ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಕ್ಷಿಸಿ: ಕರ್ನಾಟಕದಲ್ಲಿ ಸೇತುವೆಯ ಮೇಲೆ ಕಾರು ಚಲಾಯಿಸಿದ ಪ್ರವಾಸಿಗರು

|
Google Oneindia Kannada News

ಉತ್ತರ ಕನ್ನಡ ನವೆಂಬರ್ 1: ಜನರ ನೂಕುನುಗ್ಗಲಿನಿಂದ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಮುರಿದು ಬಿದ್ದು ಎರಡು ದಿನಗಳು ಕಳೆದು ನೂರಾರು ಜನ ಸಾವನ್ನಪ್ಪಿದ್ದಾರೆ. ಕಾಣೆಯಾದವರ ಪತ್ತೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ಕರ್ನಾಟಕದ ನದಿಯೊಂದರ ಸಣ್ಣ ತೂಗು ಸೇತುವೆಯ ಮೇಲೆ ಕೆಲವು ಪ್ರವಾಸಿಗರು ಕಾರನ್ನು ಚಲಾಯಿಸುತ್ತಿರುವ ದೃಶ್ಯ ಕಂಡುಬಂದಿದೆ. ಸ್ಥಳೀಯರು ಪ್ರವಾಸಿಗರನ್ನು ನಿಂದಿಸಿದ ತಕ್ಷಣ ಯುವಕರ ಗುಂಪು ಕಾರನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದೆ.

ಶಿವಪುರ ತೂಗು ಸೇತುವೆ ಎಂದು ಕರೆಯಲ್ಪಡುವ ಇದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿ ನಡೆದ ಸಂಪೂರ್ಣ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.

Breaking: ನ.14ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮೋರ್ಬಿ ಸೇತುವೆ ಕುಸಿತ ಪ್ರಕರಣ ವಿಚಾರಣೆ Breaking: ನ.14ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮೋರ್ಬಿ ಸೇತುವೆ ಕುಸಿತ ಪ್ರಕರಣ ವಿಚಾರಣೆ

ಸ್ಥಳೀಯರ ವಿರೋಧದ ನಡುವೆಯೂ ಯುವಕರು ಸೇತುವೆ ಮೇಲೆ ಮಾರುತಿ ಸುಜುಕಿ 800 ಕಾರನ್ನು ಓಡಿಸುವುದಾಗಿ ವಾದಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಸಾಕಷ್ಟು ವಿರೋಧದ ಬಳಿಕ ಅಂತಿಮವಾಗಿ ಇಬ್ಬರು ಪುರುಷರು ಸೇತುವೆಯ ನಿರ್ಗಮನದ ಕಡೆಗೆ ಕಾರನ್ನು ನಿಧಾನವಾಗಿ ತಳ್ಳಿದರು.

WATCH Tourists drive car on bridge in Uttara Kannada

ಪುರುಷರು ನಿಧಾನವಾಗಿ ಕಾರನ್ನು ತಳ್ಳುತ್ತಿದ್ದರೆ ಸೇತುವೆ ತೂಗಾಡುವುದನ್ನು ದೃಶ್ಯದಲ್ಲಿ ಕಾಣಬಹುದು. ಸೇತುವೆಯ ಮೇಲೆ ಜನರ ದೊಡ್ಡ ಗುಂಪು ಕಾರಿನ ಮುಂದೆ ನಿಂತಿರುವುದು ಕಂಡುಬರುತ್ತದೆ. ಈ ಮಧ್ಯೆ ಯುವಕ ಗುಂಪು ಕಾರನ್ನು ಸೇತುವೆ ಮೇಲೆ ತಂದಿದೆ. ಇದು ನಿಜಕ್ಕೂ ಸೇತುವೆಯ ಭದ್ರತೆ ಮಾತ್ರವಲ್ಲದೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದಂತೆ.

ಸೇತುವೆಯ ಮೇಲೆ ಕಾರನ್ನು ತಂದ ಪ್ರವಾಸಿಗರು ಮಹಾರಾಷ್ಟ್ರದವರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುಜರಾತ್ ಮೊರ್ಬಿ ಕೇಬಲ್ ಸೇತುವೆ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ನೂರಾರು ಜನರನ್ನು ಬಲಿ ಪಡೆದ ಈ ಘಟನೆ ಜನರ ನೂಕುನುಗ್ಗಲಿನಿಂದ ಸಂಭವಿಸಿದೆ ಎಂದು ರಾಜ್ಯದ ವಿಧಿವಿಜ್ಞಾನ ತಂಡ ಕಂಡುಹಿಡಿದಿದೆ. ಜನರ ನೂಕುನುಗ್ಗಲು ಸೇತುವೆ ಮೇಲೆ ತೀವ್ರ ಒತ್ತಡವನ್ನುಂಟುಮಾಡಿತು. ಮಾತ್ರವಲ್ಲದೆ ಕೆಲ ಪುಂಡ ಯುವಕರ ಗುಂಪು ಸೇತುವೆಯಲ್ಲಿ ಸ್ವಿಂಗ್ ಮಾಡಲು ಪ್ರಯತ್ನಿಸಿದರು. ಇದರ ವಿಡಿಯೋ ಕೂಡ ಬಹಿರಂಗಗೊಂಡಿವೆ.

WATCH Tourists drive car on bridge in Uttara Kannada

ಕಳೆದ ಏಳು ತಿಂಗಳಿಂದ ಸೇತುವೆ ನವೀಕರಣ ಕಾರ್ಯ ನಡೆಯುತ್ತಿತ್ತು. ಗುಜರಾತಿ ಹೊಸ ವರ್ಷವಾದ ಅಕ್ಟೋಬರ್ 26 ರಂದು ಇದನ್ನು ಪುನಃ ತೆರೆಯಲಾಯಿತು. ಸೇತುವೆಯ ಕೆಲವು ಹಳೆಯ ಕೇಬಲ್‌ಗಳನ್ನು ರಿನೋವೇಟರ್ ಕಂಪನಿ ಬದಲಾಯಿಸಿಲ್ಲ ಎಂದು ಮೂಲಗಳು ತಿಳಿಸಿವೆ. ವಿವಿಧ ಸಮಯಗಳಲ್ಲಿ ತೆಗೆದ ಹಳೆಯ ವಿಡಿಯೋಗಳು ಗುಜರಾತ್ ಮೊರ್ಬಿ ಸೇತುವೆಯ ಮೇಲೆ ಮೋಜಿಗಾಗಿ ಹತ್ತಾರು ಜನರು ಓಡುತ್ತಿರುವುದನ್ನು ಮತ್ತು ಜಿಗಿಯುವುದನ್ನು ತೋರಿಸುತ್ತವೆ.

English summary
Some tourists are seen driving a car on a small suspension bridge on a river in Yallapur Town in Uttara Kannada District, Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X