ಅವರಿಗೆ ಧೈರ್ಯ ತುಂಬಲು, ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿದ್ದರು.

ಅಲ್ಲಿಂದ, ತಾವು ತಂಗುವ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ವಾಪಸ್ ತೆರಳುತ್ತಿದ್ದ ವೇಳೆ, ಗೃಹ ಕಚೇರಿ ಕೃಷ್ಣ ಎದುರುಗಡೆ ಸುಮಾರು ಐದು ನಿಮಿಷ ಕುಮಾರಸ್ವಾಮಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡರು.

Just A Week Back Zero Traffic Facility, Now HD Kumaraswamy Faced Traffic Jam

ಎಸ್ ಎಂ ಕೃಷ್ಣ ಅವರ ನಿವಾಸಕ್ಕೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಬೆಳಗ್ಗೆಯಿಂದಲೇ ಡಿ ಕೆ ಶಿವಕುಮಾರ್ ಅವರ ನಿವಾಸದಲ್ಲೇ ಇದ್ದಾರೆ. ಇದಲ್ಲದೇ, ರಾಜಕೀಯ ಮುಖಂಡರು, ಚಿತ್ರನಟ, ನಟಿಯರು ಅವರ ನಿವಾಸಕ್ಕೆ ಆಗಮಿಸುತ್ತಿರುವುದರಿಂದ, ನಿವಾಸದ ಸುತ್ತ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.

ಕಳೆದ ಮಂಗಳವಾರ, ಜುಲೈ 23ರಂದು ವಿಶ್ವಾಸಮತಯಾಚಸಿ, ಅದರಲ್ಲಿ ಸೋಲಾದ ನಂತರ, ಎಚ್ ಡಿ ಕುಮಾರಾಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಾಫೀ ಡೇ ಮಾಲೀಕ ಮತ್ತು ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ, ಸೋಮವಾರ (ಜುಲೈ 29) ಸಂಜೆಯಿಂದ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಸ್ಥಳದಿಂದ ಭಾಗದಿಂದ ನಾಪತ್ತೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+