ಕರ್ನಾಟಕದ ಜಾನುವಾರುಗಳಿಗೆ ತಗುಲಿದ ಹೊಸ ವೈರಸ್: ರೈತರು ಕಂಗಾಲು

ಬೆಂಗಳೂರು, ಜುಲೈ 30: ಕರ್ನಾಟಕವಿಡೀ ಕೊರೊನಾ ವೈರಸ್ ಆತಂಕದಲ್ಲಿದ್ದರೆ, ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮ ರೋಗ(ಲಂಪಿ ಸ್ಕಿನ್ ಡಿಸೀಸ್)ದಿಂದ ರೈತರು ಕಂಗಾಲಾಗಿದ್ದಾರೆ.

Recommended Video

      North Korea claims to be 'totally free' of Coronavirus | Oneindia Kannada

      ಕೊರೊನಾ ಲಾಕ್‌ಡೌನ್‌ನಿಂದಾಗಿ ಹಾಲಿನ ವ್ಯಾಪಾರವೂ ಕಡಿಮೆಯಾಗಿತ್ತು. ಇದೀಗ ಈ ರೋಗದಿಂದಾಗಿ ಹಸುಗಳು ಹಾಲು ಕಡಿಮೆ ಕೊಡುತ್ತಿವೆ. ಎತ್ತುಗಳಿಗೆ ಉಳಿಮೆ ಮಾಡಲು ಸಾಧ್ಯವಾಗುತ್ತಿಲ್ಲ.

      ಆದರೆ ಇದು ಮಾನವನ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂಬುದು ಸಮಾಧಾನ ತಂದಿದೆ.

      A Viral Lumpy Skin Disease In Cattle Found In Two Villages Of Karnataka

      ಹಸುಗಳು ಹಾಗೂ ಎತ್ತುಗಳಿಗೆ 'ಕ್ಯಾಪ್ರಿಪಾಕ್ಸ್' ಎನ್ನುವ ವೈರಸ್‌ನಿಂದ ಈ ಕಾಯಿಲೆ ಬರುತ್ತದೆ. ಇದು ಸೊಳ್ಳೆಗಳು ಮತ್ತು ನೊಣಗಳು ಕಚ್ಚುವುದರಿಂದ ಹರಡುತ್ತದೆ. ಕಚ್ಚಿ 7 ರಿಂದ 21 ದಿನಗಳೊಳಗಾಗಿ ವೈರಸ್ ರೂಪುಗೊಳ್ಳುತ್ತದೆ. ಬಳಿಕ ಜ್ವರ ಕಾಣಿಸಿಕೊಳ್ಳುತ್ತದೆ. ಗಂಟಲಿನ ಬಳಿ ಗಟ್ಟಿಯಾದ ಗಂಟು ಗಂಟಾದ ಚರ್ಮವೇಳುತ್ತದೆ.

      ಈ ರೋಗವು ಮೊದಲು ಆಫ್ರಿಕಾದಲ್ಲಿ ಕಾಣಿಸಿಕೊಂಡಿತ್ತು, ಬಳಿಕ ಯುರೋಪ್, ಕೇರಳ, ಒಡಿಶಾದಲ್ಲೂ ಕಂಡುಬಂದಿತ್ತು. ಈಗ ಮೇ ತಿಂಗಳಿನಿಂದ ಕರ್ನಾಟಕದಲ್ಲೂ ರೋಗ ಗೋಚರವಾಗುತ್ತಿದೆ.

      ರಾಮನಗರ, ಹೊಕೋಟೆ, ಕೆಆರ್ ಪುರಂನಲ್ಲಿ ಇದೀಗ 700 ಪ್ರಕರಣಗಳು ಪತ್ತೆಯಾಗಿವೆ ಎಂದು ಪಶು ಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.

      ಕನಕಪುರದಲ್ಲಿ ಹಳ್ಳಿಕಾರ್ ತಳಿಗಳಲ್ಲಿ ರೋಗ ಹೆಚ್ಚಾಗಿ ಕಂಡುಬಂದಿದೆ. ಈ ರೋಗವು ಬೇಸಿಗೆಯ ಮಧ್ಯಭಾಗದಲ್ಲಿ ಆರಂಭವಾಗುತ್ತದೆ. ಮುಂಗಾರು ಅಂತ್ಯದೊಳಗೆ ಕಡಿಮೆಯಾಗುತ್ತದೆ. ಸೋಂಕಿತ ಹಸುಗಳನ್ನು ಐಸೊಲೇಷನ್‌ ಅಲ್ಲಿ ಇರಿಸಲಾಗಿದೆ.ಮೊದಲೇ ವೈರಸ್ ಪತ್ತೆ ಹಚ್ಚಿದರೆ ಹರಡುವುದನ್ನು ನಿಯಂತ್ರಿಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+