'ಆದಾಯ ತೆರಿಗೆ ಇಲಾಖೆಯಿಂದ ನನ್ನ ಕುಟುಂಬದ ಫೋನ್ ಕದ್ದಾಲಿಕೆ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 6: ಆದಾಯ ತೆರಿಗೆ ಇಲಾಖೆ ತಮ್ಮ ಕುಟುಂಬ ಸದಸ್ಯರ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ. ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

'ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ'

ತಮ್ಮ ಹೆಂಡತಿ ಆಶಾ, ಪುತ್ರ ರಾಹುಲ್ ಸೇರಿದಂತೆ ನನ್ನ ವಕೀಲ, ಅವರ ಹೆಂಡತಿ ಹಾಗೂ ಸ್ನೇಹಿತರ ಫೋನ್ ಕಾಲ್ ಗಳನ್ನು ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳಿಂದ ಕದ್ದಾಲಿಕೆ ಮಾಡುತ್ತಿದೆ ಎಂದು ಎಂ.ಬಿ ಪಾಟೀಲ್ ಆರೋಪಿಸಿದ್ದು, ಈ ಬಗ್ಗೆ ಮುಖ್ಯಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ.

Water Resource Minister MB Patil's & his Family Members Phone Tapped by IT

ಕಳೆದ ಮೂರು ತಿಂಗಳಿಂದ ಪ್ರತಿ ಎರಡು ನಿಮಿಷಕ್ಕೊಮ್ಮೆ ಕಾಲ್ ಡ್ರಾಪ್ ಆಗುವುದು ಹಾಗೂ ಬೀಪ್ ಸೌಂಡ್ ಕೇಳುತ್ತಿದ್ದರಿಂದ ತಜ್ಞರನ್ನು ಕರೆಸಿ ಈ ಬಗ್ಗೆ ಪರಿಶೀಲಿಸಿದಾಗ ಫೋನ್ ಟ್ರ್ಯಾಪ್ ಆಗುತ್ತಿರುವುದು ಪತ್ತೆಯಾಗಿದೆ.

'ಯಡಿಯೂರಪ್ಪನವರಿಗೆ ವಯಸ್ಸಾಗಿದೆ ವಿಶ್ರಾಂತಿ ಪಡೆಯಲಿ'

ಇದರ ಹಿಂದೆ ಸ್ವಾಭಾವಿಕವಾಗಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಪಾಟೀಲ್ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಿದ್ದಾರೆ.

ಪ್ರಜಾಪ್ರಭತ್ವದಲ್ಲಿ ನಮ್ಮ ಖಾಸಗಿ ಚಲನವಲನವನ್ನು ಕೇಳುವುದು ಸರಿಯಲ್ಲ. ಇದಕ್ಕೆ ಹೆದುರುವುದಿಲ್ಲವೆಂದು ತಿಳಿಸಿದರು.

ಫೋನ್ ಟ್ರ್ಯಾಪ್ ಮಾಡಿರುವ ಬಗ್ಗೆ ಮಾಧ್ಯಮದ ಮುಂದೆ ಡೆಮೋ ಮಾಡಿ ತೋರಿಸುವುದಾಗಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka's Water Resources Minister M.B Patil complains to CM Siddaramaiah on alleged phone tapping by I-T sleuths.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ