Lok Sabha Elections 2024: ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ ಬಿಡ್ರಿ, ನಮಗೇನು?: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 08: ಲೋಕಸಭಾ ಚುನಾವಣೆಗಾಗಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಖಚಿತವಾಗಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಕ್ಷೇತ್ರಗಳನ್ನ ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧಾರಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ,
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ ಬಿಡ್ರಿ, ನಮಗೇನು? ಯಾರು ಮೈತ್ರಿ ಮಾಡಿಕೊಳ್ಳುತ್ತಾರೊ, ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೊ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಜನರ ಹತ್ತಿರ ಮತ ಕೇಳುತ್ತೇವೆ. ಜನರು ನಮ್ಮ ಪರವಾಗಿದ್ದಾರೆ. ನಮಗೆ ಮತ ಹಾಕ್ತಾರೆ ಎಂದು ಹೇಳಿದರು.

ಇನ್ನೂ ಮೈತ್ರಿ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮೈತ್ರಿ ಬಗ್ಗೆ ಅಧಿಕೃತ ವಾಗಿ ಬಿಜೆಪಿ ಅಧ್ಯಕ್ಷ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹೇಳಿಕೆ ನೀಡಿಲ್ಲ. ರಾಜಕೀಯವಾಗಿ ಅವರವರ ನಿಲುವುಗಳು ಅವರಿಗೆ ಬಿಟ್ಟಿದ್ದು. ನಮ್ಮದೇನೂ ತಕರಾರಿಲ್ಲ. ಕಾಂಗ್ರೆಸ್ ಬಹಳ ಬಲಿಷ್ಟವಾಗಿದೆ ಎನ್ನೋದು ಇದರಲಿ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕ್ರಮ ಅನುಷ್ಠಾನದ ಆಧಾರದ ಮೇಲೆ ನಾವು ಚುನಾವಣೆಗೆ ಹೋಗ್ತೇವೆ.ಮುಂದೆ ಏನೇನು ತೀರ್ಮಾನಗಳಾಗುತ್ತದೆಯೋ ಗೊತ್ತಿಲ್ಲ. 20 ಸೀಟುಗಿಂತ ನಾವು ಹೆಚ್ಚು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಹಿಂದೆಯೂ ಕೂಡ ಬಿಜೆಪಿ ಜೊತೆಗೆ ಸರ್ಕಾರ ಮಾಡಿದೆ. ಜಾತ್ಯಾತೀತ ಸಿದ್ದಾಂತಕ್ಕೆ ಕಟಿಬದ್ದರಾಗಿಯೇನೂ ಜೆಡಿಎಸ್ ಇಲ್ಲ. ಅನುಕೂಲ ಸಿಂಧೂ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ, ತತ್ವ ರಹಿತ ರಾಜಕಾರಣ ಜೆಡಿಎಸ್ ನದ್ದು. ಬಿಜೆಪಿಯವರ ಫಲಿತಾಂಶ ಕೂಡ ಮೋದಿ ಠಿಕಾಣಿ ಹೂಡಿದರೂ ಶೂನ್ಯ ಆಯ್ತು. ಪಾರ್ಲಿಮೆಂಟ್ ಸದಸ್ಯರೇ ಚುನಾವಣೆಗೆ ಈ ಬಾರಿ ನಿಲ್ಲಲು ಹಿಂದೇಟು ಹಾಕ್ತಿದ್ದಾರೆ, ನಾವು ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು, ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ನಾವು ಇವತ್ತು ಮುಕ್ತವಾಗಿದ್ದೇವೆ ಎಂದು ಹೇಳಿದರು.
ನಮ್ಮ ಸ್ಟ್ರಾಟಜಿ ನಾವು ಮಾಡುತ್ತೇವೆ. ಅವರು ತಮ್ಮ ಪ್ರಯತ್ನ ಮಾಡಲಿ, ಆದರೆ ಜನ ನಮ್ಮ ಜೊತೆಗೆ ಇದ್ದಾರೆ, ಆಡಳಿತ ಕೂಡ ಸುಧಾರಣೆ ಮಾಡಿ ಪರಿಣಾಮಕಾರಿ ಕೆಲಸ ನಾವು ಮಾಡ್ತಾ ಇದ್ದೇವೆ
ರಾಷ್ಟ್ರೀಯ ಚುನಾವಣೆ ಬಂದರೆ ಬೇರೆ ತರಹ ಓಟು ಮಾಡ್ತಾರೆ ಎನ್ನೋದು ಈಗ ಇಲ್ಲ. ಬಾರೀ ಭಾಷಣ ಮಾಡ್ತಾರೆ ಇವರು ಎನ್ನೋದು ಜನರಿಗೂ ಅರ್ಥವಾಗಿದೆ. ರಾಷ್ಟ್ರ ಮಟ್ಟದಲ್ಲಿ ಏನೇನೋ ವಿಷಯಾಂತರ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ತಕ್ಷಣಕ್ಕೆ ರಿಯಾಕ್ಟ್ ಮಾಡ್ತಾರೆ. ಯಾವುದು ಅಗತ್ಯವಿದೆ ಎನ್ನುವ ವಿಷಯ ಬಗ್ಗೆ ಅವರು ಬಾಯೇ ಬಿಡುವುದಿಲ್ಲ ರಾಜ್ಯದಲ್ಲಿ ಸೋಲಿನ ಬಳಿಕ ಬಿಜೆಪಿ ದಿಗ್ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಯಾರ ಮಾತು ಕೇಳಬೇಕು ಎನ್ನೋದು ಬಿಜೆಪಿ ನಾಯಕರಿಗೇ ಗೊತ್ತಾಗುತ್ತಿಲ್ಲ. ಬಿಜೆಪಿ ಯಲ್ಲಿ ಜೆಡಿಎಸ್ ನಲ್ಲಿ ಎಷ್ಟು ಜನ ಉಳಿಯುತ್ತಾರೋ ಗೊತ್ತಿಲ್ಲ, ಅವರನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ರೇವಣ್ಣ ಹೇಳಿಕೆ ಕೊಡ್ತಿರಬಹುದು. ಬಿಜೆಪಿ ಜೆಡಿಎಸ್ ನವರು ದಿಕ್ಕಾಪಾಲಾಗಿದ್ದಾರೆ, ಮೈತ್ರಿಯಿಂದ ನಮಗೆ ಸವಾಲೇನೂ ಇಲ್ಲ. 20 ಕ್ಕೂ ಹೆಚ್ಚು ಸೀಟು ನಾವು ಗೆಲ್ಲುವುದಕ್ಕೆ ಕಾಂಗ್ರೆಸ್ ಗೆ ಹೆಚ್ಚು ಅನುಕೂಲ ಆಗುವ ಸಾಧ್ಯತೆಯೇ ಇದೆ ಎಂದು ಹೇಳಿದರು.












Click it and Unblock the Notifications