ವಿಡಿಯೋ : ರೆಡ್ಡಿ ಮನೆಗೆ ಹೊಸ ಅತಿಥಿ; ಮುದ್ದಾದ ಹೆಸರಿಟ್ಟ ಕುಟುಂಬ

ಬೆಂಗಳೂರು, ಫೆಬ್ರವರಿ 05 : ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಮುದ್ದಾದ ಹೆಸರಿಟ್ಟು ಅವರು ಮನೆಗೆ ಬರಮಾಡಿಕೊಂಡಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಅದು ಈಗ ವೈರಲ್ ಆಗಿದೆ.

ಹೌದು, ಜನಾರ್ದನ ರೆಡ್ಡಿ ನಿವಾಸಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಈ ಕುರಿತು ಅವರು ವಿಡಿಯೋವೊಂದನ್ನು ಹಾಕಿದ್ದಾರೆ. ಹೊಸ ಅತಿಥಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಮುದ್ದಾದ ಹೆಸರನ್ನು ಸಹ ಇಟ್ಟಿದ್ದಾರೆ.

ರಾಜಕೀಯದಿಂದ ದೂರವಾಗಿರುವ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ ಆದೇಶದಂತೆ ಬಳ್ಳಾರಿಗೆ ಹೋಗದೆ ಬೆಂಗಳೂರಿನಲ್ಲಿಯೇ ಕುಟುಂಬದ ಜೊತೆ ವಾಸವಾಗಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ನೀಡುವಾಗ ನ್ಯಾಯಾಲಯ ಬಳ್ಳಾರಿಗೆ ಹೋಗದಂತೆ ಷರತ್ತು ವಿಧಿಸಿದೆ.

"ನಮ್ಮ ಮನೆಯಲ್ಲಿಯೂ ಗೋಮಾತೆ 'ವೇದಾ' ಇದ್ದಾಳೆ. ವೇದಾ ನಮ್ಮ ಮನೆಯ ಬೆಳಕು. ಕಳೆದ 5 ವರ್ಷಗಳಿಂದ ನಮ್ಮ ಮನೆಯ ಬೆಳಕು ವೇದಾ. ಗೋಮಾತೆ ವೇದಾಳನ್ನು ನನ್ನ ತಾಯಿಯಷ್ಟೇ ಗೌರವ, ಪ್ರೀತಿಯಿಂದ ಕಾಣುತ್ತೇನೆ. ಇದೀಗ ಗೋಮಾತೆ ವೇದಾ ನಿನ್ನೆ ಗಂಡು ಕರುವಿಗೆ ಜನ್ಮ ಕೊಟ್ಟಿದ್ದಾಳೆ" ಎಂದು ಜನಾರ್ದನ ರೆಡ್ಡಿ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಅರ್ಥವ್ಯವಸ್ಥೆಗೆ ಮಾತ್ರ ಆಕೆ ಸೀಮಿತವಾಗಿಲ್ಲ

ಅರ್ಥವ್ಯವಸ್ಥೆಗೆ ಮಾತ್ರ ಆಕೆ ಸೀಮಿತವಾಗಿಲ್ಲ

ಆಕೆ ಎಲ್ಲರ ಬದುಕಿಗೂ ಆಶಾಕಿರಣ. ನೆನಪಿರಲಿ ಕೇವಲ ಕೃಷಿ ಆಧಾರಿತ ಅರ್ಥವ್ಯವಸ್ಥೆಗೆ ಮಾತ್ರ ಆಕೆ ಸೀಮಿತವಾಗಿಲ್ಲ. ನಮ್ಮ ಭಾವನೆಗಳ ಭಾವವನ್ನು ಸಮರ್ಪಕವಾಗಿ ಅರ್ಥೈಸಬಲ್ಲ ಸಂಜೀವಿನಿ ಆಕೆ. ನಮಗೆ ಕಷ್ಟ ಎಂಬುದು ತಲೆದೋರಿದಾಗ ನಮ್ಮ ಬದುಕಿಗೆ ಬೆಳಕಾಗಬಲ್ಲಳು ಆಕೆ. ನಮ್ಮ ತಾಯಿ ನಮಗೆ ಹಾಲನ್ನು ಉಣಿಸುವುದನ್ನು ನಿಲ್ಲಿಸಿದಾಗ ಆಹಾರದ ಮುಂದಿನ ಹಂತ ನಮಗೆ ಪವಾಡದ ಮೂಲಕ ಲಭಿಸುವುದಲ್ಲ. ಆದೆ ಅದನ್ನು ದಯಪಾಲಿಸುವವಳು ಕರುಣಾಮೂರ್ತಿ ಗೋಮಾತೆ ಎಂದು ಜನಾರ್ದನ ರೆಡ್ಡಿ ಬರೆದುಕೊಂಡಿದ್ದಾರೆ.

ಗೋವು ನಮ್ಮ ಬಾಳಿನ ಬೆಳಕು

ಗೋವು ನಮ್ಮ ಬಾಳಿನ ಬೆಳಕು

ಒಂದಲ್ಲಾ ಒಂದು ಹಂತದಲ್ಲಿ ಆಕೆಯನ್ನು ಅವಲಂಬಿಸಿಯೇ ನಾವು ಬದುಕುತ್ತಿರುವುದು ಅಕ್ಷರಶಃ ಯಾರೂ ಅಲ್ಲಗಳೆಯಲಾಗದ ವಾಸ್ತವ ಸತ್ಯ. ನಮ್ಮ ಜೀವನವನ್ನು ಸಮರ್ಥವಾಗಿ ಜೀವಿಸಲು ಆಧಾರವಾಗಿ ನಿಂತಿರುವ ಗೋವು ನಮ್ಮ ಬಾಳಿನ ಬೆಳಕಾಗಿದ್ದಾಳೆ. ನಮ್ಮ ಬದುಕಿನ ಎರಡನೆಯ ತಾಯಿಯಾಗಿ ಗೋವು ಪರಿವರ್ತನೆಯಾಗಿದ್ದಾಳೆ. ಈ ನಿಟ್ಟಿನಲ್ಲಿ ಗೋವು ಪವಿತ್ರ ಎಂದು ರೆಡ್ಡಿ ಬಣ್ಣಿಸಿದ್ದಾರೆ.

ದೇವರನ್ನು ಕಾಣುತ್ತೇವೆ

ದೇವರನ್ನು ಕಾಣುತ್ತೇವೆ

ನಮ್ಮ ಮನೆಯಲ್ಲಿಯೂ ಗೋಮಾತೆ 'ವೇದಾ' ಇದ್ದಾಳೆ. ವೇದಾ ನಮ್ಮ ಮನೆಯ ಬೆಳಕು. ಕಳೆದ 5 ವರ್ಷಗಳಿಂದ ನಮ್ಮ ಮನೆಯ ಬೆಳಕು ವೇದಾ. ಗೋಮಾತೆ ವೇದಾಳನ್ನು ನನ್ನ ತಾಯಿಯಷ್ಟೇ ಗೌರವ, ಪ್ರೀತಿಯಿಂದ ಕಾಣುತ್ತೇನೆ. ನಾನು ಪ್ರೀತಿಯಿಂದ ವೇದಾಗೆ ಮೇವು ತಿನ್ನಿಸುತ್ತಿರುವಾಗ ಅವಳಲ್ಲಿ ದೇವರನ್ನು ಕಾಣುತ್ತೇನೆ. ಹೌದು ಮುಕ್ಕೋಟಿ ದೇವತೆಗಳ ವಾಸಸ್ಥಾನ ಗೋಮಾತೆ ಅಲ್ಲವೇ? ಎಂದು ರೆಡ್ಡಿ ತಮ್ಮ ಸ್ಟೇಟಸ್‌ನಲ್ಲಿ ಬರೆದಿದ್ದಾರೆ.

ರುದ್ರ ಎಂದು ನಾಮಕರಣ

ರುದ್ರ ಎಂದು ನಾಮಕರಣ

ಇದೀಗ ಗೋಮಾತೆ ವೇದಾ ನಿನ್ನೆ ಗಂಡು ಕರುವಿಗೆ ಜನ್ಮ ಕೊಟ್ಟಿದ್ದಾಳೆ. ಅವನಿಗೆ 'ರುದ್ರ' ಎಂದು ನಾಮಕರಣ ಮಾಡಿದ್ದೇವೆ. ವೇದಾ ನಮ್ಮ ಮನೆಯಲ್ಲಿರುವುದು ನಿಜವಾಗಿಯೂ ನಮ್ಮ ಪುಣ್ಯ! ನಮ್ಮ ಗೋ ಮಾತೆ ವೇದಾ ಎಂದು ರೆಡ್ಡಿ ಸಂತಸವನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ವೈರಲ್

ಜನಾರ್ದನ ರೆಡ್ಡಿ ಹಸುವಿನ ಬಗ್ಗೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ 518 ಶೇರ್ ಆಗಿದೆ. 187 ಕಮೆಂಟ್‌ಗಳು ಬಂದಿವೆ. 5.8ಕೆ ಜನರು ಲೈಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+