ಫೆ.8ರ ಕರ್ನಾಟಕ ಹವಾಮಾನ ವರದಿ: ಮುಂದುವರೆದ ಚಳಿ, ಈ ರಾಜ್ಯಗಳಲ್ಲಿ ಮಳೆ ಸುರಿಯಲಿದೆ
ಬೆಂಗಳೂರು, ಫೆಬ್ರವರಿ 8: ರಾಜ್ಯದಲ್ಲಿ ಚಳಿಯ ಪ್ರಮಾಣ ಮುಂದುವರೆದಿದ್ದು, ಬೆಳಗಿನ ವೇಳೆಯ ಚಳಿ ಮೈ ನಡುಕ ಹುಟ್ಟಿಸಿದರೆ, ಮಧ್ಯಾಹ್ನದ ನಂತರ ಬಿಸಿಲಿಗೆ ಜನರು ಬಳಲಿ ಬೆಂಡಾಗುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಸಂಜೆ ವೇಳೆಗೆ ತಂಪಾದ ಗಾಳಿ ಬೀಸುತ್ತಿದೆ. ಇದರ ಜೊತೆಗೆ ಮಲೆನಾಡು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿದೆ. ಕಳೆದ ಕೆಲ ದಿನಗಳಿಂದಲೂ ರಾಜ್ಯದಲ್ಲಿ ಬೇಸಿಗೆಯ ಸುಳಿವು ಸಿಗುತ್ತಿದೆ. ಆದರೆ ಚಳಿಯ ಪ್ರಮಾಣ ಶಿವರಾತ್ರಿಯವರೆಗೂ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಮಳೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಮುಗಿದು, ಚಳಿ ಮುಂದುವರೆದಿದೆ. ಆದರೆ, ಇಂದಿನಿಂದ 2ರಿಂದ 3 ದಿನ ಹಲವು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ.

ಜಿಲ್ಲಾವಾರು ತಾಪಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್)
ಬೆಂಗಳೂರು 30-16, ಮೈಸೂರು 32-18, ಚಾಮರಾಜನಗರ 32-17, ರಾಮನಗರ 32-17, ಮಂಡ್ಯ 32-17, ಬೆಂಗಳೂರು ಗ್ರಾಮಾಂತರ 30-16, ಚಿಕ್ಕಬಳ್ಳಾಪುರ 29-15, ಕೋಲಾರ 30-15, ಹಾಸನ 31-17, ಚಿಕ್ಕಮಗಳೂರು 31-16, ದಾವಣಗೆರೆ 33-18, ಶಿವಮೊಗ್ಗ 34-18, ಕೊಡಗು 31-16, ತುಮಕೂರು 32-17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ಉಡುಪಿ 31-23, ಮಂಗಳೂರು 32-22, ಉತ್ತರ ಕನ್ನಡ 34-18, ಧಾರವಾಡ 33-18, ಹಾವೇರಿ 34-18, ಹುಬ್ಬಳ್ಳಿ 34-18, ಬೆಳಗಾವಿ 32-17, ಗದಗ 33-18, ಕೊಪ್ಪಳ 33-19, ವಿಜಯಪುರ 34-19, ಬಾಗಲಕೋಟ 34-19, ಕಲಬುರಗಿ 34-21, ಬೀದರ್ 32-18, ಯಾದಗಿರಿ 34-21, ರಾಯಚೂರ 33-21 ಮತ್ತು ಬಳ್ಳಾರಿ 33-20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉತ್ತರ ಭಾರತದಲ್ಲಿ ಇಂದಿನಿಂದ ಮಳೆ
ಫೆಬ್ರವರಿ 9ರಂದು ಪಂಜಾಬ್, ಹರಿಯಾಣ- ಚಂಡೀಗಢ- ದೆಹಲಿ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಗುಡುಗು ಮತ್ತು ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಫೆಬ್ರವರಿ 9ರಂದು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಫೆಬ್ರವರಿ 9 ಮತ್ತು 10ರಂದು ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಒಡಿಶಾದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ.
ಇಂದು ಮತ್ತು ಫೆಬ್ರವರಿ 9ರಂದು ಪಶ್ಚಿಮ ಹಿಮಾಲಯನ್ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ವ್ಯಾಪಕವಾದ ಮಳೆಯಾಗಲಿದೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಚಳಿ ಹೆಚ್ಚಾಗಲಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮುಂದಿನ 2 ದಿನಗಳಲ್ಲಿ ಒಡಿಶಾದಲ್ಲಿ ಚಳಿ ಹೆಚ್ಚಾಗಲಿದೆ. ಇಂದು, ಫೆಬ್ರವರಿ 9ರಂದು ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಮಳೆ ಅಥವಾ ಹಿಮಪಾತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರಪ್ರದೇಶದಲ್ಲಿ ತೀವ್ರ ಚಳಿ
ಇಂದು ರಾತ್ರಿಯಿಂದ ವಾಯುವ್ಯ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆ ಟ್ವೀಟ್ ಮಾಡಿದೆ. ಮುಂದಿನ ಎರಡು ದಿನಗಳ ಕಾಲ ಉತ್ತರಪ್ರದೇಶದಲ್ಲಿ ತೀವ್ರ ಚಳಿ ಮುಂದುವರಿಯುವ ಸಾಧ್ಯತೆಯಿದೆ. ಇಂದು ಹಿಮಾಲಯ ಪ್ರದೇಶದಲ್ಲಿ (ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ) ಗುಡುಗು ಮತ್ತು ಮಿಂಚು ಸಹಿತ ವ್ಯಾಪಕವಾದ ಮಳೆ ಅಥವಾ ಹಿಮ ಬೀಳುವ ನಿರೀಕ್ಷೆಯಿದೆ.
ಹಿಮಾಲಯ ತಪ್ಪಲಿನಲ್ಲಿ ಹಿಮಪಾತ
ಹಿಮಾಚಲ ಪ್ರದೇಶ, ಉತ್ತರ ರಾಜಸ್ಥಾನ, ಬಿಹಾರ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಕೆಲವು ಪ್ರದೇಶಗಳಲ್ಲಿ ಇಂದು ದಟ್ಟವಾದ ಮಂಜು ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಮುಂದಿನ 2 ದಿನಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಮುಂದಿನ 2 ದಿನ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಪ್ರದೇಶ ಮತ್ತು ಒಡಿಶಾದಲ್ಲಿ ಕೂಡ ಮಂಜು ಮುಸುಕಲಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ತಾಜಾ ಹಿಮಪಾತ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಇಂದು ತಾಜಾ ಹಿಮಪಾತ ಸಂಭವಿಸಲಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇಂದು ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ.












Click it and Unblock the Notifications