ಸಿದ್ದರಾಮಯ್ಯ ಮನೆ ಮುಂದೆ ಧರಣಿ ನಡೆಸುತ್ತೇನೆ ಅಂದ್ರು ಗೌಡರು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 21 : ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. 'ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದೇವಾಲಯ ಪ್ರವೇಶ ಸಂಬಂಧ ನಡೆದ ಸಂಘರ್ಷದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು' ಎಂದು ದೇವೇಗೌಡರು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, 'ಸಿಗರನಹಳ್ಳಿಯಲ್ಲಿ ದೇವಾಲಯದ ವಿವಾದ ಬಗೆಹರಿಯುವ ತನಕ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ. ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡದೆ ಹೋದರೆ ಏ.28ರಿಂದ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುತ್ತೇನೆ' ಎಂದು ಎಚ್ಚರಿಕೆ ನೀಡಿದರು. [ರೇವಣ್ಣ, ನಿಮ್ದೂ ನಿಮ್ಮ ಪತ್ನಿ ಭವಾನಿದ್ದು ಟೈಮ್ ಸರಿಯಿಲ್ಲಾ ಬಿಡಿ]

deve gowda

'ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಇದುವರೆಗೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಆದರೆ, ಎಲ್ಲಾ ಘಟನೆಗಳಿಗೂ ನಮ್ಮ ಕುಟುಂಬವೇ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಹಾಸನದಲ್ಲಿ ದಲಿತರು ಮತ್ತು ಸರ್ವಣೀಯರ ನಡುವೆ ಸಂಘರ್ಷ ಉಂಟಾಗಿದ್ದನ್ನು ನಾನು ಕಂಡಿಲ್ಲ' ಎಂದು ಗೌಡರು ಹೇಳಿದರು. [ಹನ್ಯಾಳು ಗ್ರಾಮದ ಸಚಿವ ಮಂಜುಗೆ ಬರ್ಥ್ ಡೇ ಗಿಫ್ಟ್!]

'ಸಿಗರನಹಳ್ಳಿಯಲ್ಲಿ ಗಲಭೆ ನಡೆದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರೆ ಮಾಡಿದೆ. ಆಗ ಯಾರೂ ಸ್ಪಂದಿಸಲಿಲ್ಲ. ಕೊನೆಗೆ ಗೃಹ ಸಚಿಚ ಪರಮೇಶ್ವರ ಅವರಿಗೆ ಕರೆ ಮಾಡಬೇಕಾಯಿತು. ಆದರೆ, ಕೆಂಪಯ್ಯ ಅವರಂತಹ ಸಲಹೆಗಾರರನ್ನು ಇಟ್ಟುಕೊಂಡು ಅವರು ಹೇಗೆ? ಕೆಲಸ ಮಾಡುತ್ತಾರೋ ತಿಳಿಯದು' ಎಂದರು.

ಎ.ಮಂಜು ತಿರುಗೇಟು : ದೇವೇಗೌಡರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು, 'ಸಿಗರನಹಳ್ಳಿ ದೇವೇಗೌಡರ ಹುಟ್ಟೂರು ಹರದನಹಳ್ಳಿಯಿಂದ ಕೇವಲ 5 ಕಿ.ಮೀ ಅಂತದಲ್ಲಿದೆ. ಆದರೆ, ಅವರು ಏಕೆ ಇನ್ನೂ ಗ್ರಾಮಕ್ಕೆ ಭೇಟಿ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಷಿ ದೇವಾಲಯದ ಬಾಗಿಲು ತೆರೆಯಲು ಕುಮ್ಮಕ್ಕು ಕೊಟ್ಟವರು ಯಾರು?' ಎಂದು ಮಂಜು ಕೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
JDS national resident and Former PM H.D.Deve Gowda has demanded a judicial probe into the incidents of violence at Sigaranahalli of Holenarasipur taluk in Hassan district.
Please Wait while comments are loading...