ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ

ಬೆಂಗಳೂರು, ಸೆಪ್ಟೆಂಬರ್ 11 : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ರಾಮನಗರ, ತುಮಕೂರು, ಮಂಡ್ಯ, ಚನ್ನಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ರಾಮನಗರ ಜಿಲ್ಲೆಯ ಮಾಗಡಿಯಲ್ಲಿ 85, ರಾಮನಗರ ತಾಲೂಕಿನಲ್ಲಿ 79, ಕನಕಪುರದಲ್ಲಿ 56, ಚನ್ನಪಟ್ಟಣದಲ್ಲಿ 55 ಮಿ.ಮೀ ಮಳೆಯಾಗಿದೆ. ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದಿದೆ. ಸದ್ಯ, ಜಲಾಶಯದಿಂದ 17 ಸಾವಿರ ಕ್ಯೂಸೆಕ್ ನೀರನ್ನು ಅರ್ಕಾವತಿ ನದಿಗೆ ಹರಿದು ಬಿಡಲಾಗುತ್ತಿದೆ.

Water level of dams in Karnataka and rain forecast

ತುಮಕೂರು ಜಿಲ್ಲೆಯ ಕುಣಿಗಲ್, ಹುಲಿಯೂರು ದುರ್ಗ, ಚಿಕ್ಕನಾಯಕನಹಳ್ಳಿ, ಮಧುಗಿರಿಯಲ್ಲಿ ಉತ್ತಮ ಮಳೆಯಾಗಿದೆ. 17 ವರ್ಷಗಳಿಂದ ಖಾಲಿ ಇದ್ದ ಕುಣಿಗಲ್ ತಾಲೂಕಿನ ಯಲಿಯೂರು ಕೆರೆ ಒಂದೇ ದಿನದಲ್ಲಿ ಅರ್ಧದಷ್ಟು ತುಂಬಿದೆ. ಇನ್ನೂ ಎರಡು ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1795.15
ಸುಪಾ 1849.92 1793.18
ವಾರಾಹಿ 1949.50 1923.98
ಹಾರಂಗಿ 2859.00 2857.07
ಹೇಮಾವತಿ 2922.00 2890.40
ಕೆಆರ್‌ಎಸ್ 124.80 103.10
ಕಬಿನಿ 2284.00 2278.57
ಭದ್ರಾ 2158.00 2135.66
ತುಂಗಭದ್ರಾ 1633.00 1624.89
ಘಟಪ್ರಭಾ 2175.00 2153.81
ಮಲಪ್ರಭಾ 2079.50 2055.05
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.01
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+