62% ಬಜೆಟ್ ಹಣ ಬಳಸಿದ್ದೇವೆ, ಮಾಧ್ಯಮ ವರದಿಗಳಿಗೆ ಸಿಎಂ ತಿರುಗೇಟು

Subscribe to Oneindia Kannada

ಬೆಂಗಳೂರು, ಜನವರಿ 20: ಪ್ರಸ್ತುತ ಆರ್ಥಿಕ ವರ್ಷದ ಏಪ್ರಿಲ್ ನಿಂದ ಡಿಸೆಂಬರ್ ವರೆಗಿನ 9 ತಿಂಗಳಲ್ಲಿ ಕರ್ನಾಟಕ ಬಜೆಟಿನ ಕೇವಲ ಶೇಕಡಾ 50 ರಷ್ಟು ಹಣವನ್ನು ಮಾತ್ರ ಖರ್ಚು ಮಾಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಕ್ಕೆ ಟ್ವಿಟ್ಟರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಜನವರಿ 18ರಿಂದ ಫೆ.6ರ ವರೆಗೆ ರಾಜ್ಯ ಬಜೆಟ್ ಪೂರ್ವಭಾವಿ ಸಭೆ

"ಬಜೆಟ್ ಅಂದಾಜಿನ ಶೇಕಡಾ 62ರಷ್ಟು ಹಣವನ್ನು ಬಳಸಿದ್ದು, ಸರಕಾರ ಇಡುತ್ತಿರುವ ಹೆಜ್ಜೆ ಸರಿಯಾಗಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸರಕಾರಕ್ಕೆ ಜನಪರ ಜವಾಬ್ದಾರಿಗಳ ಅರಿವಿದೆ ಮತ್ತು ಆರ್ಥಿಕ ವರ್ಷದ ಅಂತ್ಯದಲ್ಲಿ ಶೇಕಡಾ 100 ಹಣವನ್ನು ಬಳಕೆ ಮಾಡಿದ ಸಾಧನೆ ಮಾಡಲಿದ್ದೇವೆ," ಎಂದು ಅವರು ಹೇಳಿದ್ದಾರೆ.

We have used 62% of the budget, Siddaramaiah angers over media reports

ಈ ಟ್ವೀಟ್ ಜತೆಗೆ ಸಿದ್ದರಾಮಯ್ಯ ವಿಸ್ತೃತ ಪ್ರಕಟಣೆಯನ್ನೂ ನೀಡಿದ್ದಾರೆ. "2016-17ರಲ್ಲಿ ಡಿಸೆಂಬರ್ ವೇಳೆಗೆ ಶೇಕಡಾ 59ರಷ್ಟು ಹಣವನ್ನು ಮಾತ್ರ ಬಳಸಲಾಗಿತ್ತು. ಆದರೆ ವರ್ಷಾಂತ್ಯಕ್ಕೆ ಈ ಪ್ರಮಾಣ ಶೇಕಡಾ 101 ಆಗಿತ್ತು. ಇದಕ್ಕೆ ಹೋಲಿಸಿದಲ್ಲಿಈ ಬಾರಿ ಹೆಚ್ಚಿನ ಅಂದರೆ ಶೇಕಡಾ 62 ಹಣವನ್ನು ಬಳಸಲಾಗಿದೆ. ಮತ್ತು ಈ ವರ್ಷವೂ ಪೂರ್ಣ ಪ್ರಮಾಣದ ಹಣವನ್ನು ಬಳಸಲಾಗುವುದು," ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಕೆಲವು ಮಾಧ್ಯಮಗಳು ಇಂದು ತಲೆಬರಹದ ಹಿಂದೆ ಬಿದ್ದಿರುವುದು ದುರದೃಷ್ಟಕರ. ಪ್ರಜಾಪ್ರಭುತ್ವದ 4 ನೇ ಸ್ಥಂಭವಾಗಿ, ಮಾಧ್ಯಮಗಳು ತಮ್ಮ ವರದಿಯಲ್ಲಿ ಮುಖ್ಯವಾಗಿ ಶ್ರದ್ಧೆಯನ್ನು ಖಾತರಿಪಡಿಸಬೇಕು; ಅದರಲ್ಲೂ ವಿಶೇಷವಾಗಿ ಆಡಳಿತ ಮತ್ತು ರಾಜ್ಯದ ಆಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ," ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Media reports have been rejected by Chief Minister Siddaramaiah. He said 62 per cent of the budget was used in the current financial year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ