Actress Ramya: ರಾಹುಲ್ ಗಾಂಧಿಗೆ ಸಪೋರ್ಟ್ ಮಾಡ್ತೇನೆ ಎಂದ ರಮ್ಯಾ
ಬೆಂಗಳೂರು, ಆಗಸ್ಟ್ 18: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಮ್ಮ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಚುನಾವಣೆಯಲ್ಲಿ ಮತದಾರರ ಐಡಿಯಲ್ಲಿ ಫೇಕ್ ಫೋಟೋಗಳಿರುವ ಬಗ್ಗೆ ಸಾಕ್ಷ್ಯ ಸಮೇತ ದಾಖಲೆಗಳನ್ನು ಒದಗಿಸಿದ್ದಾರೆ. ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ, ಇತರ ವಿಷಯಗಳತ್ತ ಗಮನ ಹರಿಸಿದೆ ಎಂದು ರಮ್ಯಾ ಅಚರು ಆಕ್ಷೇಪ ವ್ಯಕ್ತಪಡಿಸಿದರು.
ಇಂದು(ಸೋಮವಾರ) ಹೆಬ್ಬಾಳ ಜಂಕ್ಷನ್ ಅಲ್ಲಿ ನಿರ್ಮಾಣ ಮಾಡಿರುವ ನೂತನ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ ನಂತರ ಮಾಧ್ಯಮಗಳ ಜೊತೆಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಮಾತನಾಡಿ, ವೋಟರ್ ಐಡಿಯಲ್ಲಿ ಫೇಕ್ ಫೋಟೋಗಳು ಹೇಗೆ ಬಂದವು? ಮತದಾರರ ಮಾಹಿತಿ ರಿವಿಲ್ ಮಾಡೋದು ಸರಿಯಲ್ಲ ಅಂತಿದೆ. ಆದ್ರೆ ಇಲ್ಲಿಯವರೆಗೆ ಆಗಿದ್ದಾದ್ರೂ ಏನು? ಈ ಬಗ್ಗೆ ರಾಹುಲ್ ಗಾಂಧಿ ಸಾಕ್ಷ್ಯ ಸಮೇತ ತೋರಿಸಿದ್ದು ತಪ್ಪಾ? ಎಂದು ಪ್ರಶ್ನಿಸಿದರು. ಸಾಕ್ಶ್ಯ ಸಮೇತ ತೋರಿಸಿದರೂ, ಇದು ಮುಂದೆ ಆಗದಂತೆ ಏನು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸ್ಪಷ್ಟವಾಗಿ ಹೇಳಿಲ್ಲ. ಅದರ ಬದಲು ರಾಹುಲ್ ಗಾಂಧಿ ವಿರುದ್ಧವೇ ಆರೋಪಗಳನ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.

ಇದೇ ವೇಳೆ, ಹೆಬ್ಬಾಳ ಫ್ಲೈಓವರ್‌ನ ಟ್ರಾಫಿಕ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ರಮ್ಯಾ, ಹೆಬ್ಬಾಳ್ ಫ್ಲೈಓವರ್ ಅಂದ್ರೇನೆ ತುಂಬಾ ಸಮಯ ಆಗುತ್ತೆ ಅಂತಾರೆ. ಆದರೆ ಅದೇನೂ ಆಗಲ್ಲ. ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ ಅಂತ ಅಂದ್ಕೊಂಡಿದ್ದೇನೆ ಎಂದು ತಿಳಿಸಿದರು. ಹೆಬ್ಬಾಳ ಮೇಲ್ಸೇತುವೆ ಲೋಕಾರ್ಪಣೆ ಆಗಿದ್ದು ಒಳ್ಳೆಯದು. ನಾನು ಇದೇ ಏರಿಯಾದಲ್ಲಿ ಇರೋದು, ಈ ರಸ್ತೆಯಲ್ಲಿ ಓಡಾಡೋದು. ಟ್ರಾಫಿಕ್ ಕಡಿಮೆ ಆಗುತ್ತೆ. ನಗರದಲ್ಲಿ ಮೂಲಸೌಲಭ್ಯ ಕೊಡಬೇಕಾಗಿದೆ. ಮಳೆಗಾಲ ಬಂದ್ರೆ ಪಾಟ್ ಹೋಲ್ ಹೆಚ್ಚಾಗುತ್ತದೆ ಎಂದು ರಮ್ಯಾ ಅವರು ಹೇಳಿದರು.
ಇನ್ನೂ ಸೋಷಿಯಲ್ ಮೀಡಿಯಾ ಕಾಮೆಂಟ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಉತ್ತರಿಸಿ, ಇಲ್ಲಿಯವರೆಗೆ ಮೂವರು ಅರೆಸ್ಡ್ ಆಗಿದ್ದಾರೆ. ಇನ್ನು ಬಹಳಷ್ಟು ಜನ ಅರೆಸ್ಟ್ ಆಗೋದು ಬಾಕಿಯಿದೆ ಎಂದು ನಟಿ ರಮ್ಯಾ ಹೇಳಿದರು.












Click it and Unblock the Notifications