ಮುನಿಸಿಕೊಂಡ ಕೃಷ್ಣರ ಮನವೊಲಿಸುತ್ತೇವೆ: ಪರಮೇಶ್ವರ

Posted By:
Subscribe to Oneindia Kannada

ಚಿಕ್ಕಮಗಳೂರು, ಫೆಬ್ರವರಿ 3: ಕಾಂಗ್ರೆಸ್ಸಿಗೆ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ರಾಜೀನಾಮೆ ನೀಡಿರುವ ಹಿನ್ನೆಲೆ ಪಕ್ಷದಲ್ಲಿ ಬಾರಿ ಭಿನ್ನಮತ ಮನೆಮಾಡಿದ್ದು, ಎಸ್ಸೆಂ ಕೃಷ್ಣ ರವರ ಮನವೊಲಿಸುವುದಾಗಿ ಶುಕ್ರವಾರ ಗೃಹಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನು ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ಅವರ ಮನವೊಲಿಸುವುದಾಗಿ ತಿಳಿಸಿದರು.[ಎಸ್.ಎಂ ಕೃಷ್ಣ ಸುದ್ದಿಗೋಷ್ಠಿ: ಉಳಿದವರು ಕಂಡಂತೆ..]

We will change Former CM S.M.Krishna's mind says Home Minister Dr.G.Parameshwara

ಪಕ್ಷದಲ್ಲಿ ಹಿರಿಯರಿಗೆ ಅಗೌರವ ಹಾಗೂ ಕಡೆಗಣನೆ ಕಾರಣಕ್ಕಾಗಿ ಎಸ್ಸೆಂ ಕೃಷ್ಣ ಅವರು ನೊಂದು ರಾಜೀನಾಮೆ ನೀಡಿದ್ದರು. ಅದರೆ ನಾನು ಪಕ್ಷದಿಂದ ನಿವೃತ್ತಿ ಹೊಂದುತ್ತಿದ್ದೇನೆ ರಾಜಕೀಯದಿಂದಲ್ಲ ಎಂಬ ಹೇಳಿಕೆ ಹಲವು ಅನುಮಾನ ಮತ್ತು ಕುತೂಹಲವನ್ನು ಉಂಟುಮಾಡಿತ್ತು.

ಇದರ ಬೆನ್ನಲ್ಲೇ ಅನೇಕ ಕಾಂಗ್ರೆಸ್ ಹಿರಿಯ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ಕಿಡಿಕಾರಿ ಎಸ್ಸೆಂ ಕೃಷ್ಣ ಅವರೊಂದಿಗೆ ಚರ್ಚೆಯನ್ನೂ ಮಾಡಿದ್ದರು.[ಎಸ್ ಎಂ ಕೃಷ್ಣ ಅಂದ್ರೆ ನೆನಪಾಗುವ ಈ ಐದು ವಿಚಾರ]

ಪ್ರಸ್ತುತ ಎಸ್ಸೆಂ ಕೃಷ್ಣ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಗೃಹಸಚಿವ ಮತ್ತು ಇಂಧನ ಸಚಿವ ಮುಂದಾಗಿರುವುದು ಯಾವ ಆಯಾಮವನ್ನು ಪಡೆಯುತ್ತದೆ ಎಂಬುದು ಮುಂದೆ ಗೊತ್ತಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We will change Former CM S.M.Krishna's mind says Home Minister Dr.G.Parameshwara in chikkamagalur. Some days before Former Chief Minister of Karnataka and union minister in the UPA regime S M Krishna S M Krishna declared that he has quit from the party.
Please Wait while comments are loading...