ಅನರ್ಹ ಹದಿನೇಳು ಶಾಸಕರನ್ನು ದೇವರಂತೆ ನೋಡಿಕೊಳ್ಳಬೇಕಂತೆ !
ಬೆಂಗಳೂರು, ಆ 21: ಯಡಿಯೂರಪ್ಪ ಸರಕಾರದ ಮೊದಲ ಸಂಪುಟ ರಚನೆಯಲ್ಲಿ ಸ್ಥಾನ ಪಡೆಯದ ಬಾಲಚಂದ್ರ ಜಾರಕಿಹೊಳಿ, ಹೊರಗಿನಿಂದ ಬಂದವರಿಗೆ ಮೊದಲು ಮರ್ಯಾದೆ ಕೊಡಬೇಕು ಎನ್ನುವ ಅಭಿಪ್ರಾಯ ಮಂಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಬಾಲಚಂದ್ರ ಜಾರಕಿಹೊಳಿ, " ಅನರ್ಹಗೊಂಡ ಎಲ್ಲಾ ಹದಿನೇಳು ಶಾಸಕರನ್ನು ದೇವರಂತೆ ನೋಡಿಕೊಳ್ಲಬೇಕು" ಎಂದು ಹೇಳಿದರು.
Recommended Video
ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಅರಭಾವಿ ಶಾಸಕ ಬಾಲಚಂದ್ರ, ಆಶ್ಚರ್ಯಕರ ರೀತಿಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿರಲಿಲ್ಲ.

" ಅನರ್ಹಗೊಂಡ ಶಾಸಕರ ವಿಚಾರ ನ್ಯಾಯಾಲಯದಲ್ಲಿದೆ, ಅಲ್ಲಿನ ತೀರ್ಪು ಬಂದ ಕೂಡಲೇ ಇವರಿಗೆಲ್ಲಾ ನ್ಯಾಯ ಒದಗಿಸಬೇಕು. ಅವರನ್ನು ಸರಿಯಾಗಿ ನೋಡಿಕೊಂಡರೆ ಸರಕಾರ ಉಳಿಯಬಲ್ಲದು" ಎನ್ನುವ ಎಚ್ಚರಿಕೆ ಮಿಶ್ರಿತ ಮನವಿಯನ್ನು ಬಾಲಚಂದ್ರ ಜಾರಕಿಹೊಳಿ ಮಾಡಿದ್ದಾರೆ.
"ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ" ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತನ್ನದೇ ಸರಕಾರಕ್ಕೆ ನೀಡಿದ್ದ ಎಚ್ಚರಿಕೆ ಭಾರೀ ಚರ್ಚೆಗೆ ಗುರಿಯಾಗಿತ್ತು.
ಒಂದು ಕುಟುಂಬಕ್ಕೆ ಒಂದು ಸ್ಥಾನ ಎನ್ನುವ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಾಯ್ದಿರಿಸುವುದರಿಂದ, ಬಾಲಚಂದ್ರಗೆ ಸಚಿವ ಸ್ಥಾನ ತಪ್ಪಿದೆ ಎನ್ನುವ ಮಾತೂ ಚಾಲ್ತಿಯಲ್ಲಿದೆ.












Click it and Unblock the Notifications