108 ಆಂಬ್ಯುಲೆನ್ಸ್ ಚಾಲಕ, ಸ್ಟಾಫ್‌ನರ್ಸ್ ಹುದ್ದೆಗಳು ಖಾಲಿ
ಹಾಸನ, ಡಿ.16 : 108 ಆಂಬ್ಯುಲೆನ್ಸ್ ಸೇವೆಗಾಗಿ 50 ಚಾಲಕ ಮತ್ತು 50 ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಡಿ.20ರಂದು ಅರ್ಹ ಅಭ್ಯರ್ಥಿಗಳು ಹಾಸನದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಜಿವಿಕೆ-ಇಎಂಆರ್‌ಐ ಈ ನೇರ ಸಂದರ್ಶನವನ್ನು ಆಯೋಜಿಸಿದ್ದು, ಚಾಲಕ ಹುದ್ದೆಯ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಎಸ್ಎಸ್‌ಎಲ್‌ಸಿಯೊಂದಿಗೆ ಹೆವಿ ಡ್ರೆವಿಂಗ್ ಲೈಸೆನ್ಸ್ ಹೊಂದಿದ್ದು, ಕನಿಷ್ಟ 5 ವರ್ಷಗಳ ವಾಹನ ಚಾಲನಾ ಅನುಭವ ಹೊಂದಿರಬೇಕು. ವಯೋಮಿತಿ 25 ರಿಂದ 35 ವರ್ಷಗಳು.

ಸ್ಟಾಫ್ ನರ್ಸ್ ಹುದ್ದೆಯ ಸಂದರ್ಶನಕ್ಕೆ ಆಗಮಿಸುವ ಮಹಿಳಾ ಅಭ್ಯರ್ಥಿಗಳು ಎ.ಎನ್.ಎಂ / ಜಿ.ಎನ್.ಎಂ ನರ್ಸಿಂಗ್ ಕೋರ್ಸ್ ಮುಗಿಸಿರಬೇಕು. ವಯೋಮಿತಿ 18 ರಿಂದ 25 ವರ್ಷಗಳು. [ಉದ್ಯೋಗದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಡಿಸೆಂಬರ್ 20ರಂದು ಬೆಳಗ್ಗೆ 11.00 ಗಂಟೆಯಿಂದ ಹಾನಸ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಬಿಎಸ್ಎನ್ಎಲ್ ಹಿಂಭಾಗ, ಕುವೆಂಪು ನಗರ, ಹಾಸನ ಇಲ್ಲಿಗೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಸನದ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮೀ ಅವರನ್ನು ಖುದ್ದಾಗಿ ಅಥವಾ 08172 - 268374 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.












Click it and Unblock the Notifications