ಸಾವಿನ ನಂತರವೂ ಜೊತೆಯಾಗಲಿದ್ದಾರೆ ಅಂಬಿ-ವಿಷ್ಣು: ಕಾರಣ ಕುಮಾರಸ್ವಾಮಿ

ಬೆಂಗಳೂರು, ನವೆಂಬರ್ 26: ಅಂಬರೀಶ್‌ ಸಾವಿನ ದುಃಖದ ಸಮಯದಲ್ಲಿಯೇ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಹ ಹೊರಬಂದಿದೆ.

ಅಂಬರೀಶ್ ಅವರ ಸ್ಮಾರಕವನ್ನು ರಾಜ್‌ಕುಮಾರ್ ಅವರ ಸ್ಮಾರಕದ ಪಕ್ಕದಲ್ಲಿಯೇ ಅಂದರೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಮಾಡಲಾಗುತ್ತದೆ ಎಂದು ನಿನ್ನೆಯೇ ಕುಮಾರಸ್ವಾಮಿ ಅವರು ಘೋಷಿಸಿದ್ದರು. ಅದರ ಜೊತೆಗೆ ಇಂದು ಮತ್ತೊಂದು ಭರವಸೆ ನೀಡಿದ್ದು, ಅಂಬರೀಶ್ ಅವರ ಸ್ಮಾರಕದ ಪಕ್ಕದಲ್ಲೇ ವಿಷ್ಣುವರ್ಧನ ಅವರ ಸ್ಮಾರಕವು ನಿರ್ಮಿಸಲಾಗುವುದು ಎಂದಿದ್ದಾರೆ. ಮಂಡ್ಯದಲ್ಲಿ ಅವರು ಈ ವಿಷಯ ಹೇಳಿದ್ದಾರೆ.

ಸಿಎಂ ಅವರ ಈ ಭರವಸೆಯಿಂದ, ಕುಚಿಕು ಗೆಳೆಯರು ಮತ್ತೆ ಜೊತೆಯಾಗಲಿದ್ದಾರೆ. ವಿಷ್ಣುವರ್ಧನ್ ಅವರು ತೀರಿಕೊಂಡು ಇಷ್ಟು ವರ್ಷವಾದರೂ ಅವರ ಸ್ಮಾರಕ ನಿರ್ಣಾಣಕ್ಕೆ ತಕರಾರರುಗಳು ಕೇಳಿ ಬರುತ್ತಲೇ ಇತ್ತು. ಆದರೆ ಸಿಎಂ ಅವರು ನೀಡಿರುವ ಭರವಸೆ ವಿಷ್ಣು ಅಭಿಮಾನಿಗಳಿಗೆ ಮತ್ತೆ ಆಸೆ ಮೂಡಿಸಿದೆ.

In Pics : 'ದಿಗ್ಗಜ'ನನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿರುವ ಚಿತ್ರರಂಗ

ಬಹು ಕಾಲದಿಂದ ವಿಷ್ಣು ಸ್ಮಾರಕ್ಕೆ ಹೋರಾಟ

ಬಹು ಕಾಲದಿಂದ ವಿಷ್ಣು ಸ್ಮಾರಕ್ಕೆ ಹೋರಾಟ

ಬಹಳ ಕಾಲದಿಂದ ವಿಷ್ಣವರ್ಧನ್ ಸ್ಮಾರಕ ನಿರ್ಮಿಸುವಂತೆ ವಿಷ್ಣು ಅಭಿಮಾನಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ವಿಷ್ಣು ಅವರ ಅಂತಿಮ ಸಂಸ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ಮಾಡಲಾಗಿತ್ತು.

ಮೂವರು ದಿಗ್ಗಜರು ಒಂದೇ ಕಡೆ

ಮೂವರು ದಿಗ್ಗಜರು ಒಂದೇ ಕಡೆ

ಆದರೆ ಈಗ ಕುಮಾರಸ್ವಾಮಿ ಅವರ ನಿರ್ಣಯದಿಂದ ರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಶ್‌ ಮೂವರು ದಿಗ್ಗಜರ ಸ್ಮಾರಕಗಳು ಒಂದೇ ಕಡೆ ದರ್ಶನಕ್ಕೆ ಚಿತ್ರ ರಸಿಕರಿಗೆ ಸಿಗಲಿದೆ. ಬದುಕಿದ್ದಾಗ ಕನ್ನಡ ಚಿತ್ರರಂಗವನ್ನು ಬೆಳಗಿದ ಮಹನೀಯರು ಅಸುನೀಗಿದ ನಂತರವೂ ಒಂದೇ ಕಡೆ ನೆಲೆಲಿದ್ದಾರೆ.

ಅಂಬರೀಶ್‌ ಹೆಸರಲ್ಲಿ ಯೋಜನೆ

ಅಂಬರೀಶ್‌ ಹೆಸರಲ್ಲಿ ಯೋಜನೆ

ಅಂಬರೀಶ್‌ ಅವರ ಹೆಸರಿನಲ್ಲಿ ಹೊಸ ಯೋಜನೆಯನ್ನೂ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೇ ಸಮಯದಲ್ಲಿ ಘೋಷಿಸಿದ್ದಾರೆ. ಅಂಬರೀಶ್‌ ಅವರು ನಾಡಿಗೆ ಕೊಟ್ಟಿರುವ ಸೇವೆ, ಕಾವೇರಿ ವಿಚಾರದಲ್ಲಿ ಅವರ ಹೋರಾಟ ಗುರುತಿಸುವಂತಹದ್ದು, ಅವರ ಹೆಸರಲ್ಲಿ ರಾಜ್ಯ ಸರ್ಕಾರ ಯೋಜನೆ ಹೊರತರಲಿದೆ ಎಂದು ಅವರು ಹೇಳಿದ್ದಾರೆ.

ಅಂಬರೀಶ್‌ ಸ್ಮಾರಕ್ಕೆ ತಕರಾರು

ಅಂಬರೀಶ್‌ ಸ್ಮಾರಕ್ಕೆ ತಕರಾರು

ಅಂಬರೀಶ್‌ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲು ವಕೀಲರೊಬ್ಬರು ತಕರಾರು ಎತ್ತಿದ್ದರು. ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿಗಳು ಇದನ್ನು ಮಾಮೂಲಿ ಅರ್ಜಿಯಂತಿಯೇ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಅಂತಿಮ ಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿಯೇ ನಡೆಯಲಿದೆ. ಸ್ಮಾರಕ ನಿರ್ಮಾಣದ ಕುರಿತು ಹೈಕೋರ್ಟ್‌ ವಿಚಾರಣೆ ನಡೆಸಲಿದೆ.

ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಅಬರೀಶ್‌ ಅವರ ಪಾರ್ಥಿವ ಶರೀರದ ಮೆರವಣಿಗೆ ಈಗ ಸಾಗುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಮೂರು ಗಂಟೆ ವೇಳೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಚಿತ್ರರಂಗದ ಗಣ್ಯರು, ರಾಜಕೀಯದ ಗಣ್ಯರು ಅಂತಿಮ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+